‘ಅವತಾರ್: ದಿ ವೇ ಆಫ್ ವಾಟರ್’ (Avatar: The way of Water) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಹೊಸ ಜಗತ್ತನ್ನೇ ತೆರೆದಿಟ್ಟಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಅವತಾರ್ 2’ ಭಾರತದ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟಾರೆ ಚಿತ್ರದ ಕಲೆಕ್ಷನ್ 7000 ಸಾವಿರ ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಈ ಮೂಲಕ ಸಿನಿಮಾ ಶೀಘ್ರವೇ 1 ಬಿಲಿಯನ್ ಡಾಲರ್ ಗಳಿಕೆ ಮಾಡಲಿದೆ. ಈಗ ಭಾರತದಲ್ಲಿ ಈ ಸಿನಿಮಾದ ಟಿಕೆಟ್ ದರ ಇಳಿಸಲು ಡಿಸ್ನಿ (Disney) ಚಿಂತನೆ ನಡೆಸಿದೆ ಎನ್ನಲಾಗಿದೆ. ಸೋಮವಾರದಿಂದ ಈ ನಿಯಮ ಜಾರಿಗೆ ಬರುವ ಸೂಚನೆ ಇದೆ.
ಜನರು ಚಿತ್ರಮಂದಿರಕ್ಕೆ ಬರದೆ ಇರಲು ಟಿಕೆಟ್ ದರ ಹೆಚ್ಚಳವೇ ಕಾರಣ ಎಂಬುದು ಅನೇಕರ ವಾದ. ಇದನ್ನು ಒಪ್ಪುವ ಘಟನೆ ಕೂಡ ನಡೆಯಿತು. ಸಿನಿಮಾ ದಿನ ಆಚರಣೆ ವೇಳೆ ಟಿಕೆಟ್ ದರವನ್ನು 75 ರೂಪಾಯಿ ನಿಗದಿ ಮಾಡಲಾಯಿತು. ಆ ದಿನ ಬಹುತೇಕ ಮಲ್ಟಿಪ್ಲೆಕ್ಸ್ಗಳು ತುಂಬಿ ತುಳುಕಿದವು. ಆ ಸಂದರ್ಭದಲ್ಲಿ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ಇದೇ ತಂತ್ರವನ್ನು ‘ಅವತಾರ್ 2’ ಮಾಡಲು ಹೊರಟಿದೆ.
ಸದ್ಯ ಹಲವು ಚಿತ್ರಮಂದಿರಗಳಲ್ಲಿ ‘ಅವತಾರ್ 2’ ಟಿಕೆಟ್ ದರ ಕೈಗೆಟಕುವ ರೀತಿಯಲ್ಲಿ ಇಲ್ಲ. ವಾರದ ದಿನಗಳಲ್ಲೂ ‘ಅವತಾರ್ 2’ ಚಿತ್ರದ ಟಿಕೆಟ್ ಬೆಲೆ 300ರಿಂದ ಆರಂಭವಾಗಿ 1000 ರೂಪಾಯಿವರೆಗೆ ಇದೆ. ಇದರಿಂದ ಅನೇಕರು ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಹೀಗಾಗಿ 3ಡಿ ವರ್ಷನ್ನ ಟಿಕೆಟ್ ದರವನ್ನು 150 ರೂಪಾಯಿಗೆ ಇಳಿಕೆ ಮಾಡಿ, 3ಡಿ ಗ್ಲಾಸ್ಗೆ ಹೆಚ್ಚುವರಿಯಾಗಿ 20ರಿಂದ 50 ರೂಪಾಯಿ ಮಾತ್ರ ಚಾರ್ಜ್ ಮಾಡುವಂತೆ ತನ್ನ ಸ್ಥಳೀಯ ಹಂಚಿಕೆದಾರರಿಗೆ ಡಿಸ್ನಿ ಸೂಚನೆ ನೀಡುವ ಸಾಧ್ಯತೆ ಇದೆ. ಇದರಿಂದ 200 ರೂಪಾಯಿಗೆ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ವೀಕ್ಷಿಸಬಹುದು.
ಇದನ್ನೂ ಓದಿ: BBK 9 FInale: ಟ್ವಿಸ್ಟ್ ಕೊಟ್ಟ ಬಿಗ್ ಬಾಸ್; ಈ ಬಾರಿ ಭಾನುವಾರ ನಡೆಯಲ್ಲ ಫಿನಾಲೆ
ಹೀಗಾದಲ್ಲಿ ವಾರದ ದಿನಗಳಲ್ಲೂ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಕ್ಕೆ ಬರಲಿದ್ದಾರೆ. ಇದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚಲಿದೆ. ಈಗಾಗಲೇ ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ 300 ಕೋಟಿ ರೂಪಾಯಿ ತಲುಪಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಬಂದಿರುವುದರಿಂದ ಚಿತ್ರಕ್ಕೆ ಹೆಚ್ಚು ಲಾಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ