‘ನಾನು ಒಳ್ಳೆಯ ನಟಿಯಲ್ಲ’: ಎಲ್ಲರ ಎದುರು ಒಪ್ಪಿಕೊಂಡ ಸಮಂತಾ

ನಟಿ ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಖ್ಯಾತ ನಟಿ, ಬಾಲಿವುಡ್​ಗೂ ಪದಾರ್ಪಣೆ ಮಾಡುವ ಮೂಲಕ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಆದರೆ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ತಾವೊಬ್ಬ ಕೆಟ್ಟ ನಟಿ ಎಂದು ತಮ್ಮ ನಟನೆಯನ್ನು ತಾವೇ ವಿಮರ್ಶೆ ಮಾಡಿಕೊಂಡಿದ್ದಾರೆ.

‘ನಾನು ಒಳ್ಳೆಯ ನಟಿಯಲ್ಲ’: ಎಲ್ಲರ ಎದುರು ಒಪ್ಪಿಕೊಂಡ ಸಮಂತಾ
Edited By:

Updated on: Oct 17, 2024 | 7:29 PM

ನಟಿ ಸಮಂತಾ ಅವರು ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರಿಗೆ ಅನಾರೋಗ್ಯ ಆದ ಬಳಿಕ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಅವರ ಗಮನ ಈಗ ವೆಬ್ ಸೀರಿಸ್ಗಳ ಬಗ್ಗೆ ಇದೆ. ಅವರು ಉತ್ತಮ ನಟಿ ಎನ್ನುವುದು ಸಾಬೀತಾಗಿದೆ. ಅವರು ಭಿನ್ನ ಪಾತ್ರಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಆದರೆ, ತಾವು ಉತ್ತಮ ನಟಿ ಎಂಬುದನ್ನು ಅವರು ಒಪ್ಪಿಕೊಂಡಿಲ್ಲ.

ಸಮಂತಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2010ರ ‘ಯೇ ಮಾಯಾ ಚೇಸಾವೆ’ ಸಿನಿಮಾ ಮೂಲಕ. ಈ ಚಿತ್ರದಲ್ಲಿ ನಾಗ ಚೈತನ್ಯ ನಟಿಸಿದ್ದರು. ಈ ಸಿನಿಮಾಗೆ ಹಲವು ಅವಾರ್ಡ್ ಸಿಕ್ಕಿತು. ಸಮಂತಾ ಕೂಡ ಅವಾರ್ಡ್ ಪಡೆದರು. ‘ಈಗ’ ಸಿನಿಮಾ ನಟನೆಗೆ ‘ಬೆಸ್ಟ್ ತೆಲುಗು ನಟಿ’ ವಿಭಾಗದಲ್ಲಿ ಅವರು ಅವಾರ್ಡ್ ಪಡೆದರು. ಆದರೆ, ಒಳ್ಳೆಯ ನಟಿ ಎಂಬುದನ್ನು ಅವರು ಒಪ್ಪಿಕೊಳ್ಳಲ್ಲ.

‘ನನ್ನ ಅರ್ಧ ಜೀವನದಲ್ಲಿ ನಾನು ಒಳ್ಳೆಯ ನಟಿಯಾಗಿರಲಿಲ್ಲ. ನಾನು ಈಗಲೂ ಒಳ್ಳೆಯ ನಟಿ ಅಲ್ಲ. ಇದು ನನ್ನ ಮೇಲೆ ಮಾತ್ರ ನಿರ್ಧಾರ ಆಗುತ್ತದೆ ಎಂದು ಹೇಳಲ್ಲ. ಸರಿಯಾದ ತಂಡ ಸಿಕ್ಕರೆ ಎಲ್ಲವೂ ಸರಿ ಆಗುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಸಮಂತಾಗೆ ಹೊಸ ಬಿರುದು ಕೊಟ್ಟ ಬಾಲಿವುಡ್ ಸ್ಟಾರ್ ಆಲಿಯಾ ಭಟ್

‘ಸಿಟಾಡೆಲ್: ಹನಿ ಬನಿ’ ಸೀರಿಸ್ನಲ್ಲಿ ಸಮಂತಾ ನಟಿಸಿದ್ದಾರೆ. ಈ ಸೀರಿಸ್ನ ರಾಜ್ ಹಾಗೂ ಡಿಕೆ ನಿರ್ದೇಶನ ಮಾಡಿದ್ದಾರೆ. ಸಮಂತಾ ಅವರು ನಟಿಯಾಗಬೇಕು ಎಂದು ಕನಸು ಕಾಣುವ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

‘ನನ್ನ ಇಟ್ಟುಕೊಂಡು ಸಿನಿಮಾ ಮಾಡೋದು ಬೇಡ ಎಂದು ನಾನು ತಂಡದವರಿಗೆ ಹೇಳಿದೆ. ನನ್ನ ಹತ್ತಿರ ಈ ಪಾತ್ರ ಮಾಡೋಕೆ ಸಾಧ್ಯವೇ ಇಲ್ಲ ಎಂದನಿಸಿತ್ತು. ನಾನು ಯಾವ ಹಂತಕ್ಕೆ ಹೋಗಿದ್ದೆ ಎಂದರೆ, ನಾನೇ ನಾಲ್ಕು ಹಿರೋಯಿನ್ಗಳ ಹೆಸರನ್ನು ಹೇಳಿ, ಇವರನ್ನು ಹಾಕಿಕೊಳ್ಳಿ, ಚೆನ್ನಾಗಿ ಆಗುತ್ತದೆ ಎನ್ನುತ್ತಿದೆ. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ’ ಎಂದಿದ್ದಾರೆ ಸಮಂತಾ.

ಸಮಂತಾ ಓರ್ವ ಒಳ್ಳೆಯ ನಟಿ ಅನ್ನೋದು ಎಲ್ಲರಿಗೂ ಮನದಟ್ಟಾಗಿದೆ. ಅವರ ನಟನೆಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್​ನಲ್ಲಿ ಅವರು ಅದ್ಭುತವಾಗಿ ನಟಿಸಿದ್ದರು. ಅವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಸಮಂತಾ ಅವರು ಸದ್ಯ ಹೊಸ ಸೀರಿಸ್ನಲ್ಲಿ ಬ್ಯುಸಿ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us