IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?

Indian Idol 12: ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಯುವ ಜನತೆಗೆ ಎಲ್ಲಿ ಸಿಟ್ಟು ಪ್ರದರ್ಶನ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆದಿತ್ಯ ಇಂಡಿಯನ್​ ಐಡಲ್​ ಹೇಳಿದ್ದಾರೆ.

IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?
ಇಂಡಿಯನ್ ಐಡಲ್ ನಿರೂಪಕ ಆದಿತ್ಯ ನಾರಾಯಣ್
Follow us
ಮದನ್​ ಕುಮಾರ್​
|

Updated on: May 20, 2021 | 2:37 PM

ಹಿಂದಿನ ಸೋನಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯನ್​ ಐಡಲ್​ ಸಿಂಗಿಂಗ್​ ರಿಯಾಲಿಟಿ ಶೋಗೆ ದೊಡ್ಡ ಪ್ರಕ್ಷಕ ವರ್ಗ ಇದೆ. ಹಲವು ಕಾರಣಗಳಿಗಾಗಿ ಈ ಕಾರ್ಯಕ್ರಮ ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಒಂದು ವಿವಾದದ ಕಾರಣದಿಂದ ಇಂಡಿಯಲ್​ ಐಡಲ್​ ಸೌಂಡು ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ. ಕಾರ್ಯಕ್ರಮದ ಸ್ಪರ್ಧಿಗಳು, ನಿರೂಪಕರು ಮತ್ತು ನಿರ್ಣಾಯಕರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗಿದೆ. ಈ ಪರಿ ಅಸಮಾಧಾನಕ್ಕೆ ಕಾರಣ ಆಗಿರುವುದು ಒಂದು ಸ್ಪೆಷಲ್​ ಎಪಿಸೋಡ್​!

ಹೌದು, ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಇಂಡಿಯನ್​ ಐಡಲ್​ನಲ್ಲಿ ವಿಶೇಷ ಎಪಿಸೋಡ್​ಗಳನ್ನು ಮಾಡಲಾಯಿತು. ಕಿಶೋರ್​ ಕುಮಾರ್​ ಅವರ ಜನಪ್ರಿಯ ಗೀತೆಗಳನ್ನು ವೇದಿಕೆ ಮೇಲೆ ಹಾಡಲಾಯಿತು. ಆದರೆ ಅದರಿಂದ ಕಿಶೋರ್​ ಕುಮಾರ್​ ಅಭಿಮಾನಿಗಳು ಖುಷಿ ಆಗುವ ಬದಲು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಲೆಜೆಂಡರಿ ಗಾಯಕನ ಹಾಡುಗಳನ್ನು ಬೇಕಾಬಿಟ್ಟಿಯಾಗಿ ಮನಬಂದಂತೆ ಹಾಡಲಾಗಿದೆ ಎಂದು ಜನರು ಸೋಶಿಯಲ್​ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಇದರ ಬಗ್ಗೆ ಶೋ ನಿರೂಪಕ ಆದಿತ್ಯ ನಾರಾಯಣ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಅಪ್ಪ ಅಮ್ಮನ ಕೈಗೆ ಟಿವಿ ರಿಮೋಟ್​ ಬಂದಿದೆ. ಅವರು ಇಂಡಿಯನ್​ ಐಡಲ್​ ನೋಡುತ್ತಿದ್ದಾರೆ. ಯುವ ಜನತೆಗೆ ಬೇಸರ ಆಗಿದೆ. ಎಲ್ಲಿ ಸಿಟ್ಟು ತೋರಿಸಬೇಕು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ’ ಎಂದು ಐಪಿಎಲ್​ ನೋಡುವವರನ್ನು ಆದಿತ್ಯ ನಾರಾಯಣ್​ ಕೆಣಕಿದ್ದಾರೆ. ಈ ವಿಚಾರದ ಸಲುವಾಗಿಯೂ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಇಂಡಿಯಲ್ ಐಡಲ್​ ಒಂದು ಸ್ಕ್ರಿಪ್ಟೆಡ್​ ಶೋ ಎಂಬ ಆರೋಪ ಕೂಡ ಇದೆ. ಇತ್ತೀಚೆಗಿನ ಸ್ಪೆಷಲ್​ ಎಪಿಸೋಡ್​ನಲ್ಲಿ ಕಿಶೋರ್​ ಕುಮಾರ್​ ಪುತ್ರ ಅಮಿತ್​ ಕುಮಾರ್​ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು ಎಂಬುದನ್ನು ಅಮಿತ್​ ಕುಮಾರ್​ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Jr NTR Birthday: ಜ್ಯೂ. ಎನ್​ಟಿಆರ್​ಗೆ ಜನ್ಮದಿನದ ಸಂಭ್ರಮ; ಟಾಲಿವುಡ್​ ಹೀರೋಗೆ ಸಿಕ್ತಿದೆ ಭರ್ಜರಿ ಗಿಫ್ಟ್​

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್