Oscar nominations 2023: ಆಸ್ಕರ್ ನಾಮಿನೇಷನ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಭಾರತೀಯರಲ್ಲಿ ಕುತೂಹಲ

|

Updated on: Jan 24, 2023 | 12:16 PM

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್​​ವಿನ್ ಥಿಯೇಟರ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ ಏಳು ಗಂಟೆ ಕಾರ್ಯಕ್ರಮ ಆರಂಭ ಆಗಲಿದೆ.

Oscar nominations 2023: ಆಸ್ಕರ್ ನಾಮಿನೇಷನ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಭಾರತೀಯರಲ್ಲಿ ಕುತೂಹಲ
ಆರ್​ಆರ್​ಆರ್​ ಸಿನಿಮಾದಲ್ಲಿ ಜೂ.ಎನ್​ಟಿಆರ್​
Follow us on

ಈ ಬಾರಿಯ ಆಸ್ಕರ್ (Oscar 2023)  ಸಾಕಷ್ಟು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಭಾರತದ ‘ಆರ್​ಆರ್​ಆರ್​’, ‘ಕಾಂತಾರ’ (Kantara Movie) ಮೊದಲಾದ ಸಿನಿಮಾಗಳು ಅರ್ಹತೆ ಸುತ್ತಿಗೆ ಸ್ಥಾನ ಪಡೆದುಕೊಂಡಿದ್ದು. ಈಗ ಆಸ್ಕರ್​ ನಾಮಿನೇಷನ್​ ಪಟ್ಟಿ ರಿಲೀಸ್​ ಮಾಡುವ ಸಮಯ. ಇಂದು (ಜನವರಿ 24) ಆಸ್ಕರ್ ನಾಮಿನೇಷನ್ ಲಿಸ್ಟ್​ ಅನೌನ್ಸ್​ ಆಗಲಿದೆ. ಭಾರತದ ಯಾವ ಚಿತ್ರಗಳು ಆಯ್ಕೆ ಆಗಲಿವೆ ಎನ್ನುವ ಕುತೂಹಲ ಮೂಡಿದೆ.

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್​​ವಿನ್ ಥಿಯೇಟರ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ ಏಳು ಗಂಟೆ (ಅಮೆರಿಕದ ಕಾಲಮಾನ ಬೆಳಗ್ಗೆ 8.30)​ ಕಾರ್ಯಕ್ರಮ ಆರಂಭ ಆಗಲಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ಹಾಗೂ ನಟಿ ವಿಭಾಗದಲ್ಲಿ ಯಾವ ಸಿನಿಮಾಗಳು ನಾಮನಿರ್ದೇಶನಗೊಳ್ಳುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಇದೆ.

ಭಾರತದ ‘ಆರ್​ಆರ್​ಆರ್​​’ ‘ಚೆಲ್ಲೋ ಶೋ’, ‘ಆಲ್ ದೆಟ್​ ಬ್ರೀತ್ಸ್’ ಹಾಗೂ​ ‘ಎಲಿಫಂಟ್ ವಿಸ್ಪರ್ಸ್​’ ಚಿತ್ರಗಳು ಶಾರ್ಟ್​ಲಿಸ್ಟ್ ಆಗಿವೆ. ಈ ಚಿತ್ರಗಳಲ್ಲಿ ಯಾವ ಸಿನಿಮಾಗಳು ನಾಮನಿರ್ದೇಶನಗೊಳ್ಳಲಿದೆ ಎನ್ನುವ ಕುತೂಹಲ ಭಾರತೀಯರಲ್ಲಿ ಮೂಡಿದೆ. ‘ಆರ್​ಆರ್​ಆರ್​’ ಚಿತ್ರ ಈಗಾಗಲೇ ವಿದೇಶದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ಇಂದು ಆಸ್ಕರ್ ನಾಮಿನೇಷನ್ ಪಟ್ಟಿಯಲ್ಲಿ ‘ಆರ್​ಆರ್​ಆರ್​’ಗೆ ಸ್ಥಾನ ಸಿಕ್ಕರೆ ಹೊಸ ದಾಖಲೆ ಸೃಷ್ಟಿ ಆಗಲಿದೆ. ‘ಆರ್​ಆರ್​ಆರ್​’ ಚಿತ್ರಕ್ಕೆ ಎಸ್​.ಎಸ್​. ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ‘ಆರ್​ಆರ್​ಆರ್​’ ಚಿತ್ರಕ್ಕೆ ಆಸ್ಕರ್ ಸಿಗಲಿದೆ ಎನ್ನುವ ಭರವಸೆಯಲ್ಲಿ ರಾಜಮೌಳಿ ಇದ್ದಾರೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ: ‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

www.oscars.org ವೆಬ್​​ಸೈಟ್​ನಲ್ಲಿ ಕಾರ್ಯಕ್ರಮದ ಲೈವ್ ವೀಕ್ಷಿಸಬಹುದು. ಇದಲ್ಲದೆ, ಆಸ್ಕರ್​​ನ ಅಧಿಕೃತ ಟ್ವಿಟರ್, ಯೂಟ್ಯೂಬ್ ಹಾಗೂ ಫೇಸ್​ಬುಕ್ ಖಾತೆಗಳಲ್ಲಿ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ