ಜೂ ಎನ್​ಟಿಆರ್ ಕೈಯಲ್ಲಿರುವ ಈ ವಾಚ್​ ಬೆಲೆಗೆ ಒಂದು ಸಿನಿಮಾ ನಿರ್ಮಿಸಬಹುದು

Jr NTR Watch: ಜೂ ಎನ್​ಟಿಆರ್ ಇತ್ತೀಚೆಗೆ ತಮ್ಮ ‘ಡ್ರ್ಯಾಗನ್’ ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ್ದಾಗ ವಾಚ್ ಒಂದನ್ನು ಧರಿಸಿದ್ದರು. ಈ ವಾಚಿನ ಬೆಲೆ ಕೆಲವು ಕೋಟಿಗಳು ಎಂದರೆ ನಂಬಲೇ ಬೇಕು.

ಜೂ ಎನ್​ಟಿಆರ್ ಕೈಯಲ್ಲಿರುವ ಈ ವಾಚ್​ ಬೆಲೆಗೆ ಒಂದು ಸಿನಿಮಾ ನಿರ್ಮಿಸಬಹುದು
Follow us
ಮಂಜುನಾಥ ಸಿ.
|

Updated on: Aug 11, 2024 | 8:16 AM

ಜೂ ಎನ್​ಟಿಆರ್ ಭಾರತದ ಅತ್ಯಂತ ದುಬಾರಿ ನಟರಲ್ಲಿ ಒಬ್ಬರು. ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ಟಾಪ್ 10 ಸೂಪರ್ ಸ್ಟಾರ್​ ನಟರಲ್ಲಿ ಜೂ ಎನ್​ಟಿಆರ್ ಅವರ ಹೆಸರು ಸಹ ಇದೆ. ‘ಆರ್​ಆರ್​ಆರ್’ ಸಿನಿಮಾದ ಬಿಡುಗಡೆ ಬಳಿಕವಂತೂ ಇವರ ಸಂಭಾವನೆ ಮೊತ್ತ ದುಪ್ಪಟ್ಟು ಏರಿಕೆ ಆಗಿದೆಯಂತೆ. ಸಿನಿಮಾ ನಟನೆ ಜೊತೆಗೆ ಅಣ್ಣನ ಜೊತೆ ಸಿನಿಮಾ ನಿರ್ಮಾಣವನ್ನೂ ಮಾಡುವ ಜೂ ಎನ್​ಟಿಆರ್​ ವರ್ಷಕ್ಕೆ ನೂರಾರು ಕೋಟಿ ಹಣ ಗಳಿಸುತ್ತಾರೆ. ಇತ್ತೀಚೆಗೆ ಜೂ ಎನ್​ಟಿಆರ್ ನಟನೆಯ ಹೊಸ ಸಿನಿಮಾ ಸೆಟ್ಟೇರಿತು. ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೂ ಎನ್​ಟಿಆರ್, ಕೈಗೆ ತೊಟ್ಟಿದ್ದ ಗಡಿಯಾರ ಸಖತ್ ಗಮನ ಸೆಳೆಯಿತು. ಅಂದಹಾಗೆ ಈ ಗಡಿಯಾರದ ಬೆಲೆಗೆ ಒಂದು ಸಣ್ಣ ಬಜೆಟ್​ನ ಸಿನಿಮಾ ನಿರ್ಮಾಣ ಮಾಡಿಬಿಡಬಹುದು.

ಜೂ ಎನ್​ಟಿಆರ್ ಗೆ ಐಶಾರಾಮಿ ವಸ್ತುಗಳನ್ನು ಖರೀದಿಸುವ ಚಪಲವಿದೆ. ಐಶಾರಾಮಿ ಕಾರುಗಳು, ದುಬಾರಿ ಉಡುಗೆಗಳ ಜೊತೆಗೆ ಇತ್ತೀಚೆಗೆ ದುಬಾರಿ ವಾಚುಗಳ ಸಂಗ್ರಹದ ಮೇಲೆ ಆಸಕ್ತಿ ಮೂಡಿದಂತಿದೆ. ನಟ ರಾಮ್ ಚರಣ್​ ತೇಜಗೆ ದುಬಾರಿ ವಾಚುಗಳ ಬಗ್ಗೆ ಬಹಳ ಹಿಂದಿನಿಂದಲೂ ಆಸಕ್ತಿ ಇದೆ. ಆದರೆ ಜೂ ಎನ್​ಟಿಆರ್​ಗೆ ಇತ್ತೀಚೆಗೆ ಈ ಆಸಕ್ತಿ ಮೂಡಿದಂತಿದೆ. ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ‘ಡ್ರ್ಯಾಗನ್’ ಸಿನಿಮಾದ ಮುಹೂರ್ತಕ್ಕೆ ಬಂದಿದ್ದ ಜೂ ಎನ್​ಟಿಆರ್ ಕಪ್ಪು ಬಣ್ಣದ ಲೆದರ್ ಬೆಲ್ಟ್ ಹೊಂದಿರುವ ನೀಲಿ-ಚಿನ್ನದ ಬಣ್ಣದ ಡಯಲ್ ಹೊಂದಿರುವ, ನೋಡಲು ತೀರ ಅದ್ಧೂರಿ ಎಂದೇನೂ ಅನಿಸದಿದ್ದ ವಾಚ್ ಒಂದನ್ನು ಧರಿಸಿದ್ದರು. ಇದರ ಬೆಲೆ ಬರೋಬ್ಬರಿ 2.53 ಕೋಟಿ ರೂಪಾಯಿಗಳು!

ಇದನ್ನೂ ಓದಿ:ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಮುಹೂರ್ತ, ಬಿಡುಗಡೆ ದಿನಾಂಕವೂ ಘೋಷಣೆ

ಹೌದು, ‘ಡ್ರ್ಯಾಗನ್’ ಸಿನಿಮಾದ ಮುಹೂರ್ತದಲ್ಲಿ ಜೂ ಎನ್​ಟಿಆರ್ ಕಟ್ಟಿದ್ದ ವಾಚಿನ ಬೆಲೆ ಬರೋಬ್ಬರಿ 2.53 ಕೋಟಿ ರೂಪಾಯಿಗಳು. ಈ ಬೆಲೆಗೆ ಒಂದು ಒಳ್ಳೆಯ ಸಣ್ಣ ಬಜೆಟ್ ಸಿನಿಮಾ ನಿರ್ಮಾಣ ಮಾಡಿಬಿಡಬಹುದು. ಅಂದಹಾಗೆ ಜೂ ಎನ್​ಟಿಆರ್ ಧರಿಸಿದ್ದು ಪೆಟೆಕ್ ಫಿಲಿಫ್ ಸಂಸ್ಥೆಯ ವಾಚು. ಸೆಲ್ಫ್​ ವೆಂಡಿಂಗ್ ಮೆಕ್ಯಾನಿಕಲ್ ಮೂಮೆಂಟ್ ಹೊಂದಿರುವ ವಾಚಿದು. ಅಪರೂಪದ ಮಾಡೆಲ್​ನ ಈ ವಾಚಿನಲ್ಲಿ ಬಿಳಿ ಚಿನ್ನದ ಬಳಕೆಯನ್ನೂ ಸಹ ಮಾಡಲಾಗಿದೆ. ಇದರ ಬೆಲ್ಟ್​ ಅನ್ನು ಮೊಸಳೆಯ ಚರ್ಮದಿಂದ ಮಾಡಲಾಗಿದೆ. ಕೈಯಲ್ಲಿಯೇ ಹೊಲಿಯಾಗಿದೆ. ಇದೊಂದು ಅಪರೂಪದ ವಾಚ್ ಆಗಿದ್ದು ಅದೇ ಕಾರಣಕ್ಕೆ ಇದಕ್ಕೆ ಇಷ್ಟೋಂದು ಬೆಲೆ. ಇಂಥಹಾ ಹಲವು ವಾಚುಗಳು ಜೂ ಎನ್​ಟಿಆರ್ ಸಂಗ್ರಹದಲ್ಲಿ ಇವೆ.

ಜೂ ಎನ್​ಟಿಆರ್ ಬಳಿ ಇರುವ ಐಶಾರಾಮಿ ವಸ್ತುಗಳ ಸಂಗ್ರಹದ ಪಟ್ಟಿ ಉದ್ದವಿದೆ. ಐಶಾರಾಮಿ ಲ್ಯಾಂಬೊರ್ಗಿನಿ ಜಿಟಿ, ಉರುಸ್ ಕಾರುಗಳು, ಫೆರಾರಿ, ಲ್ಯಾಂಡ್ ರೋವರ್, ರೇಂಜ್ ರೋವರ್ ಕಾರು ಇನ್ನೂ ಹಲವು ಐಶಾರಾಮಿ ವಸ್ತುಗಳನ್ನು ಜೂ ಎನ್​ಟಿಆರ್ ಹೊಂದಿದ್ದಾರೆ. ಇನ್ನು ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿರುವ ‘ಡ್ರ್ಯಾಗನ್’ ಸಿನಿಮಾ ಸಹ ಸೆಟ್ಟೇರಿದೆ. ‘ದೇವರ’ ಸಿನಿಮಾದ ಬಿಡುಗಡೆ ಬಳಿಕವಷ್ಟೆ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ