JR.NTR ‘ದೇವರ 2’ ಚಿತ್ರದ ಶೂಟ್​ಗೆ ರೆಡಿ ಆಯ್ತು ಕುಮಟಾ; ಸಿದ್ಧವಾಗ್ತಿದೆ ಬೃಹತ್ ಸೆಟ್​

ಜೂನಿಯರ್ ಎನ್​ಟಿಆರ್ ನಟನೆಯ 'ದೇವರ 2' ಚಿತ್ರದ ಚಿತ್ರೀಕರಣ ಕರ್ನಾಟಕದ ಕುಮಟಾದಲ್ಲಿ ಆರಂಭವಾಗಲಿದೆ. ಬೃಹತ್ ಸೆಟ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲು ಶ್ರೀಲಂಕಾದಲ್ಲಿ ಚಿತ್ರೀಕರಣದ ಯೋಜನೆ ಇತ್ತು. ಕನ್ನಡ ಕಲಾವಿದರಿಗೂ ಅವಕಾಶ ದೊರೆಯಲಿದೆ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

JR.NTR ‘ದೇವರ 2’ ಚಿತ್ರದ ಶೂಟ್​ಗೆ ರೆಡಿ ಆಯ್ತು ಕುಮಟಾ; ಸಿದ್ಧವಾಗ್ತಿದೆ ಬೃಹತ್ ಸೆಟ್​
ದೇವರ ಸಿನಿಮಾ (ಸಾಂದರ್ಭಿಕ ಚಿತ್ರ )

Updated on: Apr 04, 2025 | 7:02 AM

ಎಲ್ಲಿಯ ಟಾಲಿವುಡ್ (Tollywood), ಎಲ್ಲಿಯ ಕುಮಟಾ? ಆದಾಗ್ಯೂ ಟಾಲಿವುಡ್​ನ ಒಂದು ದೊಡ್ಡ ಸಿನಿಮಾ ತಂಡ ಕುಮಟಾದಲ್ಲಿ ಬೀಡು ಬಿಡಲು ಸಿದ್ಧವಾಗಿದೆ. ಅದುವೇ ಜೂನಿಯರ್ ಎನ್​ಟಿಆರ್ (JR.NTR) ನಟನೆಯ ‘ದೇವರ’ ತಂಡ. ಹೌದು, ‘ದೇವರ ಪಾರ್ಟ್ 1’ ಹಿಟ್ ಆದ ಬಳಿಕ ಈಗ ತಂಡ ‘ದೇವರ 2’ ಶೂಟ್​ಗೆ ರೆಡಿ ಆಗಿದೆ. ಇದಕ್ಕೆ ಉತ್ತರ ಕನ್ನಡದ ಕುಮಟಾದಲ್ಲಿ ಬೃಹತ್ ಸೆಟ್​ಗಳ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವೇ ತಂಡದವರು ಇಲ್ಲಿ ಬೀಡು ಬಿಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

‘ದೇವರ’ ಸಿನಿಮಾದ ಕಥೆ ಸಾಗೋದು ಸಮುದ್ರ ತೀರದಲ್ಲಿ. ಇನ್ಯಾವುದೇ ಬೇರೆ ರೀತಿಯ ಸೆಟ್​ಗಳು ಬೇಕು ಎಂದಿದ್ದರೆ ತಂಡದವರು ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲ್ಮ್​ ಸಿಟಿಯಲ್ಲೇ ಸೆಟ್ ಹಾಕಿ ಶೂಟ್ ಮಾಡುತ್ತಿದ್ದರು. ಸಮುದ್ರ ತೀರದಲ್ಲೇ ಶೂಟ್ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ತಂಡ ಕುಮಟಾ ನಗರವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ‘ದೇವರ 2’ ಶೂಟ್ ಮಾಡಲು ಶ್ರೀಲಂಕಾಗೆ ತೆರಳಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಸಿನಿಮಾಗೆ ಹೆಚ್ಚಿನ ಬಜೆಟ್ ಬೇಕಾಗುತ್ತದೆ. ನಮ್ಮ ದೇಶದಲ್ಲೇ ಇಷ್ಟೊಂದು ಸಮುದ್ರ ತೀರಗಳು ಇರುವಾಗ ಬೇರೆ ದೇಶ ಏಕೆ? ಹೀಗಾಗಿ, ಉತ್ತರ ಕನ್ನಡದ ಕುಮಟಾದಲ್ಲಿ ಸೆಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜೂನಿಯರ್ ಎನ್​ಟಿಆರ್​ಗೆ ಕರ್ನಾಟಕದ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಜೊತೆ ಒಳ್ಳೆಯ ಗೆಳೆತನ ಇದೆ. ಇವರು ಕೂಡ ಇಲ್ಲಿ ಸೆಟ್​ ನಿರ್ಮಾಣ ಮಾಡಲು ಸಲಹೆ ನೀಡಿರಬಹುದೇ ಎನ್ನುವ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ
ನನಗೆ ಒಬ್ಬರ ಮೇಲೆ ಸಖತ್ ಲವ್ ಆಗಿದೆ; ವೇದಿಕೆ ಮೇಲೆ ಮನಬಿಚ್ಚಿ ಮಾತಾಡಿದ ರಮೋಲ
ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವೇ ಹಾಳಾಯಿತು
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್

ಕುಮಟಾ ತುಂಬಾನೇ ಬೃಹತ್ ನಗರವೇನಲ್ಲ. ಹೀಗಾಗಿ, ಅಲ್ಲಿನ ಬೀಚ್​​ಗಳಲ್ಲಿ ಸೆಟ್​ಗಳ ನಿರ್ಮಾಣ ಆದರೆ ತುಂಬಾನೇ ಅಭಿಮಾನಿಗಳು ನೆರೆಯುತ್ತಾರೆ ಎನ್ನುವ ತಲೆಬಿಸಿ ಕೂಡ ಇರುವುದಿಲ್ಲ. ಈ ಕಾರಣಕ್ಕೆ ಉತ್ತರ ಕನ್ನಡ ಉತ್ತಮ ಆಯ್ಕೆ ಎಂಬ ನಿರ್ಧಾರಕ್ಕೆ ತಂಡದವರು ಬಂದಂತೆ ಇದೆ.

ಇದನ್ನೂ ಓದಿ: ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

‘ದೇವರ’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಪ್ರಕಾಶ್ ರೈ ಮೊದಲಾದವರು ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಯಾರಾದರೂ ಬೇರೆ ಕಲಾವಿದರು ಸೇರ್ಪಡೆ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಕರ್ನಾಟಕದಲ್ಲೇ ಶೂಟ್ ಆಗುತ್ತಿರುವುದರಿಂದ ಕನ್ನಡದ ಕಲಾವಿದರಿಗೂ ಅವಕಾಶ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.