ತೆರೆಮೇಲೆ ನಟಿಸುತ್ತಲೇ ಮೂಡಿತು ಪ್ರೀತಿ; ಎಂಗೇಜ್ಮೆಂಟ್ ಮಾಡಿಕೊಂಡ ‘ಸ್ಪೈಡರ್ ಮ್ಯಾನ್’ ಜೋಡಿ
ಹಾಲಿವುಡ್ ನಟರಾದ ಟಾಮ್ ಹಾಲೆಂಡ್ ಮತ್ತು ಜೆಂಡೇಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂತೋಷ ತಂದಿದೆ. 'ಸ್ಪೈಡರ್-ಮ್ಯಾನ್' ಚಿತ್ರದ ಸೆಟ್ನಲ್ಲಿ ಪ್ರೀತಿ ಮೂಡಿದೆ. 2021ರಿಂದಲೂ ಇವರು ಡೇಟಿಂಗ್ ಮಾಡುತ್ತಿದ್ದರು. ನಿಶ್ಚಿತಾರ್ಥದ ಉಂಗುರ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಇವರು ಮದುವೆ ಆಗುತ್ತಿದ್ದಾರೆ.
ತೆರೆಮೇಲೆ ನಟಿಸುತ್ತಲೇ ಪ್ರೀತಿ ಮೂಡಿದ ಅನೇಕ ಉದಾಹರಣೆ ಇದೆ. ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ನಲ್ಲಿ ಮಾತ್ರವಲ್ಲ ಹಾಲಿವುಡ್ನಲ್ಲೂ ಈ ರೀತಿ ಮದುವೆಗಳು ನಡೆದ ಉದಾಹರಣೆ ಇದೆ. ಇದಕ್ಕೆ ಹೊಸ ಸೇರ್ಪಡೆ ‘ಸ್ಪೈಡರ್ ಮ್ಯಾನ್’ ಸಿನಿಮಾ ಜೋಡಿ. ಹಾಲಿವುಡ್ನ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ‘ಸ್ಪೈಡರ್ಮ್ಯಾನ್’ ಚಿತ್ರದ ಕಲಾವಿದರಾದ ಟಾಮ್ ಹಾಲೆಂಡ್ ಹಾಗೂ ಜೆಂಡೇಯಾ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇವರ ಮಧ್ಯೆ ಸೆಟ್ನಲ್ಲೇ ಪ್ರೀತಿ ಮೂಡಿತ್ತು ಎಂದು ಹೇಳಲಾಗಿದೆ.
ಇತ್ತೀಚೆಗೆ 82ನೇ ಸಾಲಿನ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ವೇಳೆ ಜೆಂಡೇಯಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕೈನಲ್ಲಿ ಡೈಮಂಡ್ ರಿಂಗ್ ಕಾಣಿಸಿತ್ತು. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಿದಾಗ ಅವರು ಉತ್ತರಿಸೋಕೆ ನಿರಾಕರಿಸಿದ್ದರು. ಈಗ ಇವರ ನಿಶ್ಚಿತಾರ್ಥದ ಸುದ್ದಿ ಹೊರ ಬಿದ್ದಿದೆ.
ಟಾಮ್ ಹಾಲೆಂಡ್ ಹಾಗೂ ಜೆಂಡೇಯಾ 2021ರಿಂದ ಒಟ್ಟಾಗಿ ಇದ್ದಾರೆ. ಅವರು ಒಟ್ಟಾಗಿ ಡೇಟಿಂಗ್ ಮಾಡುವುದರ ಜೊತೆಗೆ ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಡಿದ್ದೂ ಇದೆ. ಅನೇಕ ಬಾರಿ ಇಬ್ಬರೂ ತಮ್ಮ ಪ್ರೀತಿ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದು ಇದೆ. ಅವರು ಪ್ರೀತಿ ವಿಚಾರವನ್ನು ಮುಂದೊಂದು ದಿನ ಅಧಿಕೃತ ಮಾಡುವುದಾಗಿ ಹೇಳಿದ್ದರು.
‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಚಿತ್ರದಲ್ಲಿ ಟಾಮ್ ಹಾಲೆಂಡ್ ಹಾಗೂ ಜೆಂಡೇಯಾ ಒಟ್ಟಾಗಿ ನಟಿಸಿದ್ದರು. ಅವರು ಮಾರ್ವೆಲ್ ಸಿನಿಮಾದಲ್ಲಿ ಮತ್ತೆ ಒಟ್ಟಾಗಿ ನಟಿಸಲಿದ್ದಾರೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಚಿತ್ರ ಇದಾಗಿದ್ದು, 2026ರಲ್ಲಿ ರಿಲೀಸ್ ಆಗಲಿದೆ. ಇದು ಇತಿಹಾಸದ ಕಥೆ ಹೊಂದಿದೆ.
ಇದನ್ನೂ ಓದಿ: ಟಾಮ್ ಹಾಲೆಂಡ್ ಮನೆಗೆ ಬಂತು ಎರಡು ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಕಾರು
ವಯಸ್ಸಿನ ಅಂತರದ ಬಗ್ಗೆ ನೋಡುವುದಾದರೆ ಇಬ್ಬರ ಮಧ್ಯೆ ಕೆಲವೇ ತಿಂಗಳ ಅಂತರ ಇದೆ. ಟಾಲ್ ಹಾಲೆಂಡ್ ಜನಿಸಿದ್ದು 1996ರ ಜೂನ್ 1ರಂದು. ಜೆಂಡೇಯಾ ಅದೇ ವರ್ಷ ಸೆಪ್ಟೆಂಬರ್ 1ರಂದು ಜನಿಸಿದರು. ಟಾಮ್ಗಿಂತ ಜೆಂಡೇಯಾ ಕೇವಲ ಮೂರು ತಿಂಗಳು ಕಿರಿಯವಳು. ಅಂದರೆ ಇಬ್ಬರದ್ದೂ ಒಂದೇ ವಯಸ್ಸು ಎನ್ನಬಹುದು. ಇವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.