ಸಿನಿಮಾ ಜಗತ್ತಿನ ಮೋಸ್ಟ್ ಸೆಲೆಬ್ರೇಟೆಡ್ ಸೂಪರ್ ಹೀರೋಗಳಲ್ಲಿ ಸ್ಪೈಡರ್ ಮ್ಯಾನ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಅನೇಕ ದಶಕಗಳಿಂದ ಈ ಪಾತ್ರವನ್ನು ತೆರೆಮೇಲೆ ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಅನೇಕ ಹೀರೋಗಳು ಸ್ಪೈಡರ್ ಮ್ಯಾನ್ ಅವತಾರ ತಾಳಿ ಜನರನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ, ಧಾರಾವಾಹಿ ರೂಪದಲ್ಲೂ ಸ್ಪೈಡರ್ ಮ್ಯಾನ್ ಫೇಮಸ್. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಈ ಸರಣಿಯ ಸಿನಿಮಾಗಳಲ್ಲಿ ಸ್ಪೈಡರ್ ಮ್ಯಾನ್ ಪಾತ್ರವನ್ನು ಮಾಡುವ ಅವಕಾಶ ಟಾಮ್ ಹಾಲೆಂಡ್ ಅವರಿಗೆ ಸಿಕ್ಕಿತು. ಅವರು ಈಗೊಂದು ಶಾಕಿಂಗ್ ನ್ಯೂಸ್ ಹಂಚಿಕೊಂಡಿದ್ದಾರೆ.
2016ರಲ್ಲಿ ತೆರೆಕಂಡ ‘ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್’ ಸಿನಿಮಾದಲ್ಲಿ ‘ಸ್ಪೈಡರ್ಮ್ಯಾನ್’ ಪಾತ್ರ ಮಾಡುವ ಅವಕಾಶ ಟಾಮ್ ಹಾಲೆಂಡ್ ಅವರಿಗೆ ಒಲಿಯಿತು. ನಂತರ ಅವರು ‘ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್’, ‘ಸ್ಪೈಡರ್ ಮ್ಯಾನ್: ಫಾರ್ ಫ್ರಮ್ ಹೋಮ್’, ‘ಅವೆಂಜರ್ಸ್ ಇನ್ಫಿನಿಟಿ ವಾರ್’ ಚಿತ್ರಗಳಲ್ಲಿ ಈ ಪಾತ್ರಕ್ಕೆ ಬಣ್ಣ ಹಚ್ಚಿದರು. ಇತ್ತೀಚೆಗೆ ಅವರು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರದ ಕೊನೇ ದಿನದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು.
ಸ್ಪೈಡರ್ ಮ್ಯಾನ್ ಸರಣಿ ಸಿನಿಮಾಗಳಲ್ಲಿ ‘ಹೋಮ್ ಕಮಿಂಗ್’, ‘ಫಾರ್ ಫ್ರಮ್ ಹೋಮ್’ ಮತ್ತು ‘ನೋ ವೇ ಹೋಮ್’ ಚಿತ್ರಗಳು ಟ್ರಿಲಜಿ ರೀತಿ ಮೂಡಿಬಂದಿದೆ. ಈ ಸರಣಿ ಇಲ್ಲಿಗೆ ಅಂತ್ಯವಾಗಲಿದೆ ಎಂದು ಟಾಮ್ ಹಾಲೆಂಡ್ ಹೇಳಿದ್ದಾರೆ.
‘ಈ ಸಿನಿಮಾಗಳನ್ನು ನಾವು ಕಳೆದ 5 ವರ್ಷದಿಂದ ಮಾಡುತ್ತಾ ಬಂದೆವು. ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಇದು ನಾವು ಕೊನೆ ಬಾರಿಗೆ ಜೊತೆಯಾಗಿ ನಟಿಸುತ್ತಿರುವುದು ಅನಿಸುತ್ತದೆ. ಬೇಜಾರಾಗುತ್ತದೆ, ಆದರೂ ಕೂಡ ಜೀವನದ ಮುಂದಿನ ಘಟ್ಟಕ್ಕೆ ನಾವು ಕಾಲಿಡುತ್ತಿದ್ದೇವೆ. ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರವನ್ನೇ ಈ ಸರಣಿಯ ಕೊನೇ ಸಿನಿಮಾ ಎಂಬಂತೆ ನಾವು ಪರಿಗಣಿಸುತ್ತಿದ್ದೇವೆ’ ಎಂದು ಟಾಮ್ ಹಾಲೆಂಡ್ ಹೇಳಿರುವುದರಿಂದ ಸ್ಪೈಡರ್ ಮ್ಯಾನ್ ಪಾತ್ರದ ಭವಿಷ್ಯವೇನು ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:
ಪಬ್ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್ ಮ್ಯಾನ್’ ಆದ; ನಟ ಟಾಮ್ ಹಾಲೆಂಡ್ ಲೈಫ್ ಸ್ಟೋರಿ
ದಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ಗೆ ‘ಫೌಂಡೇಶನ್’ ಅವಕಾಶ; ಹಾಲಿವುಡ್ ಕಲಾವಿದರ ಜತೆ ನಟನೆ