ಮತ್ತೊಂದು ಆಕ್ಷನ್ ಸಿನಿಮಾದಲ್ಲಿ ಜೂ ಎನ್ಟಿಆರ್, ಎರಡು ಪಾರ್ಟ್ಗಳಲ್ಲಿ ಕತೆ
ಜೂ ಎನ್ಟಿಆರ್ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನೇ ಪ್ರಾರಂಭ ಮಾಡಲು ಸಮಯ ಸಾಕಾಗುತ್ತಿಲ್ಲ. ಇದರ ನಡುವೆ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಯಾವುದದು?
‘ಆರ್ಆರ್ಆರ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಜೂ ಎನ್ಟಿಆರ್, ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಜೂ ಎನ್ಟಿಆರ್ ಇದೀಗ ಮತ್ತೊಬ್ಬ ನಿರ್ದೇಶಕರೊಟ್ಟಿಗೆ ಸಿನಿಮಾ ಮಾತುಕತೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಕೆಲ ರೊಮ್ಯಾಂಟಿಕ್ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ, ಜೂ ಎನ್ಟಿಆರ್ಗೆ ಆಕ್ಷನ್ ಸಿನಿಮಾದ ಕತೆ ಹೇಳಿದ್ದು, ಕತೆಯನ್ನು ಜೂ ಎನ್ಟಿಆರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ದೇವರ’ ರೀತಿಯಲ್ಲಿಯೇ ಈ ಸಿನಿಮಾ ಸಹ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ.
ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿದ್ದ ‘ಹಾಯ್ ನಾನ್ನ’ ಸಿನಿಮಾ ನಿರ್ದೇಶನ ಮಾಡಿದ್ದ ಶೌರ್ಯ, ಜೂ ಎನ್ಟಿಆರ್ಗೆ ಭರ್ಜರಿ ಆಕ್ಷನ್ ಥ್ರಿಲ್ಲರ್ ಕತೆಯೊಂದನ್ನು ಹೇಳಿ ಒಪ್ಪಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದ ಸಂಪೂರ್ಣ ಚಿತ್ರಕತೆ ಈಗಾಗಲೇ ತಯಾರಾಗಿದೆಯಂತೆ. ಆದರೆ ಈ ಸಿನಿಮಾ ಸೆಟ್ಟೇರಲು ಇನ್ನೂ ಎರಡು ವರ್ಷ ಸಮಯವಿದೆ. 2026 ರಲ್ಲಿ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ. ಅದಾದ ಬಳಿಕ ಎರಡು ವರ್ಷದ ಚಿತ್ರೀಕರಣ ನಡೆದು ಬಳಿಕವಷ್ಟೆ ಸಿನಿಮಾ ಬಿಡುಗಡೆ ಆಗಲಿದೆ.
ಜೂ ಎನ್ಟಿಆರ್ ಪ್ರಸ್ತುತ ಮೂರು ದೊಡ್ಡ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಜಾನ್ಹವಿ ಕಪೂರ್ ಈ ಸಿನಿಮಾದ ನಾಯಕಿ. ಸಿನಿಮಾ ಎರಡು ಪಾರ್ಟ್ಗಳಲ್ಲಿ ತೆರೆಗೆ ಬರಲಿದೆ. ಸಾಗರದ ಅಂಚಿನಲ್ಲಿ ನೆಲೆಸಿದ್ದ ಲೆಜೆಂಡರಿ ವ್ಯಕ್ತಿಯ ಬಗೆಗಿನ ಸಿನಿಮಾ ಇದು. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:SS Rajamouli: ಮೊದಲ ಬಾರಿ ಜೂ ಎನ್ಟಿಆರ್ ಅನ್ನು ನೋಡಿ ಹಣೆ ಚಚ್ಚಿಕೊಂಡಿದ್ದ ರಾಜಮೌಳಿ
ಇನ್ನು ‘ದೇವರ’ ಸಿನಿಮಾದ ಜೊತೆಗೆ ಹಿಂದಿಯ ‘ವಾರ್ 2’ ಸಿನಿಮಾ ಸಹ ಪ್ರಾರಂಭ ಮಾಡಿದ್ದಾರೆ ಜೂ ಎನ್ಟಿಆರ್. ಈ ಹಿಂದಿ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಜೂ ಎನ್ಟಿಆರ್ ನಟಿಸಲಿದ್ದಾರೆ. ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದೆ. ‘ವಾರ್ 2’ ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ. ಆ ಸಿನಿಮಾ ಮುಗಿದ ಬಳಿಕವಷ್ಟೆ ಜೂ ಎನ್ಟಿಆರ್ ಶೌರ್ಯ ಜೊತೆಗಿನ ಸಿನಿಮಾದಲ್ಲಿ ನಟಿಸುತ್ತಾರೆ. ಶೌರ್ಯ ನಿರ್ದೇಶಿಸಲಿರುವ ಸಿನಿಮಾ 2026 ರಲ್ಲಿ ಪ್ರಾರಂಭವಾಗಿ ಮೊದಲ ಭಾಗ 2028 ರಲ್ಲಿ ಬಿಡುಗಡೆ ಆಗಲಿದೆ. ಎರಡನೇ ಭಾಗ 2030 ರಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ