ಅಧಿಕೃತವಾಗಿ ಬೇರೆ ಆದ ಹನಿ ಸಿಂಗ್-ಶಾಲಿನಿ; ಕೇಸ್ ಹಿಂಪಡೆದ ಗಾಯಕನ ಪತ್ನಿ
ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆದರು. ಮದುವೆ ಆದ 11 ವರ್ಷಗಳ ಬಳಿಕ ಇವರ ಮಧ್ಯೆ ಕಿತ್ತಾಟ ಶುರುವಾಯಿತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಹನಿ ಸಿಂಗ್ (Honey Singh) ಹಾಗೂ ಅವರ ಪತ್ನಿ ಶಾಲಿನಿ ತಲ್ವಾರ್ ಅಧಿಕೃತವಾಗಿ ಬೇರೆ ಆಗಿದ್ದಾರೆ. ಈ ಮೂಲಕ ಸುಮಾರು 13 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಮಂಗಳವಾರ (ನವೆಂಬರ್ 7) ದೆಹಲಿ ಫ್ಯಾಮಿಲಿ ಕೋರ್ಟ್ ಈ ದಂಪತಿಗೆ ಬೇರೆ ಆಗಲು ಕಾನೂನಾತ್ಮಕವಾಗಿ ಅನುಮತಿ ನೀಡಿದೆ. ವಿಚ್ಛೇದನ ಸಿಕ್ಕ ಬೆನ್ನಲ್ಲೇ ಶಾಲಿನಿ ಅವರು ಹನಿ ಸಿಂಗ್ ಮೇಲೆ ಹಾಕಿದ್ದ ಕೌಟುಂಬಿಕ ಹಿಂಸೆ ಪ್ರಕರಣವನ್ನು ಹಿಂಪಡೆದಿದ್ದಾರೆ.
ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆದರು. ಮದುವೆ ಆದ 11 ವರ್ಷಗಳ ಬಳಿಕ ಇವರ ಮಧ್ಯೆ ಕಿತ್ತಾಟ ಶುರುವಾಯಿತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟ್ ಇಬ್ಬರಿಗೂ ಯೋಚಿಸಲು, ಹೊಂದಾಣಿಕೆ ಮಾಡಿಕೊಳ್ಳಲು ಆರು ತಿಂಗಳು ಅವಕಾಶ ನೀಡಿತ್ತು. ಆದರೆ, ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದರಿಂದ ಕೌಟುಂಬಿಕ ನ್ಯಾಯಾಲಯದ ಪ್ರಿನ್ಸಿಪಲ್ ಜಡ್ಜ್ ಪರಮಜೀತ್ ಸಿಂಗ್ ಅವರು ಇವರಿಗೆ ವಿಚ್ಛೇದನವನ್ನು ನೀಡಿದ್ದಾರೆ.
ಶಾಲಿನಿ ತಲ್ವಾರ್ ಅವರು ಹನಿಸಿಂಗ್ ಮೇಲೆ ಕೌಟುಂಬಿಕ ಹಲ್ಲೆಯ ಆರೋಪವನ್ನು ಮಾಡಿದ್ದರು. ಹನಿ ಸಿಂಗ್ ಮತ್ತು ಅವನ ಕುಟುಂಬದಿಂದ ಮಾನಸಿಕ, ದೈಹಿಕ, ಲೈಂಗಿಕ ಕಿರುಕುಳ ಅನುಭವಿಸಿದ್ದು, ನಿತಂತರ ಭಯದಲ್ಲಿ ಬದುಕುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಅವರು ಕೇಸ್ ದಾಖಲು ಮಾಡಿದ್ದರು. ಈಗ ವಿಚ್ಛೇದನ ಪಡೆದ ಬಳಿಕ ಈ ವಿಚಾರದಲ್ಲಿ ರಾಜಿ ಆಗಿದ್ದಾರೆ. ಹನಿ ಸಿಂಗ್ ಮೇಲೆ ಹಾಕಿದ್ದ ಪ್ರಕರಣವನ್ನು ಅವರು ಹಿಂಪಡೆದಿದ್ದಾರೆ.
ಇದನ್ನೂ ಓದಿ:ಬಯಲಾಗತ್ತೆ ಹನಿ ಸಿಂಗ್ ಬದುಕಿನ ಕಹಿ ಸತ್ಯ; ಎಲ್ಲವನ್ನೂ ಬಹಿರಂಗಪಡಿಸಲು ಒಪ್ಪಿಗೆ ನೀಡಿದ ವಿವಾದಿತ ಗಾಯಕ
ಹನಿ ಸಿಂಗ್ ಅವರು ಟೀನಾ ತಡಾನಿ ಜೊತೆ ರಿಲೇಶನ್ಶಿಪ್ನಲ್ಲಿ ಇರುವುದಾಗಿ 2022ರ ಡಿಸೆಂಬರ್ನಲ್ಲಿ ಹೇಳಿಕೊಂಡಿದ್ದರು. ದುಬೈನಲ್ಲಿ ಇವರ ಭೇಟಿ ಆಗಿತ್ತು. ಹನಿ ಸಿಂಗ್ ಅವರ ‘ಪ್ಯಾರಿಸ್ ಕಾ ಟ್ರಿಪ್’ ವಿಡಿಯೋ ಸಾಂಗ್ನಲ್ಲಿ ಟೀನಾ ಕಾಣಿಸಿಕೊಂಡಿದ್ದರು. ಅವರು ಕೆನಡಾದ ನಟಿ. ಅವರು ಕಿರು ಚಿತ್ರ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Wed, 8 November 23




