ಅಚ್ಚರಿಗಳ ಲೋಕವಾಯಿತು ‘ಅವತಾರ್ 2’ ಸಿನಿಮಾ ಟ್ರೇಲರ್; ಹೊಸ ಜಗತ್ತು ಪರಿಚಯಿಸಿದ ಜೇಮ್ಸ್ ಕ್ಯಾಮೆರಾನ್

‘ಅವತಾರ್​: ದಿ ವೇ ಆಫ್​ ವಾಟರ್​’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗಿದೆ. ‘ಅವತಾರ್​’ ಸಿನಿಮಾ ಸಂಪೂರ್ಣ ಕಾಡಿನ ಹಿನ್ನೆಲೆಯಲ್ಲಿ ಸಾಗಿತ್ತು. ಈ ಚಿತ್ರದ ಕಥೆ ನೀರಿನ ಹಿನ್ನೆಲೆಯಲ್ಲಿ ಸಾಗಲಿದೆ.

ಅಚ್ಚರಿಗಳ ಲೋಕವಾಯಿತು ‘ಅವತಾರ್ 2’ ಸಿನಿಮಾ ಟ್ರೇಲರ್; ಹೊಸ ಜಗತ್ತು ಪರಿಚಯಿಸಿದ ಜೇಮ್ಸ್ ಕ್ಯಾಮೆರಾನ್
ಅವತಾರ್
Updated By: ರಾಜೇಶ್ ದುಗ್ಗುಮನೆ

Updated on: Nov 03, 2022 | 7:54 AM

ವಿಶ್ವ ಸಿನಿಮಾ ಜಗತ್ತಲ್ಲಿ ಜೇಮ್ಸ್ ಕ್ಯಾಮೆರಾನ್ (James Cameron)​ ನಿರ್ದೇಶನದ ‘ಅವತಾರ್’ ಸಿನಿಮಾ ಮಾಡಿದ ದಾಖಲೆಗಳು ತುಂಬಾನೇ ವಿಶೇಷ. ಈ ಚಿತ್ರದ ಕಲೆಕ್ಷನ್ ದಾಖಲೆಯನ್ನು ಮುರಿಯಲು ವಿಶ್ವದ ಯಾವ ಚಿತ್ರಗಳಿಂದಲೂ ಸಾಧ್ಯವಾಗಿಲ್ಲ. ಈಗ ‘ಅವತಾರ್’ ಸೀಕ್ವೆಲ್ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಜೇಮ್ಸ್ ಕ್ಯಾಮೆರಾನ್​ ಮತ್ತೊಂದು ಹೊಸ ಲೋಕದೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರ ‘ಅವತಾರ್’ ಕಲೆಕ್ಷನ್ ದಾಖಲೆ ಮುರಿಯಲಿದೆಯೇ ಎಂಬ ಕುತೂಹಲ ಮೂಡಿದೆ.

‘ಅವತಾರ್​: ದಿ ವೇ ಆಫ್​ ವಾಟರ್​’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗಿದೆ. ‘ಅವತಾರ್​’ ಸಿನಿಮಾ ಸಂಪೂರ್ಣ ಕಾಡಿನ ಹಿನ್ನೆಲೆಯಲ್ಲಿ ಸಾಗಿತ್ತು. ಈ ಚಿತ್ರದ ಕಥೆ ನೀರಿನ ಹಿನ್ನೆಲೆಯಲ್ಲಿ ಸಾಗಲಿದೆ. ಟ್ರೇಲರ್​ನಲ್ಲಿ ಬರುವ ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 3ಡಿಯಲ್ಲಿ ಈ ಸಿನಿಮಾ ನೋಡಬೇಕು ಎಂದು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ
Titanic Movie: ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್​’ ಸಿನಿಮಾ; ಇಲ್ಲಿದೆ ವಿವರ
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರ 100 ಕೋಟಿ ರೂಪಾಯಿ ಗಳಿಸಿದ ‘ಸ್ಪೈಡರ್​ ಮ್ಯಾನ್​’  
ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

‘ಅವತಾರ್​: ದಿ ವೇ ಆಫ್​ ವಾಟರ್​’ ಸಿನಿಮಾದ ಟ್ರೇಲರ್​ನಲ್ಲಿ ಹೊಸ ಲೋಕವೇ ಸೃಷ್ಟಿ ಆಗಿದೆ. ಚಿತ್ರ ವಿಚಿತ್ರ ಪ್ರಾಣಿಗಳನ್ನು ಪರಿಚಯಿಸಲಾಗಿದೆ. ಇದು ಸಿನಿಪ್ರಿಯರಿಗೆ ಥ್ರಿಲ್ ನೀಡಿದೆ. ಕ್ರಿಸ್​​ಮಸ್ ಪ್ರಯುಕ್ತ ಈ ಚಿತ್ರ ಡಿಸೆಂಬರ್ 16ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಐದು ಸಿನಿಮಾಗಳು ‘ಅವತಾರ’ ಸರಣಿಯಿಂದ ಹೊರ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳು ಹಿಡಿದಿವೆ. ‘ಅವತಾರ್ 2’ ಜತೆಗೆ ಇನ್ನುಳಿದ ಮೂರು ಪಾರ್ಟ್​​ಗಳ ರಿಲೀಸ್ ಡೇಟ್ ಈ ಮೊದಲು ಘೋಷಣೆ ಮಾಡಲಾಗಿತ್ತು. ‘ಅವತಾರ್ 3’ 2024ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ‘ಅವತಾರ್ 4’ ಡಿಸೆಂಬರ್ 18, 2026ರಂದು ರಿಲೀಸ್ ಆಗುತ್ತಿದೆ. ‘ಅವತಾರ್ 5’ 2028ರ ಡಿಸೆಂಬರ್ 22ರಂದು ಬಿಡುಗಡೆ ಆಗುತ್ತಿದೆ.


ಇದನ್ನೂ ಓದಿ: Avatar: ಮತ್ತೆ ರಿಲೀಸ್​ ಆಗುತ್ತಿದೆ ‘ಅವತಾರ್​’ ಸಿನಿಮಾ; ಈ ಬಾರಿ 2 ವಾರ ಮಾತ್ರ ಪ್ರದರ್ಶನ

2009ರಲ್ಲಿ ಬಂದ ‘ಅವತಾರ್​’ ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಿತ್ತು. ಪ್ರತಿ ಬಾರಿ ಮರು ಬಿಡುಗಡೆ ಆದಾಗಲೂ ಈ ಹಾಲಿವುಡ್ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದ ಉದಾಹರಣೆ ಇದೆ. ಈಗ ‘ಅವತಾರ್​ 2’ ಕೂಡ ಇದೇ ರೀತಿಯ ಮೋಡಿ ಮಾಡಲಿದೆಯೇ ಎಂಬುದು ಸದ್ಯದ ಕುತೂಹಲ.