AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲೀಲಾ ಕೈಬಿಟ್ಟ ದೊಡ್ಡ ಅವಕಾಶ ಜಾನ್ಹವಿ ಕಪೂರ್ ಪಾಲಾಯ್ತು

Janhvi Kapoor: ತೆಲುಗಿನ ಟಾಪ್ ನಾಯಕಿಯಾಗಿರುವ ಕನ್ನಡತಿ ಶ್ರೀಲೀಲಾ ಒಲ್ಲೆ ಎಂದಿದ್ದ ಅವಕಾಶ ಈಗ ಬಾಲಿವುಡ್​ನ ಟಾಪ್ ಯುವನಟಿ ಜಾನ್ಹವಿ ಕಪೂರ್ ಪಾಲಾಗಿದೆ.

ಶ್ರೀಲೀಲಾ ಕೈಬಿಟ್ಟ ದೊಡ್ಡ ಅವಕಾಶ ಜಾನ್ಹವಿ ಕಪೂರ್ ಪಾಲಾಯ್ತು
ಮಂಜುನಾಥ ಸಿ.
|

Updated on: Mar 16, 2024 | 7:45 PM

Share

ನಟಿ ಜಾನ್ಹವಿ ಕಪೂರ್ (Janhvi Kapoor) ಈಗ ಬಾಲಿವುಡ್​ಗಿಂತಲೂ ಹೆಚ್ಚು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಂದರ ಮೇಲೊಂದು ಅವಕಾಶಗಳು ಜಾನ್ಹವಿ ಕಪೂರ್ ಅವರನ್ನು ಅರಸಿ ಬರುತ್ತಿವೆ. ಈಗಾಗಲೇ ಎರಡು ಭಾರಿ ದೊಡ್ಡ ಸಿನಿಮಾಗಳಲ್ಲಿ ಜಾನ್ಹವಿ ಕಪೂರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಈಗ ಮತ್ತೊಂದು ಬಹು ದೊಡ್ಡ ಅವಕಾಶ ಜಾನ್ಹವಿ ಕಪೂರ್​ಗೆ ಲಭಿಸಿದೆ. ವಿಶೇಷವೆಂದರೆ ಆ ಅವಕಾಶ ಈ ಮೊದಲು ಕನ್ನಡದ ನಟಿ ಶ್ರೀಲೀಲಾಗೆ ಸಿಕ್ಕಿತ್ತು. ಆದರೆ ಶ್ರೀಲೀಲಾ ಅವಕಾಶವನ್ನು ನಿರಾಕರಿಸಿದರು.

‘ಬಾಹುಬಲಿ’ ಮಾದರಿಯಲ್ಲಿಯೇ ಮೊದಲ ಸಿನಿಮಾದ ಬಳಿಕ ಎರಡನೇ ಭಾಗಕ್ಕೆ ಭಾರಿ ಕ್ರೇಜ್ ಹುಟ್ಟಿಸಿರುವ ತೆಲುಗು ಸಿನಿಮಾ ಎಂದರೆ ಅದು ‘ಪುಷ್ಪ 2’. ಅಲ್ಲು ಅರ್ಜುನ್ ನಟನೆಯ ಈ ಸೀಕ್ವೆಲ್ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿವೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಸಿನಿಮಾದ ವಿಶೇಷ ಹಾಡಿನಲ್ಲಿ ಕುಣಿಯುವ ಅವಕಾಶ ಈಗ ಜಾನ್ಹವಿ ಕಪೂರ್​ಗೆ ಲಭಿಸಿದೆ ಎನ್ನಲಾಗುತ್ತಿದೆ.

‘ಪುಷ್ಪ’ ಸಿನಿಮಾದ ಐಟಂ ಹಾಡಾಗಿದ್ದ ‘ಊ ಅಂಟಾವ ಊಹುಂ ಅಂಟಾವ’ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಆ ಹಾಡಿಗೆ ಸಮಂತಾ ಸ್ಟೆಪ್ ಹಾಕಿದ್ದರು. ಸಮಂತಾಗೆ ಅದುವೇ ಮೊಟ್ಟ ಮೊದಲ ಐಟಂ ಹಾಡಾಗಿತ್ತು. ಈಗ ಎರಡನೇ ಭಾಗದಲ್ಲಿಯೂ ಭರ್ಜರಿಯಾಗಿ ಐಟಂ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ರೆಡಿಯಾಗಿದ್ದು, ಐಟಂ ಹಾಡಿಗೆ ಹೆಜ್ಜೆ ಹಾಕಲು ದೊಡ್ಡ ನಟಿಯನ್ನೇ ಎಳೆದು ತರಲು ಯೋಜಿಸಿದೆ. ಇದೇ ಕಾರಣಕ್ಕೆ, ಶ್ರೀಲೀಲಾ, ಕಿಯಾರಾ ಅಡ್ವಾಣಿ ಈಗ ಜಾನ್ಹವಿ ಕಪೂರ್ ಅವರುಗಳಿಗೆ ಆಫರ್ ನೀಡಲಾಗಿದೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ: ಯಾವುದು ಆ ಸಿನಿಮಾ?

ಜಾನ್ಹವಿ ಕಪೂರ್ ಈಗಾಗಲೇ ಜೂ ಎನ್​ಟಿಆರ್ ನಟನೆಯ ‘ದೇವರ’ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ರಾಮ್ ಚರಣ್ ನಟನೆಯ ಹೊಸ ಸಿನಿಮಾದಲ್ಲಿಯೂ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ತಮಿಳಿನಲ್ಲಿಯೂ ಒಂದು ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನ ಅವಕಾಶವೂ ಅರಸಿ ಬಂದಿದೆ. ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವುದು ಜಾನ್ಹವಿಗೆ ಹೊಸತಲ್ಲ, ಹಾಗಾಗಿ ‘ಪುಷ್ಪ 2’ ಸಿನಿಮಾದ ಅವಕಾಶವನ್ನು ಜಾನ್ಹವಿ ಒಪ್ಪಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಂದಹಾಗೆ ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ಕನ್ನಡತಿ ಶ್ರೀಲೀಲಾಗೆ ದೊರಕಿತ್ತು. ಆದರೆ ಶ್ರೀಲೀಲಾ, ತಾವು ನಾಯಕಿಯಾಗಿ ಸಖತ್ ಬ್ಯುಸಿಯಾಗಿರುವ ಈ ಸಮಯದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವುದು ಬೇಡ ಎಂಬ ನಿರ್ಣಯ ತೆಗೆದುಕೊಂಡು ಅದರಿಂದ ದೂರ ಉಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ