ಇದು ಜೋಕ್ ಅಲ್ಲ ತಾನೇ; ಆಸ್ಕರ್ ರೇಸ್‌ನಲ್ಲಿ ‘ಕಂಗುವ’ ಹಾಗೂ ‘ಆಡುಜೀವಿತಂ’
ಸೂರ್ಯ ನಟನೆಯ ‘ಕಂಗುವ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗದಿದ್ದರೂ, ಈಗ ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದಿವೆ. ಇದರ ಜೊತೆಗೆ, ಇತರ ಭಾರತೀಯ ಚಿತ್ರಗಳಾದ ಸಂತೋಷ್, ಸ್ವತಂತ್ರ್ಯ ವೀರ ಸಾವರ್ಕರ್, ಆಡು ಜೀವಿತಂ, ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ಮತ್ತು ಗರ್ಲ್ಸ್ ವಿಲ್ ಬಿ ಗರ್ಲ್ಸ್ ಕೂಡ ಆಸ್ಕರ್ ರೇಸ್‌ನಲ್ಲಿ ಸ್ಪರ್ಧಿಸುತ್ತಿವೆ. ಒಟ್ಟು 217 ಚಿತ್ರಗಳು ಈ ರೇಸ್‌ನಲ್ಲಿವೆ, ಮತ್ತು ಜನವರಿ 17 ರಂದು ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.
ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿರುವ ‘ಕಂಗುವ’ ಸಿನಿಮಾ ಈಗ ಆಸ್ಕರ್ ರೇಸ್ನಲ್ಲಿದೆ. ಈ ಸಿನಿಮಾ ಮಾತ್ರವಲ್ಲ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದ ‘ಆಡು ಜೀವಿತಂ’ ಕೂಡ ಆಸ್ಕರ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಯಾವ ಸಿನಿಮಾಗಳು ಸ್ಥಾನ ಪಡೆದಿವೆ? ಇವುಗಳು ಸ್ಥಾನ ಪಡೆದಿರೋದು ಯಾವ ಕ್ಯಾಟೆಗೆರಿಯಲ್ಲಿ? ಆ ಬಗ್ಗೆ ಈ ಸ್ಟೋರಿಯಲ್ಲಿ ವಿವರ ಇದೆ.
ಭಾರತದಿಂದ ಪ್ರತಿ ವರ್ಷ ಒಂದು ಚಿತ್ರವನ್ನು ಆಸ್ಕರ್ ಲಿಸ್ಟ್ಗೆ ಕಳುಹಿಸಲಾಗುತ್ತದೆ. ಈ ವರ್ಷ ಭಾರತದಿಂದ ‘ಲಾಪತಾ ಲೇಡೀಸ್’ ಚಿತ್ರವನ್ನು ಕಳುಹಿಸಲಾಗಿತ್ತು. ಆದರೆ, ಈಗಾಗಲೇ ಸಿನಿಮಾ ರೇಸ್ನಿಂದ ಹೊರ ಬಿದ್ದಿದೆ. ಈಗ ಭಾರತದ ಇನ್ನೂ ಕೆಲವು ಸಿನಿಮಾಗಳು ರೇಸ್‌ನಲ್ಲಿ ಇವೆ. ‘ಬೆಸ್ಟ್ ಪಿಕ್ಚರ್’ ವಿಭಾಗದಲ್ಲಿ ‘ಆಡುಜೀವಿತಂ’ ಸಿನಿಮಾ ಇದೆ.
ಉಳಿದಂತೆ ಭಾರತದ ಸಿನಿಮಾಗಳಾದ ‘ಸಂತೋಷ್’ (ಹಿಂದಿ), ‘ಸ್ವತಂತ್ರ್ಯ ವೀರ ಸಾವರ್ಕರ್’, ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ (ಮಲಯಾಳಂ-ಹಿಂದಿ), ‘ಗರ್ಲ್ಸ್ ವಿಲ್ ಬಿ ಗರ್ಲ್ಸ್’ (ಹಿಂದಿ-ಇಂಗ್ಲಿಷ್) ಸಿನಿಮಾಗಳು ಈ ಸಾಲಿನಲ್ಲಿ ಇವೆ. ಸೂರ್ಯ ನಟನೆಯ ‘ಕಂಗುವ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಈ ಚಿತ್ರವೂ ಆಸ್ಕರ್ ಓಟದಲ್ಲಿ ಇರೋದು ಅನೇಕರಿಗೆ ಅಚ್ಚರಿ ತಂದಿದೆ. ‘ಇದು ಜೋಕ್ ಅಲ್ಲ ತಾನೇ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
BREAKING: Kanguva ENTERS oscars 2025🏆 pic.twitter.com/VoclfVtLBL
— Manobala Vijayabalan (@ManobalaV) January 7, 2025
ಈ ರೇಸ್‌ನಲ್ಲಿ 217 ಸಿನಿಮಾಗಳು ಇವೆ. ವೋಟಿಂಗ್ ಮೂಲಕ ಮುಂದಿನ ಹಂತಕ್ಕೆ ಸಿನಿಮಾನ ಕೊಂಡೊಯ್ಯಲಾಗುತ್ತದೆ. ಜನವರಿ 8ರಿಂದ 12ರವರೆಗೆ ವೋಟ್ ಮಾಡಲು ಅವಕಾಶ ಇದ್ದು, ಅಕಾಡೆಮಿಯ ಸದಸ್ಯರಿಗೆ ವೋಟ್ ಮಾಡಲು ಅವಕಾಶ ಇದೆ. ಈ ಮೊದಲು ಮಲಯಾಳಂನ ‘2018’ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಇತ್ತು. ಆದರೆ, ಚಿತ್ರ ಆಸ್ಕರ್ ಗೆಲ್ಲಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ‘ಲಾಪತಾ ಲೇಡೀಸ್’ ಹೊರಗೆ, ಆಸ್ಕರ್ ರೇಸ್‌ನಲ್ಲಿ ಉಳಿದ ಭಾರತೀಯ ಸಿನಿಮಾಗಳು ಯಾವುವು?
ಜನವರಿ 17ರಂದು ಆಸ್ಕರ್ನ ಅಂತಿಮ ಪಟ್ಟಿ ಹೊರ ಬೀಳಲಿದೆ. ಈ ವರ್ಷ ಮಾರ್ಚ್ 2ರಂದು ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮ ನಡೆಯಲಿದೆ. ಅಮೆರಿಕದ ಹಾಲಿವುಡ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಜರುಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.