Bernard Hill: ‘ಟೈಟಾನಿಕ್’, ‘ಗಾಂಧಿ’ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದ ಬರ್ನಾರ್ಡ್ ಹಿಲ್ ನಿಧನ
ಭಾನುವಾರ ಮುಂಜಾನೆ ಬರ್ನಾರ್ಡ್ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಕುಟುಂಬ ಖಚಿತಪಡಿಸಿದೆ. ಅವರು ಸಾಯುವ ಸಂದರ್ಭದಲ್ಲಿ ಮಗ ಗೇಬ್ರಿಲ್ ಜೊತೆಯಲ್ಲೇ ಇದ್ದ. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
‘ಟೈಟಾನಿಕ್’, ‘ಲಾರ್ಡ್ ಆಫ್ ರಿಂಗ್ಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಹಾಲಿವುಡ್ ನಟ ಬರ್ನಾರ್ಡ್ ಹಿಲ್ (Bernard Hill) ಅವರು ಭಾನುವಾರ (ಮೇ 5) ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. 1997ರಲ್ಲಿ ರಿಲೀಸ್ ಆಗಿ ಆಸ್ಕರ್ ಗೆದ್ದ ‘ಟೈಟಾನಿಕ್’ ಸಿನಿಮಾದಲ್ಲಿ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಪಾತ್ರ ಮಾಡಿದ್ದರು. ಅದೇ ರೀತಿ ‘ಲಾರ್ಡ್ ಆಫ್ ರಿಂಗ್ಸ್’ ಸಿನಿಮಾದಲ್ಲಿ ಕಿಂಗ್ ಥಿಯೋಡನ್ ಪಾತ್ರ ಮಾಡಿದ್ದರು.
1975ರಲ್ಲಿ ಬರ್ನಾರ್ಡ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಇಟ್ ಕುಡ್ ಹ್ಯಾಪನ್ ಟು ಯು’ ಸಿನಿಮಾದಲ್ಲಿ ಅವರು ನಟಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 1982ರಲ್ಲಿ ರಿಲೀಸ್ ಆದ ‘ಗಾಂಧಿ’ ಸಿನಿಮಾದಲ್ಲಿ ಅವರು ಪಾತ್ರ ಒಂದನ್ನು ಮಾಡಿದ್ದರು. ಇದನ್ನು ಬ್ರಿಟನ್ ನಿರ್ಮಾಣ ಸಂಸ್ಥೆ ನಿರ್ಮಿಸಿತ್ತು. ಅವರಿಗೆ 1982ರಲ್ಲಿ ರಿಲೀಸ್ ಆದ ಬಿಬಿಸಿ ಸೀರಿಯಲ್ ‘ಬಾಯ್ಸ್ ಫ್ರಮ್ ಬ್ಲಾಕ್ಸ್ಟಫ್’ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು.
“I go to my fathers, in whose mighty company, i shall not now feel ashamed…”
Goodbye Théoden King
Rip Bernard Hill#rip #bernardhill #lordoftherings #titanic #theoden pic.twitter.com/jFisMpeEfP
— DeRpYsiTH (@DerpyDarth0) May 5, 2024
Bernard Hill was a cracking actor. A real shame 😔 #BernardHill#Gizajob pic.twitter.com/NTZZi6cjCm
— Jon Wardell (@jonboywardell) May 5, 2024
ಭಾನುವಾರ ಮುಂಜಾನೆ ಬರ್ನಾರ್ಡ್ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಕುಟುಂಬ ಖಚಿತಪಡಿಸಿದೆ. ಅವರು ಸಾಯುವ ಸಂದರ್ಭದಲ್ಲಿ ಮಗ ಗೇಬ್ರಿಲ್ ಜೊತೆಯಲ್ಲೇ ಇದ್ದ. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಹಾಲಿವುಡ್ ಚಿತ್ರದ ರಿಮೇಕ್? ಮೂಡಿದೆ ಅನುಮಾನ
ಬರ್ನಾಡ್ ಸಾವಿಗೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಸಾವಿನ ನಂತರ ಅವರು ಚಿತ್ರರಂಗಕ್ಕೆ ಹಾಗೂ ರಂಗಭೂಮಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. 2015ರ ಬಳಿಕ ಅವರು ಬಣ್ಣದ ಲೋಕದಿಂದ ದೂರವೇ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:43 am, Mon, 6 May 24