AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?

Jr NTR: ನಟ ಜೂ ಎನ್​ಟಿಆರ್ ಸಿನಿಮಾ ಬಗ್ಗೆ, ಅವರ ನಟನೆ, ಡ್ಯಾನ್ಸ್ ಇನ್ನಿತರೆ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈಗ ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಜೂ ಎನ್​ಟಿಆರ್ ಹಿಂದು ಅಲ್ಲ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷ್ಯವನ್ನು ಸಹ ತೋರಿಸಲಾಗುತ್ತಿದೆ. ಏನಿದು ವಿವಾದ?

ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?
Jr Ntr
ಮಂಜುನಾಥ ಸಿ.
|

Updated on:May 11, 2025 | 8:58 PM

Share

ಜೂ ಎನ್​ಟಿಆರ್ (Jr NTR), ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ‘ಆರ್​ಆರ್​​ಆರ್’ ಸಿನಿಮಾದ ಬಳಿಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿಬಿಟ್ಟಿದ್ದಾರೆ. ‘ದೇವರ’ ಸಿನಿಮಾವನ್ನು ಜಪಾನ್ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿಯೂ ಹಿಟ್ ಮಾಡಿಸಿದ್ದಾರೆ. ಬಾಲಿವುಡ್​ನ ‘ವಾರ್ 2’ನಲ್ಲಿ ನಟಿಸಿರುವ ಜೂ ಎನ್​ಟಿಆರ್, ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೂ ಎನ್​ಟಿಆರ್ ಸಿನಿಮಾಗಳ ಬಗ್ಗೆ, ನಟನೆ, ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಸಾಮಾನ್ಯ. ಆದರೆ ಈಗ ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ ಶುರುವಾಗಿದೆ. ಜೂ ಎನ್​ಟಿಆರ್ ಹಿಂದು ಅಲ್ಲ ಎನ್ನಲಾಗುತ್ತಿದೆ.

ಜೂ ಎನ್​ಟಿಆರ್, ಹಿಂದು ಅಲ್ಲ ಮುಸ್ಲಿಂ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೆ ಪೂರಕವಾಗಿ ಭೂ ದಾಖಲೆಯೊಂದರ ಪ್ರತಿಯೊಂದರ ಚಿತ್ರವನ್ನು ಹರಿಬಿಡಲಾಗುತ್ತಿದೆ. ಕೆಲವು ಯೂಟ್ಯೂಬ್ ಚಾನೆಲ್, ಟ್ರೋಲ್ ಪೇಜ್​ಗಳಲ್ಲಿ ಜೂ ಎನ್​ಟಿಆರ್ ಹಿಂದು ಅಲ್ಲ ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೇಳಲಾಗುತ್ತಿದೆ. ಸಾಕ್ಷಿಯಾಗಿ ಜಮೀನಿನ ದಾಖಲೆಯೊಂದನ್ನು ತೋರಿಸಲಾಗುತ್ತಿದೆ.

ಹೈದರಾಬಾದ್​ನ ಆಸ್ತಿ ಮಾಹಿತಿ ಪಡೆಯುವ ವೆಬ್ ಸೈಟ್​ ಒಂದರಲ್ಲಿ ನಿಗದಿತ ಸಂಖ್ಯೆಯನ್ನು ನಮೂದಿಸಿದಾಗ ಅಲ್ಲಿ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂಬ ಹೆಸರಿನವರಿಗೆ ಸೇರಿದ ಆಸ್ತಿಯ ಮಾಹಿತಿ ಬರುತ್ತಿದೆ. ಆದರೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಅವರ ತಂದೆಯ ಹೆಸರು ನಂದಮೂರಿ ಹರಿ ಕೃಷ್ಣ ಎಂದು ಬರುತ್ತಿದೆ. ಅದೇ ದಾಖಲೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಳ್ಳುತ್ತಿರುವ ಕೆಲ ನೆಟ್ಟಿಗರು, ಇದು ಜೂ ಎನ್​ಟಿಆರ್ ಇತ್ತೀಚೆಗೆ ಖರೀದಿ ಮಾಡಿರುವ ಆಸ್ತಿ, ಅವರ ನಿಜವಾದ ಹೆಸರಿನಲ್ಲಿ ಆಸ್ತಿ ನೊಂದಾವಣಿ ಆಗಿದೆ. ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ವಾದಿಸಿದ್ದಾರೆ.

ಕೆಲವರು ಇನ್ನೂ ಮುಂದೆ ಹೋಗಿ, ನಂದಮೂರಿ ಹರಿಕೃಷ್ಣ ಅವರ ಪತ್ನಿ ಮುಸ್ಲಿಂ ಆಗಿದ್ದು, ಅವರು ತಮ್ಮ ಮಗನಿಗೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೆಸರಿಟ್ಟಿದ್ದರು. ಆದರೆ ಸಿನಿಮಾಕ್ಕೆ ಬರಲು ಅನುಕೂಲವಾಗಲೆಂದು ಅವರ ತಾತನವರೇ ನಂದಮೂರಿ ತಾರಕ ರಾಮಾ ರಾವ್ ಎಂದು ಹೆಸರಿಟ್ಟರು ಎಂದಿದ್ದಾರೆ.

ಇದನ್ನೂ ಓದಿ:ನಿರ್ಮಾಪಕರೊಟ್ಟಿಗೆ ಜಗಳ, ಜೂ ಎನ್​ಟಿಆರ್ ಸಿನಿಮಾದಿಂದ ಹೊರಬಂದ ಡ್ಯೂಪ್

ಆದರೆ ವಿಕಿಪೀಡಿಯಾ ಮಾಹಿತಿ ಬೇರೆಯದ್ದೇ ಇದೆ. ವಿಕಿಪೀಡಿಯಾ ಹೇಳುವಂತೆ ಜೂ ಎನ್​ಟಿಆರ್ ಅವರ ನಿಜವಾದ ಹೆಸರು ತಾರಕ್ ರಾಮ್. ಆ ನಂತರ ಅವರನ್ನು ಹೆಸರನ್ನು ಅವರ ತಾತನ ನೆನಪಿಗಾಗಿ ನಂದಮೂರಿ ತಾರಕ ರಾಮಾ ರಾವ್ ಎಂದು ಬದಲಾಯಿಸಲಾಯಿತು. ಇನ್ನು ಜೂ ಎನ್​ಟಿಆರ್ ಅವರ ತಾಯಿಯ ಹೆಸರು ಶಾಲಿನಿ ನಂದಮೂರಿ. ಅವರು ಮೂಲತಃ ಕರ್ನಾಟಕದ ಕುಂದಾಪುರದವರು. ಶಾಲಿನಿ ಅವರ ತಂದೆಯ ಹೆಸರು ಭಾಸ್ಕರ್ ರಾವ್. ಇತ್ತೀಚೆಗಷ್ಟೆ ತಾಯಿಯನ್ನು ಕುಂದಾಪುರಕ್ಕೆ ಕರೆತಂದಿದ್ದರು ಜೂ ಎನ್​ಟಿಆರ್. ಈ ವೇಳೆ ಅವರು ಉಡುಪಿ ಕೃಷ್ಣನ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಅಲ್ಲದೆ ಜೂ ಎನ್​ಟಿಆರ್  ಅವರು ತಮ್ಮ ನಟನೆಗೆ, ವ್ಯಕ್ತಿತ್ವಕ್ಕೆ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಧರ್ಮದ ಕಾರಣದಿಂದ ಅಲ್ಲ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sun, 11 May 25

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ