AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಎರಡು ರಾಜ್ಯಗಳಲ್ಲಿ ‘ರಾಕಾ’ಗೆ ಭಾರಿ ಬೇಡಿಕೆ: ಹಕ್ಕು ಮಾರಾಟಕ್ಕೆ ಹರಾಜು ವಿಧಾನ?

Allu Arjun movie: ‘ಪುಷ್ಪ’ ಮತ್ತು ‘ಪುಷ್ಪ 2’ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಂತೂ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಆಗಿವೆ. ಇದೀಗ ಅಲ್ಲು ಅರ್ಜುನ್ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಅಟ್ಲಿ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ. ಹೀಗಿರುವಾಗಲೇ ಉತ್ತರ ಭಾರತದ ಎರಡು ರಾಜ್ಯಗಳಲ್ಲಿ ‘ರಾಕಾ’ ಸಿನಿಮಾದ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದೆ. ಭಾರಿ ದೊಡ್ಡ ಮೊತ್ತದ ಆಫರ್ ಅನ್ನು ಸಹ ನೀಡಲಾಗುತ್ತಿದೆ.

ಆ ಎರಡು ರಾಜ್ಯಗಳಲ್ಲಿ ‘ರಾಕಾ’ಗೆ ಭಾರಿ ಬೇಡಿಕೆ: ಹಕ್ಕು ಮಾರಾಟಕ್ಕೆ ಹರಾಜು ವಿಧಾನ?
Allu Arjun Raaka
ಮಂಜುನಾಥ ಸಿ.
|

Updated on: Apr 29, 2026 | 10:14 PM

Share

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಭಾರತದಾದ್ಯಂತ ಭಾರಿ ದೊಡ್ಡ ಹಿಟ್ ಆಗಿವೆ. ಅದರಲ್ಲೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಂತೂ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಆಗಿವೆ. ಇದೀಗ ಅಲ್ಲು ಅರ್ಜುನ್ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಅಟ್ಲಿ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ. ಹೀಗಿರುವಾಗಲೇ ಉತ್ತರ ಭಾರತದ ಎರಡು ರಾಜ್ಯಗಳಲ್ಲಿ ‘ರಾಕಾ’ ಸಿನಿಮಾದ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದೆ. ಭಾರಿ ದೊಡ್ಡ ಮೊತ್ತದ ಆಫರ್ ಅನ್ನು ಸಹ ನೀಡಲಾಗುತ್ತಿದೆ.

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಉತ್ತರ ಭಾರತದಲ್ಲಿ ಭಾರಿ ಗಳಿಕೆ ಮಾಡಿದ್ದವು. ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಈ ಸಿನಿಮಾ ಮೋಡಿಯನ್ನೇ ಮಾಡಿತ್ತು. ಕಾರ್ಮಿಕನೊಬ್ಬ ನಾಯಕನಾಗುವ ಈ ಕತೆ ಯುಪಿ, ಬಿಹಾರ ಜನರಿಗೆ ಭಾರಿ ಹಿಡಿಸಿತ್ತು. ಇದೇ ಕಾರಣಕ್ಕೆ ‘ಪುಷ್ಪ 2’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅಲ್ಲು ಅರ್ಜುನ್ ಬಿಹಾರದಲ್ಲೇ ಮಾಡಿದ್ದರು. ಯುಪಿ, ಬಿಹಾರದಲ್ಲಿ ಅಲ್ಲು ಅರ್ಜುನ್​​ಗೆ ಭಾರಿ ಅಭಿಮಾನಿ ವರ್ಗವಿದ್ದು, ಇದೀಗ ಅವರ ‘ರಾಕಾ’ ಸಿನಿಮಾದ ಬಿಹಾರ ಮತ್ತು ಯುಪಿ ಬಿಡುಗಡೆ ಹಕ್ಕು ಖರೀದಿಗೆ ವಿತರಕರು ನಾ ಮುಂದು-ತಾ ಮುಂದು ಎಂದು ಮುಗಿಬಿದಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಯುಪಿ ಮತ್ತು ಬಿಹಾರ ವಿತರಣೆ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದ್ದು, ದೊಡ್ಡ ಮೊತ್ತದ ಹಣದ ಆಫರ್ ಅನ್ನು ಚಿತ್ರತಂಡದ ಮುಂದೆ ಕೆಲವರು ಇಟ್ಟಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ, ವಿತರಕರು ಹರಾಜು ಪ್ರಕ್ರಿಯೆ ಮೂಲಕ ವಿತರಣೆ ಹಕ್ಕು ಮಾರಾಟ ಮಾಡುವಂತೆಯೂ ಚಿತ್ರತಂಡವನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಹರಾಜಿನಲ್ಲಿ ಕೂಗಿ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಉತ್ಸುಕರಾಗಿದ್ದಾರೆ. ‘ರಾಕಾ’ ಸಿನಿಮಾವನ್ನು ಸನ್ ನೆಟ್​​ವರ್ಕ್ಸ್​ನ ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದು, ಅವರು ಇದಕ್ಕೆ ಒಪ್ಪುತ್ತಾರಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಸಹ ಸಿನಿಮಾನಲ್ಲಿದ್ದಾರೆ. ಇದು ಫ್ಯಾಂಟಸಿ ಆಕ್ಷನ್ ಸಿನಿಮಾ ಆಗಿದ್ದು, ಚಿತ್ರ ವಿಚಿತ್ರ ಜೀವಿಗಳು, ಅತ್ಯಾಧುನಿಕ ವಾಹನಗಳು, ಆಯುಧಗಳು, ಚಿತ್ರ ವಿಚಿತ್ರ ಲೊಕೇಶನ್​​ಗಳು ಸಿನಿಮಾನಲ್ಲಿ ಇರಲಿವೆ. ಇತ್ತೀಚೆಗಷ್ಟೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್​​ನಲ್ಲಿ ಡೆವಿಲ್ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us