AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kim Kardashian: ವಿಶ್ವದ ಅತಿ ದುಬಾರಿ ಹ್ಯಾಂಡ್​ಬ್ಯಾಗ್​ ಹಿಡಿದು ಬಂದ ನಟಿ; ಇದರ ಬೆಲೆ 3 ಕೋಟಿ ರೂಪಾಯಿಗೂ ಹೆಚ್ಚು; ಅಂಥದೇನಿದೆ ಇದರಲ್ಲಿ?

Kim Kardashian Handbag: ಪ್ರತಿಷ್ಠಿತ ಕಂಪನಿಯೊಂದರ ಬ್ಯಾಗ್​ ಇದು. ಇದರಲ್ಲಿ ಬಂಗಾರ ಮತ್ತು ವಜ್ರದಿಂದ ಮಾಡಿದ ವಿನ್ಯಾಸ ಇದೆ. ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಖರೀದಿಸಿದ್ದಾರೆ.

Kim Kardashian: ವಿಶ್ವದ ಅತಿ ದುಬಾರಿ ಹ್ಯಾಂಡ್​ಬ್ಯಾಗ್​ ಹಿಡಿದು ಬಂದ ನಟಿ; ಇದರ ಬೆಲೆ 3 ಕೋಟಿ ರೂಪಾಯಿಗೂ ಹೆಚ್ಚು; ಅಂಥದೇನಿದೆ ಇದರಲ್ಲಿ?
ಕಿಮ್​ ಕರ್ದಾಶಿಯನ್​
ಮದನ್​ ಕುಮಾರ್​
|

Updated on: Jul 30, 2023 | 1:17 PM

Share

ಅಮೆರಿಕದ ನಟಿ, ಮಾಡೆಲ್​, ಉದ್ಯಮಿ ಕಿಮ್​ ಕರ್ದಾಶಿಯನ್​ (Kim Kardashian) ಅವರು ಆಗಾಗ ಸುದ್ದಿ ಆಗುತ್ತಾರೆ. ಅವರು ಹೆಚ್ಚು ಗಮನ ಸೆಳೆಯುವುದೇ ಫ್ಯಾಷನ್​​ನ ಕಾರಣಕ್ಕೆ. ಕಿಮ್​ ಕರ್ದಾಶಿಯನ್​ ಏನು ಧರಿಸುತ್ತಾರೆ? ಅವರ ಕಲೆಕ್ಷನ್​ನಲ್ಲಿ ಏನೆಲ್ಲ ವಸ್ತುಗಳಿವೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಇದೆ. ಫ್ಯಾಷನ್​ ವಿಚಾರದಲ್ಲಿ ಅವರು ಅನೇಕ ಬಗೆಯ ಪ್ರಯೋಗಗಳನ್ನು ಮಾಡುತ್ತಾ ಇರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕವೂ ಗಮನ ಸೆಳೆಯುತ್ತಾರೆ. ಈಗ ಕಿಮ್​ ಕರ್ದಾಶಿಯನ್​ ಹಿಡಿದಿರುವ ಒಂದು ಬ್ಯಾಗ್​ ಬಗ್ಗೆ ದೊಡ್ಡದಾಗಿ ಸುದ್ದಿ ಆಗುತ್ತಿದೆ. ಅಚ್ಚರಿ ಎಂದರೆ ಇದನ್ನು ಪ್ರಪಂಚದ ಅತಿ ದುಬಾರಿ ಹ್ಯಾಂಡ್​ಬ್ಯಾಗ್​ (World’s most expensive Handbag) ಎಂದು ಕರೆಯಲಾಗುತ್ತಿದೆ. ಇದರ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿಗೂ ಹೆಚ್ಚು.

ಇತ್ತೀಚೆಗೆ ಕಿಮ್​ ಕರ್ದಾಶಿಯನ್​ ಅವರು ಜಪಾನ್​ಗೆ ತೆರಳಿದ್ದರು. ಫುಟ್​ಬಾಲ್​ ಪಂದ್ಯ ನೋಡಲು ಬಂದಿದ್ದ ಅವರು ಒಂದು ಬ್ಯಾಗ್​ ಹಿಡಿದುಕೊಂಡಿದ್ದರು. ಆ ಬ್ಯಾಗ್​ನ ಫೋಟೋ ವೈರಲ್​ ಆಗಿದೆ. ಬರೋಬ್ಬರಿ 3 ಕೋಟಿ 12 ಲಕ್ಷದ 61 ಸಾವಿರ ರೂಪಾಯಿ ನೀಡಿ ಕಿಮ್​ ಕರ್ದಾಶಿಯನ್​ ಅವರು ಈ ಬ್ಯಾಗ್​ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಕೇಳಿ ನೆಟ್ಟಿಗರು ಹೌಹಾರಿದ್ದಾರೆ. ನಟಿಯ ಶ್ರೀಮಂತಿಕೆ ನೋಡಿ ಜನರು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಇದು ಎಂಥ ಬ್ಯಾಗ್​? ಇದರಲ್ಲಿ ಅಂಥ ವಿಶೇಷತೆ ಏನಿದೆ ಎಂದು ಇಂಟರ್​ನೆಟ್​ನಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ಖ್ಯಾತ ನಟಿಯ ರೀತಿ ದೇಹ ಪಡೆಯಲು 40 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಯುವತಿ; ಕಡೆಗೂ ಆಗಿದ್ದೇನು?

ಪ್ರತಿಷ್ಠಿತ ಹರ್ಮೆಸ್​ ಕಂಪನಿಯ ಬ್ಯಾಗ್​ ಇದು. ಇದರಲ್ಲಿ ಬಂಗಾರ ಮತ್ತು ವಜ್ರದಿಂದ ಮಾಡಿದ ವಿನ್ಯಾಸ ಇದೆ. ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಖರೀದಿಸಿದ್ದಾರೆ. ಅಂಥ ಎಕ್ಸ್​ಕ್ಲೂಸೀವ್​ ಗ್ರಾಹಕರಿಗಾಗಿ ಮಾತ್ರ ಇದನ್ನು ತಯಾರಿಸಲಾಗಿದೆ. ಈ ಹ್ಯಾಂಡ್​ಬ್ಯಾಗ್​ ಹೊಂದಿರುವುದೇ ಒಂದು ಪ್ರತಿಷ್ಠೆಯ ವಿಷಯ. ಆ ಕಾರಣದಿಂದ ಕೆಲವು ಸೆಲೆಬ್ರಿಟಿಗಳು ಇದನ್ನು ಖರೀದಿಸಿದ್ದಾರೆ. ಈಗಾಗಲೇ ಎಲ್ಲ ಬ್ಯಾಗ್​ಗಳು ಸೋಲ್ಡ್​ ಔಟ್​ ಆಗಿವೆ. ಬೇಕು ಎಂದರೂ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ!

ಇದನ್ನೂ ಓದಿ: Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್​ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್​

ಸೆಲೆಬ್ರಿಟಿಗಳಿಗೆ ಇಂಥ ವಸ್ತುಗಳ ಬಗ್ಗೆ ವಿಶೇಷವಾದ ಕ್ರೇಜ್​ ಇರುತ್ತದೆ. ತಾವು ಬಳಸುವ ಕಾಸ್ಟ್ಯೂಮ್​, ಆಭರಣ, ಎಲೆಕ್ಟ್ರಾನಿಕ್​ ವಸ್ತುಗಳು, ಬ್ಯಾಗ್​, ಶೂ, ಚಪ್ಪಲಿ ಸೇರಿದಂತೆ ಎಲ್ಲದರಲ್ಲೂ ಪ್ರತಿಷ್ಠೆಯನ್ನು ನೋಡುವ ಮಂದಿ ಇದ್ದಾರೆ. ಆ ಮಾತಿಗೆ ಕಿಮ್​ ಕರ್ದಾಶಿಯನ್​ ಹಿಡಿದು ಬಂದಿರುವ ಈ ಹ್ಯಾಂಡ್​ ಬ್ಯಾಗ್​ ಸಾಕ್ಷಿ ಎನ್ನಬಹುದು. ಕಿಮ್​ ಕರ್ದಾಶಿಯನ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 363 ಮಿಲಿಯನ್​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ