AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರ’ ಚಿತ್ರಕ್ಕೆ ಮುಳುವಾಗುತ್ತಾ ರಾಜಮೌಳಿ ಶಾಪ? ಏನಿದು ನಂಬಿಕೆ?

ಜೂನಿಯರ್​​ ಎನ್​ಟಿಆರ್​ ಅವರು ‘ದೇವರ’ ಮೂಲಕ ತೆರೆಮೇಲೆ ಬರಲು ರೆಡಿ ಆಗಿದ್ದಾರೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಗೆಲ್ಲೋದು ಅನುಮಾನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ರಾಜಮೌಳಿ ಶಾಪದ ವಿಚಾರವೂ ಚರ್ಚೆ ಹುಟ್ಟುಹಾಕಿದೆ.

‘ದೇವರ’ ಚಿತ್ರಕ್ಕೆ ಮುಳುವಾಗುತ್ತಾ ರಾಜಮೌಳಿ ಶಾಪ? ಏನಿದು ನಂಬಿಕೆ?
ರಾಜಮೌಳಿ-ಎನ್​ಟಿಆರ್
ರಾಜೇಶ್ ದುಗ್ಗುಮನೆ
|

Updated on: Sep 12, 2024 | 7:28 AM

Share

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ‘ಆಚಾರ್ಯ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ‘ದೇವರ’ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಗೆಲ್ಲೋದು ಅನುಮಾನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಒಂದು ನಂಬಿಕೆ ಬಗ್ಗೆ ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.

ರಾಜಮೌಳಿ ಜೊತೆ ಸಿನಿಮಾ ಮಾಡಿದ ಹೀರೋಗಳ ಮುಂದಿನ ಸಿನಿಮಾ ಫ್ಲಾಪ್ ಆಗುತ್ತದೆ ಎಂಬ ನಂಬಿಕೆ ಟಾಲಿವುಡ್​​ನಲ್ಲಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ ಕೂಡ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿಸಿದ್ದ ರಾಮ್ ಚರಣ್ ಅವರು ‘ಆಚಾರ್ಯ’ ಸಿನಿಮಾ ಮೂಲಕ ದೊಡ್ಡ ಸೋಲು ಕಂಡರು. ಈಗ ಜೂನಿಯರ್​ ಎನ್​ಟಿಆರ್ ಫ್ಯಾನ್ಸ್​ಗೂ ಆತಂಕ ಬಹುವಾಗಿ ಕಾಡುತ್ತಿದೆ.

ಜೂನಿಯರ್​ ಎನ್​ಟಿಆರ್​ಗೆ ಈ ಅನುಭವ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ರಾಜಮೌಳಿ ನಿರ್ದೇಶನದ, ಜೂನಿಯರ್​ ಎನ್​​ಟಿಆರ್ ನಟನೆಯ ‘ಸ್ಟುಡೆಂಟ್ ನಂಬರ್ 1’ ಸಿನಿಮಾ ಗೆದ್ದ ಬಳಿಕ ರಿಲೀಸ್ ಆದ ‘ಸುಬ್ಬು’ ಫ್ಲಾಪ್ ಆಯಿತು. ‘ಸಿಂಹಾದ್ರಿ’ ಗೆಲುವಿನ ಬಳಿಕ ಅವರು ‘ಆಂಧ್ರಾವಾಲ’ ಚಿತ್ರದ ಮೂಲಕ ಸೋಲು ಕಂಡರು. ‘ಯಮದೊಂಗ’ ಗೆಲುವಿನ ಬಳಿಕ ಜೂನಿಯರ್ ಎನ್​ಟಿಆರ್ ‘ಕಂತ್ರಿ’ ಚಿತ್ರದ ಮೂಲಕ ಸೋಲು ಕಂಡರು. ಈ ನಂಬಿಕೆ ಫ್ಯಾನ್ಸ್ ಅವರನ್ನು ಬಲವಾಗಿ ಕಾಡುತ್ತಿದೆ.

ಇದನ್ನೂ ಓದಿ: ಜೂನಿಯರ್​ ಎನ್​ಟಿಆರ್​ಗೆ ಆದ ಗಾಯದಿಂದ ‘ವಾರ್ 2’ ಚಿತ್ರಕ್ಕೆ ದೊಡ್ಡ ನಷ್ಟ

‘ಆರ್​ಆರ್​ಆರ್’ ಬಳಿಕ ಜೂನಿಯರ್​ ಎನ್​ಟಿಆರ್ ಅವರ ನಟನೆಯ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದು ‘ದೇವರ’. ಈ ಕಾರಣಕ್ಕೆ ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.  ಇತ್ತೀಚೆಗೆ ಜೂನಿಯರ್ ಎನ್​ಟಿಆರ್ ಸಿನಿಮಾ ಬಗ್ಗೆ ಮಾತನಾಡಿದ್ದರು. ‘ಆರು ವರ್ಷಗಳ ಬಳಿಕ ಸೋಲೋ ಹೀರೋ ಆಗಿ ಬರುತ್ತಿದ್ದೇನೆ. ಈ ಕಾರಣಕ್ಕೆ ನರ್ವಸ್ ಇದೆ. ಉತ್ತರ ಭಾರತದ ಮಂದಿ ಆರ್​ಆರ್​ಆರ್​ ಚಿತ್ರವನ್ನು ಒಪ್ಪಿಕೊಂಡಂತೆ ದೇವರ ಚಿತ್ರವನ್ನು ಒಪ್ಪುತ್ತೀರಿ ಎನ್ನುವ ನಂಬಿಕೆ ಇದೆ’ ಎಂದಿದ್ದರು ಜೂನಿಯರ್ ಎನ್​ಟಿಆರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More