ರಿಲೀಸ್​ಗೆ ಒಂದು ತಿಂಗಳಿರುವಾಗ ಶೂಟ್ ಮುಗಿಸಿದ ‘ವಾರ್ 2’; ಭರ್ಜರಿ ಪ್ರಚಾರಕ್ಕೆ ಸಿದ್ಧತೆ

War 2 Movie Shooting: ‘ವಾರ್ 2’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಜೂನಿಯರ್ ಎನ್ಟಿಆರ್ ಅವರು ಹೃತಿಕ್ ರೋಷನ್ ಜೊತೆ ನಟಿಸಿರುವ ಈ ಚಿತ್ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಾರ್ 2 ಚಿತ್ರದ ಯಶಸ್ಸು ಖಚಿತ ಎನ್ನಲಾಗುತ್ತಿದೆ.

ರಿಲೀಸ್​ಗೆ ಒಂದು ತಿಂಗಳಿರುವಾಗ ಶೂಟ್ ಮುಗಿಸಿದ ‘ವಾರ್ 2’; ಭರ್ಜರಿ ಪ್ರಚಾರಕ್ಕೆ ಸಿದ್ಧತೆ
ಜೂನಿಯರ್ ಎನ್​ಟಿಆರ್

Updated on: Jul 08, 2025 | 7:02 AM

ಜೂನಿಯರ್ ಎನ್​ಟಿಆರ್ ಹಾಗೂ ಹೃತಿಕ್ ರೋಷನ್ (Hrithik Roshan) ನಟನೆಯ ‘ವಾರ್ 2’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಜೂನಿಯರ್ ಎನ್​ಟಿಆರ್ ಅವರಿಗೆ ಇದು ಬಾಲಿವುಡ್​ನಲ್ಲಿ ಮೊದಲ ಚಿತ್ರ. ಈ ಕಾರಣದಿಂದ ಅವರ ಅಭಿಮಾನಿಗಳು ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಸಿನಿಮಾ ರಿಲೀಸ್​ಗೆ ಒಂದು ತಿಂಗಳು ಇರುವಾಗ ಚಿತ್ರದ ಶೂಟ್ ಪೂರ್ಣಗೊಂಡಿದೆ. ಬಾಲಿವುಡ್​ನಲ್ಲಿ ಈ ಚಿತ್ರ ಉತ್ತಮ ಬೆಳೆ ತೆಗೆಯುವ ನಿರೀಕ್ಷೆ ಇದೆ.

‘ವಾರ್’ ಸಿನಿಮಾ ಈ ಮೊದಲು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಈಗ ಮುಂದಿನ ಭಾಗದಲ್ಲಿ ಜೂನಿಯರ್ ಎನ್​ಟಿಆರ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಹೃತಿಕ್ ಅವರು ಸೈನಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಗ್ಗೆ ಜೂನಿಯರ್ ಎನ್​ಟಿಆರ್ ಅವರು ಸೋಶೀಯಲ್ ಮೀಡಿಯಾದಲ್ಲಿ ಸಿನಿಮಾ ಶೂಟ್ ಪೂರ್ಣಗೊಂಡ ಬಗ್ಗೆ  ಬರೆದುಕೊಂಡಿದ್ದಾರೆ.

‘ವಾರ್ 2 ಶೂಟಿಂಗ್ ಪೂರ್ಣಗೊಂಡಿದೆ. ಹೃತಿಕ್ ಸರ್ ಜೊತೆ ಸೆಟ್​ನಲ್ಲಿ ಇರೋದು ನಿಜಕ್ಕೂ ಖುಷಿ ವಿಚಾರ. ನಿರ್ದೇಶನ ಅಯಾನ್ ಮುಖರ್ಜಿ ನಿಜಕ್ಕೂ ಅದ್ಭುತ. ಪ್ರೇಕ್ಷಕರಿಗೆ ವಿಶೇಷ ಮನರಂಜನೆ ಇಟ್ಟಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ತಂಡಕ್ಕೆ ಧನ್ಯವಾದ. ಆಗಸ್ಟ್ 14ರಂದು ಸಿನಿಮಾ ರಿಲೀಸ್ ಆಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ
‘ನನಗೆ ಗಾಯತ್ರಿ ಮಂತ್ರ, ಹನುಮಾನ್ ಚಾಲೀಸ್ ಕೇಳೋದು ಇಷ್ಟ’; ಮುಸ್ಲಿಂ ನಟಿ
‘ಬಂಧನ’ ಸಿನಿಮಾ ತಡೆಯಲು ಬ್ಲೇಡ್ ಹೊಡೆದು, ಖಾರದ ಪುಡಿ ಎರಚಿದ್ದರು
‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ರಾಕ್​ಸ್ಟಾರ್​ಗೆ ಮಣೆ?  
ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ

ಇದನ್ನೂ ಓದಿ:  ಜೂನಿಯರ್ ಎನ್​ಟಿಆರ್ ಕನ್ನಡ ಪ್ರೇಮಕ್ಕೆ ಈ ವ್ಯಕ್ತಿಯೇ ಕಾರಣ

ಜೂನಿಯರ್ ಎನ್​ಟಿಆರ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ‘ಆರ್​ಆರ್​ಆರ್’ ಹಾಗೂ ‘ದೇವರ’ ಬಳಿಕ ಅವರ ಫ್ಯಾನ್ಸ್ ಬೇಸ್ ಹಿರಿದಾಗಿದೆ. ‘ವಾರ್ 2’ ಬಳಿಕ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರ ಜೂನ್ 25ರಂದು ತೆರೆಗೆ ಬರಲಿದೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಆ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಜೊತೆಯೂ ಸಿನಿಮಾ ಮಾಡಲಿದ್ದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Tue, 8 July 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us