Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?

ಜನನಾಯಗನ್ ಸಿನಿಮಾ ಮೊದಲಾರ್ಧ ವಿಮರ್ಶೆ: ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಸಾಕಷ್ಟು ಅಡೆ-ತಡೆಗಳ ಬಳಿಕ ಕೊನೆಗೂ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ವಿಜಯ್, ‘ಜನ ನಾಯಗನ್’ ಮೂಲಕ ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಮೊದಲಾರ್ಧ ಹೇಗಿದೆ? ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿತೆ? ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಮಾಹಿತಿ ಇಲ್ಲಿದೆ...

Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?
Jana Nayagan Movie
Edited By:

Updated on: Jul 23, 2026 | 12:17 PM

ಮುಖ್ಯಾಂಶಗಳು

  • ವಿಜಯ್ ನಟನೆಯ ಜನ ನಾಯಗನ್ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ.
  • ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.
  • ‘ಜನ ನಾಯಗನ್’ ಸಿನಿಮಾದ ಫಸ್ಟ್ ಆಫ್ ಹೇಗಿದೆ? ನಿರೀಕ್ಷೆಗೆ ತಕ್ಕಂತೆ ಇದೆಯೇ? ಮಾಹಿತಿ ಇಲ್ಲಿದೆ.

ತಮಿಳುನಾಡಿನ ಸಿಎಂ ವಿಜಯ್ (Thalapathy Vijay) ನಟಿಸಿರುವ ‘ಜನ ನಾಯಗನ್’ (Jana Nayagan) ಸಿನಿಮಾ ಇಂದು (ಜುಲೈ 23) ದೇಶದಾದ್ಯಂತ ಬಿಡುಗಡೆ ಆಗಿದೆ. ಜನವರಿ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಸಾಕಷ್ಟು ಅಡೆ-ತಡೆಗಳ ಬಳಿಕ ಕೊನೆಗೂ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ವಿಜಯ್, ‘ಜನ ನಾಯಗನ್’ ಮೂಲಕ ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಮೊದಲಾರ್ಧ ಹೇಗಿದೆ? ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿತೆ? ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಮಾಹಿತಿ ಇಲ್ಲಿದೆ…

  1. ವಿಜಯ್ ಎಂಟ್ರಿ ಸೀನ್​ ಸಖತ್ ಕಿಕ್ ಕೊಡುವಂತಿದೆ. ತಮ್ಮ ಪಕ್ಷವಾದ ಟಿವಿಕೆಯ ಬ್ರ್ಯಾಂಡ್ ಅವರ ಕೈಮೇಲೆ ಹಚ್ಚೆಯ ರೂಪದಲ್ಲಿದೆ.
  2. ಮೊದಲಾರ್ಧದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿವೆ, ವಿಜಯ್ ಎಂದಿನಂತೆ ಆಕ್ಷನ್ ದೃಶ್ಯಗಳಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಆಕ್ಷನ್ ದೃಶ್ಯಗಳ ಹಿನ್ನೆಲೆ ಸಂಗೀತ ಭರ್ಜರಿಯಾಗಿದೆ.
  3. ಜನ ನಾಯಗನ್ ಸಿನಿಮಾದ ಮೊದಲಾರ್ಧ ಮಾಸ್ ಆಕ್ಷನ್, ಭಾವುಕತೆ, ಪಂಚ್ ಡೈಲಾಗ್, ಜಬರ್ದಸ್ತ್ ಹಾಡುಗಳ ಮಿಕ್ಸ್ ಮಸಾಲ.
  4. ವಿಜಯ್ ಎಂಟ್ರಿ ಸೀನ್ ಅಭಿಮಾನಿಗಳಿಂದ ಭರ್ಜರಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಆದರೆ ವಿಜಯ್ ಜೈಲಿಗೆ ಬಂದಿದ್ದು ಹೇಗೆಂಬ ಸಂಗತಿ ಕತೆಯಲ್ಲಿ ದ್ವಿತೀಯಾರ್ಧದಲ್ಲಿ ಬಯಲಾಗುತ್ತದೆ.
  5. ಗೆಳೆಯನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆತನ ಮಗಳನ್ನು ಕಾಪಾಡುವುದು, ತಾಯಿಯ ಆಸೆಯಂತೆ ಮಿಲಿಟರಿ ಅಧಿಕಾರಿ ಆಗಿ ಮಾಡುವುದು ನಾಯಕನ ಗುರಿ.
  6. ಜನ ನಾಯಗನ್, ತೆಲುಗಿನ ಭಗವಂತ ಕೇಸರಿ ಸಿನಿಮಾದ ರೀಮೇಕ್, ಆದರೆ ಅಲ್ಲಲ್ಲಿ ಕೆಲ ಬದಲಾವಣೆ ಗಳನ್ನು ಸಹ ಮಾಡಲಾಗಿದೆ.
  7. ನಾಯಕನಿಗೆ ಫ್ಲ್ಯಾಶ್​ ಬ್ಯಾಕ್ ಸಹ ಇದೆ. ಆ ಫ್ಲ್ತಾಷ್ ಬ್ಯಾಕ್ ದ್ವಿತೀಯಾರ್ಧದಲ್ಲಿ ಓಪನ್ ಆಗಲಿದೆ.
  8. ಸಿನಿಮಾದ ವಿಲನ್ ಆಗಿ ಬಾಬಿ ಡಿಯೋಲ್ ಅವರನ್ನು ಸಹ ಭರ್ಜರಿಯಾಗಿ ತೋರಿಸಲಾಗಿದೆ. ಅತ್ಯಂತ ಕ್ರೂರವಾದ ವಿಲನ್ ಆಗಿ ತೋರಿಸಲಾಗಿದೆ. ಭಾರತದಲ್ಲಿ ಭಯೋತ್ಪಾದಕತೆ ಬಿತ್ತುವುದು ವಿಲನ್ ಉದ್ದೇಶ.
  9. ಪೂಜಾ ಹೆಗ್ಡೆಯದ್ದು ಜರ್ನಲಿಸ್ಟ್ ಪಾತ್ರ. ನಾಯಕನಿಗೆ ಬಿಲ್ಡಪ್ ಕೊಡುವುದರ ಹೊರತಾಗಿ ಹೆಚ್ಚು ಕೆಲಸವಿಲ್ಲ.
  10. ಮಮಿತಾ ಬೈಜು, ನಾಯಕನ ಸಾಕು ಪುತ್ರಿ ಪಾತ್ರ. ತಮ್ಮ ಕ್ಯೂಟ್ ನೆಸ್ ನಿಂದ ಗಮನ ಸೆಳೆಯುತ್ತಾರೆ ಮಮಿತಾ.
  11. ಸಿನಿಮಾದ ಮೊದಲಾರ್ಧದಲ್ಲಿ ಸಾಕಷ್ಟು ಮಾಸ್ ದೃಶ್ಯಗಳಿವೆ, ಸಂಭಾಷಣೆಗಳು ಗಮನ ಸೆಳೆಯುತ್ತವೆ.
  12. ಮೊದಲಾರ್ಧದಲ್ಲಿ ಮೂರು ಫೈಟ್, ಎರಡು ಹಾಡುಗಳಿವೆ. ವಿಜಯ್ ಡ್ಯಾನ್ಸ್ ಚೆನ್ನಾಗಿದೆ. ಅಭಿಮಾನಿಗಳಿಗಾಗಿ ವಿಶೇಷ ಡ್ಯಾನ್ಸ್ ಮಾಡಿದ್ದಾರೆ ವಿಜಯ್.
  13. ವಿಜಯ್ ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ ಜನ ನಾಯಗನ್, ಅಲ್ಲಲ್ಲಿ ವಿಜಯ್ ರಾಜಕೀಯ ಅಜೆಂಡವನ್ನು ಸಹ ಜಾಣತನದಿಂದ ಸೇರಿಸಲಾಗಿದೆ.

‘ಜನ ನಾಯಗನ್’ ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಬಿ ಡಿಯೋಲ್ ವಿಲನ್, ಪೂಜಾ ಹೆಗ್ಡೆ, ಮಮಿತಾ ಬಿಜು ನಾಯಕಿಯರು. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ವೆಂಕಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

Follow Us