‘ಮಿಷನ್ ಇಂಪಾಸಿವಲ್’ ನಟನಿಗೆ ಕಡೆಗೂ ವಯಸ್ಸಾಯ್ತು; ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್
ಟಾಮ್ ಕ್ರೂಸ್ ಅವರಿಗೆ ವಯಸ್ಸೇ ಆಗುತ್ತಿಲ್ಲವಲ್ಲ ಎಂದು ಜನರು ಅಂದುಕೊಳ್ಳುತ್ತಿದ್ದರು. ಆದರೆ ಅವರ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅಮೆರಿಕದ ನೌಕಾ ಪಡೆಯಿಂದ ಪ್ರಶಸ್ತಿ ಸ್ವೀಕರಿಸುವಾಗ ನಟ ಟಾಮ್ ಕ್ರೂಸ್ ಅವರು ವಯಸ್ಸಾದಂತೆ ಕಾಣಿಸಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಹಾಲಿವುಡ್ನ ಹಲವಾರು ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಿ ಟಾಮ್ ಕ್ರೂಸ್ ಅವರು ಫೇಮಸ್ ಆಗಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ‘ಮಿಷನ್ ಇಂಪಾಸಿಬಲ್’ ಸರಣಿ ಸಿನಿಮಾಗಳನ್ನು ನೋಡಿ ಮೆಚ್ಚಿಕೊಳ್ಳದವರೇ ಇಲ್ಲ. ಎಲ್ಲರಿಗೂ ಟಾಮ್ ಕ್ರೂಸ್ ಎಂದರೆ ಇಷ್ಟ. 1981ರಿಂದಲೂ ಚಿತ್ರರಂಗದಲ್ಲಿ ಇರುವ ಅವರು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಹದಿಹರೆಯದವರೂ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಟಾಮ್ ಕ್ರೂಸ್ ಅವರಿಗೆ ವಯಸ್ಸೇ ಆಗುವುದಿಲ್ಲ ಎಂದು ಫ್ಯಾನ್ಸ್ ನಂಬಿದ್ದರು. ಆದರೆ ಈಗ ಅವರ ಹೊಸ ಫೋಟೋ ನೋಡಿದ ಅಭಿಮಾನಿಗಳಿಗೆ ಬೇರೆ ಅಭಿಪ್ರಾಯ ಬಂದಿದೆ. ಕೊನೆಗೂ ಟಾಪ್ ಕ್ರೂಸ್ ಅವರು ವಯಸ್ಸಾದಂತೆ ಕಾಣಿಸುತ್ತಿದ್ದಾರೆ!
ಟಾಮ್ ಕ್ರೂಸ್ ಅವರಿಗೆ ಇತ್ತೀಚೆಗೆ ಅಮೆರಿಕದ ನೌಕಾಪಡೆಯಿಂದ ಗೌರವ ಸಲ್ಲಿಸಲಾಗಿದೆ. ಟಾಮ್ ಕ್ರೂಸ್ ಅವರು ವಿಮಾನ ಚಲಾಯಿಸುತ್ತಾರೆ. ಸಿನಿಮಾಗಳ ಶೂಟಿಂಗ್ನಲ್ಲಿ ಅವರು ನೈಜವಾಗಿ ಯುದ್ಧ ವಿಮಾನಗಳನ್ನು ಹಾರಿಸಿ ಸೈ ಎನಿಸಿಕೊಂಡಿದ್ದಾರೆ. ‘ಟಾಪ್ ಗನ್’, ‘ಎ ಫೀವ್ ಗುಡ್ ಮೆನ್’, ‘ಬಾರ್ನ್ ಆನ್ ಫೋರ್ತ್ ಆಫ್ ಜುಲೈ’ ಮುಂತಾದ ಸಿನಿಮಾಗಳ ಮೂಲಕ ನೌಕಾಪಡೆಯ ಮಹತ್ವವನ್ನು ಜನರಿಗೆ ತಿಳಿಸಿದ್ದಾರೆ. ಈ ಕಾರಣದಿಂದ ಅವರಿಗೆ ‘Distinguished Public Service Award’ ನೀಡಿ ಗೌರವಿಸಲಾಗಿದೆ.
BREAKING: The U.S. Navy Awarded Tom Cruise with the Top Civilian Honor Today pic.twitter.com/53YWZHg3Mx
— Cinema Tweets (@CinemaTweets1) December 17, 2024
ಪ್ರಶಸ್ತಿ ನೀಡುತ್ತಿರುವ ಸಂದರ್ಭದ ವಿಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಟಾಮ್ ಕ್ರೂಸ್ ಅವರು ವಯಸ್ಸಾದಂತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಮತ್ತು ವಿಡಿಯೋವನ್ನು ನೋಡಿ ಜನರು ನಾನಾ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದರೆ. ‘ಅಂತೂ ಇಂತೂ ಟಾಮ್ ಕ್ರೂಸ್ ಅವರಿಗೆ ವಯಸ್ಸಾಯ್ತು. ಅದಕ್ಕಾಗಿ ಅವರಿಗೆ ಅಭಿನಂದನೆಗಳು’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ‘ದಿ ಅಪ್ರೆಂಟಿಸ್’ ಸಿನಿಮಾದಲ್ಲಿ ಡೋನಾಲ್ಡ್ ಟ್ರಂಪ್ ಜೀವನದ ಕಥೆ; ಭಾರಿ ವಿವಾದ
ಟಾಮ್ ಕ್ರೂಸ್ ಈ ರೀತಿ ಕಾಣಿಸಿಕೊಂಡಿದ್ದನ್ನು ನೋಡಿ ಕೆಲವರು ನಂಬುತ್ತಲೇ ಇಲ್ಲ. ‘ಇದು ಟಾಪ್ ಕ್ರೂಸ್ ಅಲ್ಲ. ಬೇರೆ ಯಾರೋ ಇರಬಹುದು’ ಎಂಬ ಕಮೆಂಟ್ ಕೂಡ ಬಂದಿದೆ. ಅಸಲಿಗೆ, ಟಾಮ್ ಕ್ರೂಸ್ ಅವರಿಗೆ ಈಗ 62 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ರಣರೋಚಕ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಾರೆ. ಅವರು ನಟಿಸುತ್ತಿರುವ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ 2025ರ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆ ಬಳಿಕ ‘ಡೀಪರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.