‘ನಮ್ಮ ಮಧ್ಯೆ ಏನೂ ಇಲ್ಲ, ಪಾಪ ಧನಂಜಯ್ಗೆ ಯಾರೂ ಹೆಣ್ಣು ಕೊಡ್ತಿಲ್ಲ’- ಅಮೃತಾ ಅಯ್ಯಂಗಾರ್
ಇವರ ಮಧ್ಯೆ ಪ್ರೀತಿ ಇದೆ ಎನ್ನುವ ಸುದ್ದಿಯ ಕಾರಣಕ್ಕೆ ಅನೇಕರು ಧನಂಜಯ್ಗೆ ಹೆಣ್ಣು ಕೊಡ್ತಿಲ್ಲವಂತೆ! ಈ ವಿಚಾರವನ್ನು ಅಮೃತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಟ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇವರ ಮಧ್ಯೆ ಇರೋದು ಪ್ರೀತಿ ಎಂದು ಅನೇಕರು ಸುದ್ದಿ ಹಬ್ಬಿಸಿದ್ದಾರೆ. ಈ ವಿಚಾರದಲ್ಲಿ ಅವರು ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ. ಈಗ ಧನಂಜಯ್ (Dhananjay) ಹಾಗೂ ಅಮೃತಾ ಒಟ್ಟಾಗಿ ನಟಿಸಿದ ಮೂರನೇ ಸಿನಿಮಾ ‘ಹೊಯ್ಸಳ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಅಮೃತಾ ಅವರು ಧನಂಜಯ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇವರ ಮಧ್ಯೆ ಪ್ರೀತಿ ಇದೆ ಎನ್ನುವ ಸುದ್ದಿಯ ಕಾರಣಕ್ಕೆ ಅನೇಕರು ಧನಂಜಯ್ಗೆ ಹೆಣ್ಣು ಕೊಡ್ತಿಲ್ಲವಂತೆ! ಈ ವಿಚಾರವನ್ನು ಅಮೃತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಧನಂಜಯ್ ಹಾಗೂ ಅಮೃತಾ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲಿನ ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ನಂತರ ‘ಬಡವ ರಾಸ್ಕಲ್’ ಚಿತ್ರದಲ್ಲಿ ಇವರು ಮಿಂಚಿದರು. ಈಗ ‘ಹೊಯ್ಸಳ’ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ. ಗೃಹಿಣಿ ಪಾತ್ರದಲ್ಲಿ ಅಮೃತಾ ಕಾಣಿಸಿಕೊಂಡರೆ, ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 30ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಟಿವಿ9 ಕನ್ನಡದ ಜೊತೆಗೆ ಅಮೃತಾ ಮಾತನಾಡಿದ್ದಾರೆ. ಈ ವೇಳೆ ಅವರು ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಅಮೃತಾ ಅಯ್ಯಂಗಾರ್ ವಿಚಾರದಲ್ಲಿ ನೀನು ಮಾಡಿದ್ದು ತಪ್ಪು’; ವೇದಿಕೆ ಮೇಲೆ ಧನಂಜಯ್ಗೆ ತಿಳಿ ಹೇಳಿದ ಸುದೀಪ್
‘ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೆ ಬಂದಾಗ ಧನಂಜಯ್ ಅವರು ಪ್ರಪೋಸ್ ಮಾಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದು ನಮಗೆ ನೀಡಿದ ಟಾಸ್ಕ್ ಆಗಿತ್ತು. ನಾನು ಈ ಮೊದಲು ಕ್ಲ್ಯಾರಿಟಿ ಕೊಟ್ಟಿದೆ. ಮತ್ತೆ ಧನಂಜಯ್ ಜೊತೆ ಸಿನಿಮಾ ಮಾಡಬೇಕು ಎಂದಾಗ ಜನ ಟ್ರೋಲ್ ಮಾಡಬಹುದು ಎನ್ನುವ ಭಯ ಕಾಡಿತು. ಆದರೆ, ನಮ್ಮದು ಹಿಟ್ ಜೋಡಿ. ಟ್ರೋಲ್ ಮಾಡುತ್ತಾರೆ ಎಂದು ನಾನು ಎಂದಿಗೂ ಹಿಂಜರಿದಿಲ್ಲ. ಧನಂಜಯ್ ಜೊತೆ ಕೆಲಸ ಮಾಡೋಕೆ ಖುಷಿ ಎನಿಸುತ್ತದೆ’ ಎಂದಿದ್ದಾರೆ ಅಮೃತಾ.
ಇದನ್ನೂ ಓದಿ: Daali Dhananjay: ಸುದೀಪ್ ಬಳಿ ಮನವಿಯೊಂದನ್ನು ಮಾಡಿದ ಡಾಲಿ, ನಡೆಸಿಕೊಡ್ತಾರಾ ಕಿಚ್ಚ?
‘ಧನಂಜಯ್ ಜೊತೆ ಫೋಟೋ ಹಾಕಿದಾಗ, ಹಿರಿಯ ನಟರು ಸಿಕ್ಕಾಗ ಇದೇ ವಿಚಾರ ಕೇಳ್ತಾರೆ. ಆಗ ನಾನು ಸ್ಪಷ್ಟನೆ ಕೊಡ್ತೀನಿ. ಇದನ್ನು ಹೇಗೆ ನಿಲ್ಲಿಸಬೇಕೋ ಗೊತ್ತಾಗ್ತಿಲ್ಲ. ಅದಕ್ಕೆ ಈ ವಿಚಾರದ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ. ಸೆಟ್ನಲ್ಲಿ ಈ ತರಹ ರೀಲ್ಸ್ ಮಾಡಿ ನನಗೆ ಹೆಣ್ಣು ಕೊಡ್ತಿಲ್ಲ ಎಂದು ಧನಂಜಯ್ ರೇಗಿಸ್ತಾ ಇದ್ರು’ ಎಂದಿದ್ದಾರೆ ಅಮೃತಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ