ಅದಿತಿ ರಾವ್ ಹೈದರಿಯ ಮೊದಲ ಪತಿ ಯಾರು? ಈಗ ಎಲ್ಲಿದ್ದಾರೆ?
Aditi Rao Hydari: ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ವಿವಾಹವಾಗಲಿದೆ. ಅಂದಹಾಗೆ ಇಬ್ಬರಿಗೂ ಇದು ಮೊದಲ ಮದುವೆಯಲ್ಲ. ಅಷ್ಟಕ್ಕೂ ಅದಿತಿ ರಾವ್ ಹೈದರಿ ಮೊದಲ ಪತಿ ಯಾರು? ಈಗ ಅವರೇನು ಮಾಡುತ್ತಿದ್ದಾರೆ?
ನಟಿ ಅದಿತಿ ರಾವ್ ಹೈದರಿ ಮತ್ತು ದಕ್ಷಿಣದ ನಟ ಸಿದ್ದಾರ್ಥ್ ಸೋಮವಾರ (ಸೆಪ್ಟೆಂಬರ್ 16) ಬೆಳಿಗ್ಗೆ ತಮ್ಮ ಮದುವೆಯ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಅದಿತಿ ಮತ್ತು ಸಿದ್ದಾರ್ಥ್ ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದರ ನಂತರ, ಅವರು ತೆಲಂಗಾಣದ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ವಿವಾಹ ಆದರು. ಅದಿತಿ ಮತ್ತು ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ಇದಕ್ಕೂ ಮುನ್ನ ಸಿದ್ದಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾ ನಾರಾಯಣ್ ಅವರನ್ನು ವಿವಾಹವಾಗಿದ್ದರು. ಅದಿತಿ ಮೊದಲು ಮದುವೆಯಾಗಿದ್ದು ನಟ ಸತ್ಯದೀಪ್ ಮಿಶ್ರಾ ಅವರನ್ನು ವರಿಸಿದ್ದರು.
1972ರಂದು ಜನಿಸಿದ ಸತ್ಯದೀಪ್ ಅವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ಅವರು ಅದೇ ವಿಶ್ವವಿದ್ಯಾನಿಲಯದಿಂದ ತಮ್ಮ ಮಾಸ್ಟರ್ ಆಫ್ ಲಾ ಸಹ ಪಡೆದರು. ಕಾನೂನು ಓದುತ್ತಿರುವಾಗಲೇ ಸಿವಿಲ್ ಸರ್ವೀಸಸ್ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹತ್ತು ತಿಂಗಳ ತರಬೇತಿ ಪಡೆದಿದ್ದರು. ಆದರೆ ಅವರು ನಿಯೋಜನೆಗೊಂಡ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಲಿಲ್ಲ.
2010ರಲ್ಲಿ ನಟನಾಗಲು ಮುಂಬೈಗೆ ಬಂದರು. ಅದಕ್ಕೂ ಮೊದಲು ಅವರು ದೆಹಲಿಯಲ್ಲಿ ಕಾರ್ಪೊರೇಟ್ ವಕೀಲರಾಗಿ ಕೆಲಸ ಮಾಡಿದರು. ಸತ್ಯದೀಪ್ 2011 ರಲ್ಲಿ ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು ‘ಬಾಂಬೆ ವೆಲ್ವೆಟ್’, ‘ವಿಕ್ರಮ್ ವೇದಾ’, ‘ಅಕ್ರಮ’, ಮೊದಲಾದ ಸಿನಿಮಾಗಲ್ಲಿ ನಟಿಸಿದರು.
ಇದನ್ನೂ ಓದಿ:ಸಿದ್ದಾರ್ಥ್ ಜತೆ ಹಸೆಮಣೆ ಏರಿದ ಅದಿತಿ ರಾವ್ ಹೈದರಿ; ಇಬ್ಬರಿಗೂ 2ನೇ ಮದುವೆ
ಸತ್ಯದೀಪ್ ಅವರು ಅದಿತಿ ರಾವ್ ಹೈದರಿ ಅವರನ್ನು 2007ರಲ್ಲಿ ವಿವಾಹವಾದರು. ಆಗ ಅವರಿಗೆ 35 ವರ್ಷ ಮತ್ತು ಅದಿತಿಗೆ 21 ವರ್ಷ. ಇವರಿಬ್ಬರೂ ಪ್ರಸಿದ್ಧ ತ್ಯಾಬ್ಜಿ-ಹೈದರಿ ಕುಟುಂಬಕ್ಕೆ ಸೇರಿದವರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅದಿತಿ ಮತ್ತು ಸತ್ಯದೀಪ್ 2013ರಲ್ಲಿ ಬೇರ್ಪಟ್ಟರು. ‘ನಾವು ಬೇರ್ಪಟ್ಟಾಗ ನನಗೆ ತುಂಬಾ ಬೇಸರವಾಯಿತು. ಆದರೆ ನಮ್ಮ ಸಂಬಂಧದ ಹೆಸರು ಮಾತ್ರ ಬದಲಾಗಿದೆ. ನಾವು ಇನ್ನೂ ಒಳ್ಳೆಯ ಸ್ನೇಹಿತರು. ಅವನ ತಾಯಿಗೆ ನಾನು ಯಾವಾಗಲೂ ಮಗಳು’ ಎಂದಿದ್ದರು ಅವರು.
ಸತ್ಯದೀಪ್ ಈಗ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ಹಿರಿಯ ನಟಿ ನೀನಾ ಗುಪ್ತಾ ಅವರ ಪುತ್ರಿ ಮಸಾಬಾ ಗುಪ್ತಾ ಅವರನ್ನು ವಿವಾಹವಾಗಿದ್ದಾರೆ. ಮಸಾಬಾ ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಪುತ್ರಿ. ನೀನಾ ಮತ್ತು ವಿವಿಯನ್ ಎಂದಿಗೂ ಮದುವೆಯಾಗಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ