AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

Jana Nayagan: ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಎಚ್​​ಡಿ ಪ್ರಿಂಟ್ ಸೋರಿಕೆ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಆದರೆ ಈ ಸೋರಿಕೆ ಸಿಬಿಎಫ್​​ಸಿ ಕಡೆಯಿಂದಲೇ ಆಗಿದೆ ಎಂಬ ಆರೋಪಗಳು ಕಳೆದ ಒಂದೆರಡು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದೀಗ ಪಿಐಬಿ (ಕೇಂದ್ರ ವಾರ್ತಾ ಇಲಾಖೆ) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಸಿನಿಮಾ ಲೀಕ್ ಹಿಂದೆ ಸಿಬಿಎಫ್​​ಸಿ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು
Jana Nayagan 12
ಮಂಜುನಾಥ ಸಿ.
|

Updated on: Apr 11, 2026 | 10:14 PM

Share

ತಮಿಳು ನಟ ವಿಜಯ್ (Thalapathy Vijay) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಸಾಕಷ್ಟು ಅಡ್ಡಿಗಳು ಎದುರಾಗಿದ್ದವು. ರೀಮೇಕ್ ಸಿನಿಮಾ ಆಗಿದ್ದರೂ ಸಹ ಸಿಬಿಎಫ್​​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ. ನ್ಯಾಯಾಲಯದಲ್ಲಿ ಸಹ ನಿರ್ಮಾಪಕರಿಗೆ ನ್ಯಾಯ ಧಕ್ಕಿರಲಿಲ್ಲ. ಇದು ಹೀಗಿರುವಾಗ ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಎಚ್​​ಡಿ ಪ್ರಿಂಟ್ ಸೋರಿಕೆ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಆದರೆ ಈ ಸೋರಿಕೆ ಸಿಬಿಎಫ್​​ಸಿ ಕಡೆಯಿಂದಲೇ ಆಗಿದೆ ಎಂಬ ಆರೋಪಗಳು ಕಳೆದ ಒಂದೆರಡು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದೀಗ ಪಿಐಬಿ (ಕೇಂದ್ರ ವಾರ್ತಾ ಇಲಾಖೆ) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಸಿನಿಮಾ ಲೀಕ್ ಹಿಂದೆ ಸಿಬಿಎಫ್​​ಸಿ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, ‘ಜನ ನಾಯಗನ್’ ತಮಿಳು ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇಂದ ಸೋರಿಕೆಯಾಗಿದೆ ಎಂಬ ವರದಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ. ಪ್ರಮಾಣ ಪತ್ರಕ್ಕಾಗಿ ಸಲ್ಲಿಸಲಾಗುವ ಎಲ್ಲಾ ಚಲನಚಿತ್ರಗಳಿಗಾಗಿ ಸಿಬಿಎಫ್ಸಿ (CBFC) ಸುರಕ್ಷಿತವಾದ KDM (Key Delivery Message) ವ್ಯವಸ್ಥೆಯನ್ನು ಅನುಸರಿಸುತ್ತದೆ. ಸಿನಿಮಾವನ್ನು ಪಾಸ್‌ವರ್ಡ್ ಮೂಲಕ ಸುರಕ್ಷಿತವಾಗಿರಿಸಲಾಗಿರುತ್ತದೆ ಮತ್ತು ಈ KDM ಕೇವಲ ನಿರ್ಮಾಪಕರು ಅಥವಾ ಚಲನಚಿತ್ರ ತಯಾರಕರ ಬಳಿ ಮಾತ್ರ ಇರುತ್ತದೆ. ಸೂಕ್ತವಾದ ಕೆಡಿಎಂ (KDM) ಇಲ್ಲದೆ, ಚಿತ್ರವನ್ನು ವೀಕ್ಷಿಸಲು ಸಾಧ್ಯವಿಲ್ಲ. ‘ಜನ ನಾಯಕನ್’ ಚಿತ್ರದ ‘ಡಿಸಿಪಿ’ (Digital Cinema Package) ಅನ್ನು ಮಾರ್ಚ್ 17 ರಂದು ಮುಂಬೈನಲ್ಲಿ ಅರ್ಜಿದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಅಂದಿನಿಂದ ಅದು ಅವರ ಬಳಿಯೇ ಇದೆ’ ಎಂದಿದೆ.

ಇದನ್ನೂ ಓದಿ:‘ಜನ ನಾಯಗನ್’ ಲೀಕ್​​ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆರೋಪ

ಆ ಮೂಲಕ ಸಿಬಿಎಫ್​​ಸಿ ಬಳಿ ಇರುವ ಸಿನಿಮಾ ಪಾಸ್​​ವರ್ಡ್ ಪ್ರೊಟೆಕ್ಟೆಡ್ ರೀತಿಯದ್ದಾಗಿದ್ದು, ಇದೇ ಪಾಸ್​​ವರ್ಡ್ ಸಿನಿಮಾ ನಿರ್ಮಾಪಕರ ಅಥವಾ ಸಿನಿಮಾಕ್ಕೆ ಸಂಬಂಧಿಸಿದ ತಂಡದ ಬಳಿಯೂ ಇದೆ ಎಂದಿದೆ. ಅಲ್ಲಿಗೆ ಸಿನಿಮಾ ಲೀಕ್ ಮಾಡುವ ಅವಕಾಶ ಸಿಬಿಎಫ್​​ಸಿ ಮಾತ್ರವೇ ಅಲ್ಲದೆ ಸ್ವತಃ ಸಿನಿಮಾ ತಂಡದವರು ವಿಶೇಷವಾಗಿ ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಇದ್ದು, ಅವರಿಂದಲೂ ಲೀಕ್ ಆಗಿರುವ ಸಾಧ್ಯತೆ ಇದೆ ಎಂಬುದನ್ನು ಪರೋಕ್ಷವಾಗಿ ಪಿಐಬಿ ಟ್ವೀಟ್​ ಸೂಚಿಸುತ್ತಿದೆ.

‘ಜನ ನಾಯಗನ್’ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳು ಮೊದಲು ಸಣ್ಣ ಕ್ಲಿಪ್‌ಗಳ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬೆನ್ನಲ್ಲೇ ಪೂರ್ಣ ಪ್ರಮಾಣದ ಹೈ-ಡೆಫಿನಿಷನ್ (HD) ಆವೃತ್ತಿಯು ಪೈರಸಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿದೆ. ಇಂದು ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ರಜನೀಕಾಂತ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ ಸೇರಿದಂತೆ ಹಲವರು ಈ ಸಿನಿಮಾ ಲೀಕ್ ಅನ್ನು ಕಟುವಾಗಿ ಖಂಡಿಸಿದ್ದಾರೆ. ಅದರ ಬೆನ್ನಲ್ಲೆ ಸಿಬಿಎಫ್​​ಸಿ ಪರವಾಗಿ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದೆ.

ಈಗಾಗಲೇ ‘ಜನ ನಾಯಗನ್’ ಸಿನಿಮಾವನ್ನು ಪೈರಸಿ ಲಿಂಕುಗಳ ಮೂಲಕ ಹಲವರು ಡೌನ್​​ಲೋಡ್ ಮಾಡಿದ್ದಾರೆ. ಆದರೆ ಸೈಬರ್ ಪೊಲೀಸರು ಈ ಡೌನ್​​ಲೋಡ್ ಮಾಡುವವರ ಮೇಲೂ ಕಣ್ಣಿಡಲಿದೆ ಎನ್ನಲಾಗುತ್ತಿದೆ. ‘ಜನ ನಾಯಗನ್’ ಲಿಂಕ್ ಹೆಸರಿನಲ್ಲಿ ಕೆಲವು ನಕಲಿ ಲಿಂಕ್ ಸೃಷ್ಟಿಸಿ, ಮಾಲ್​​ವೇರ್ ದಾಳಿಯ ಅಥವಾ ವೈರಸ್ ದಾಳಿಯ ಎಚ್ಚರಿಕೆಯನ್ನೂ ಸಹ ತಜ್ಞರು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us