ಕೆಲವು ಸಿನಿಮಾ ಅವಕಾಶಗಳು ಆಕಸ್ಮಿಕವಾಗಿ ಬರುತ್ತವೆ. ಕೆಲವು ಅವಕಾಶಗಳು ಕೆಲವು ನಟರ ಭಾಗ್ಯದ ಬಾಗಿಲನ್ನು ತೆರೆಯುತ್ತವೆ. ದರ್ಶನ್ಗೆ (Darshan) ‘ಮೆಜೆಸ್ಟಿಕ್’, ಸುದೀಪ್ಗೆ (Sudeep) ‘ಹುಚ್ಚ’ ಹೀಗೆ ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದು ಸಿನಿಮಾ ಅವಕಾಶ ಅವರ ಭಾಗ್ಯದ ಬಾಗಿಲು ತೆರೆಯುತ್ತದೆ. ಜೀವನವನ್ನೇ ಬದಲು ಮಾಡಿಬಿಡುತ್ತದೆ. ಆದರೆ ಒಬ್ಬ ನಟರಿದ್ದಾರೆ. ಅವರು ತಮ್ಮ ಮನೆ ಬಾಗಿಲಿಗೆ ಬಂದ ಸಿನಿಮಾ ಅವಕಾಶವನ್ನು ನಿರಾಕರಿಸಿ ಕಳೆದುಕೊಂಡ ಹಣ ಈಗಿನ ಮೊತ್ತದ ಪ್ರಕಾರ ಸರಿ ಸುಮಾರು 3700 ಕೋಟಿ. ವಿಶ್ವದ ಇನ್ಯಾವುದೇ ನಟ ಇಷ್ಟು ದೊಡ್ಡ ಮೊತ್ತದ ಹಣವನ್ನು ನಿರಾಕರಿಸಿಲ್ಲವೇನೋ. ಯಾರು ಆ ನಟ, ನಿರಾಕರಿಸಿದ ಸಿನಿಮಾ ಯಾವುದು?
2009ರಲ್ಲಿ ಬಿಡುಗಡೆ ಆದ ‘ಅವತಾರ್’ ಸಿನಿಮಾದ ಬಗ್ಗೆ ಕೇಳದ ಸಿನಿಮಾ ಪ್ರೇಮಿ ಇಲ್ಲವೆನಿಸುತ್ತದೆ. ಆ ವರೆಗೆ ತೆರೆಯ ಮೇಲೆ ಯಾರೂ ನೋಡದ ಅದ್ಭುತ ಪ್ರಪಂಚವನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ತೋರಿಸಿದ್ದರು. ಅದಾಗಲೇ ‘ಟೈಟಾನಿಕ್’, ‘ಟರ್ಮಿನೇಟರ್’ ಇನ್ನಿತರೆ ಸಿನಿಮಾಗಳನ್ನು ನಿರ್ದೇಶಿಸಿದ್ದ ಜೇಮ್ಸ್ ಕ್ಯಾಮರನ್, ‘ಅವತಾರ್’ ಸಿನಿಮಾದ ಚಿತ್ರಕತೆ ಪೂರ್ಣಗೊಂಡ ಬಳಿಕ, ಸಿನಿಮಾದ ಮುಖ್ಯ ಪಾತ್ರ ಜೇಕ್ ಸೂಲಿ ಪಾತ್ರಕ್ಕೆ ಆಯ್ಕೆ ಮಾಡಿದ್ದು ನಟ ಮ್ಯಾಟ್ ಡೆಮನ್ ಅನ್ನು. ನಟ ಮ್ಯಾಟ್ ಡೇಮನ್ಗೆ ಕರೆ ಮಾಡಿದ್ದ ಜೇಮ್ಸ್ ಕ್ಯಾಮರನ್, ‘ಅವತಾರ್’ ಸಿನಿಮಾ ಮಾಡುತ್ತಿದ್ದೇನೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದರೆ ಸಿನಿಮಾದಿಂದ ಬರುವ ಲಾಭದ 10% ಹಣ ನಿಮಗೆ ನೀಡುತ್ತೇನೆ ಎಂದಿದ್ದರು.
ಇದನ್ನೂ ಓದಿ:ಹಾಲಿವುಡ್ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?
ಆದರೆ ಮ್ಯಾಟ್ ಡೆಮನ್ಗೆ ‘ಅವತಾರ್’ ಸಿನಿಮಾ ಅನಿಮೆಷನ್ ಸಿನಿಮಾ, ತಮ್ಮ ನಟನೆ ಜನರಿಗೆ ಗೊತ್ತಾಗುವುದಿಲ್ಲ ಎಂದೆನಿಸಿತಂತೆ ಅಲ್ಲದೆ ಸಿನಿಮಾದ ನಾಯಕ ಅಂಗವಿಕಲ ಇನ್ನೂ ಕೆಲವು ಸಮಸ್ಯೆಗಳು ಕಾಣಿಸಿದ ಜೊತೆ ಮ್ಯಾಟ್ ಡೆಮನ್ ಆಗ ‘ಬಾರ್ನೆ’ ಸಿನಿಮಾ ಸರಣಿಯಲ್ಲಿ ಬ್ಯುಸಿಯಾಗಿದ್ದರಂತೆ. ಹೀಗಾಗಿ ಆ ಜೇಕ್ ಸೂಲಿ ಪಾತ್ರದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಬಳಿಕ ಆ ಪಾತ್ರ ಹೋಗಿದ್ದು ಸ್ಯಾಮ್ ವರ್ತಿಂಗ್ಟನ್ಗೆ.
‘ಅವತಾರ್’ ಅಂಥಹಾ ಐತಿಹಾಸಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ಮ್ಯಾಟ್ ಡೆಮನ್ ಅನುಭವಿಸಿದ ನಷ್ಟ ಎಷ್ಟು ಗೊತ್ತೆ? ಬರೋಬ್ಬರಿ 3600 ಕೋಟಿ ರೂಪಾಯಿಗಳು (ಈಗಿನ ಮೌಲ್ಯದಲ್ಲಿ). ‘ಅವತಾರ್’ ಸಿನಿಮಾದಲ್ಲಿ ನಟಿಸಿದರೆ ಬಂದ ಲಾಭದಲ್ಲಿ 10% ಹಣವನ್ನು ನೀಡುವುದಾಗಿ ಜೇಮ್ಸ್ ಕ್ಯಾಮರನ್ ಹೇಳಿದ್ದರಂತೆ. ‘ಅವತಾರ್’ ಸಿನಿಮಾ 2009ರ ಸಮಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಸರಿಸುಮಾರು 3 ಬಿಲಿಯನ್ ಡಾಲರ್ ಅಂದರೆ ಈಗಿನ ಲೆಕ್ಕದಲ್ಲಿ 36 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು. ಆ ಮೊತ್ತದಲ್ಲಿ 10% ಅಂದರೆ 3600 ಕೋಟಿ ರೂಪಾಯಿಗಳು.
ಮ್ಯಾಟ್ ಡೆಮನ್ ತನ್ನ ಈ ವರೆಗಿನ ಎಲ್ಲ ಸಿನಿಮಾಗಳಿಂದಲೂ ಗಳಿಸದಷ್ಟು ಸಂಭಾವನೆಯನ್ನು ‘ಅವತಾರ್’ ಸಿನಿಮಾ ಒಂದರಿಂದಲೇ ಗಳಿಸಿಬಿಟ್ಟಿರುತ್ತಿದ್ದರು. ಆದರೆ ದುರಾದೃಷ್ಟವಶಾತ್ ಮ್ಯಾಟ್ ಡೆಮನ್ ‘ಅವತಾರ್’ ಸಿನಿಮಾದ ಅವಕಾಶವನ್ನು ನಿರಾಕರಿಸಿದರು. ಈಗ ಪಶ್ಚಾತಾಪ ಪಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ