Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಧರಿಸಿರುವ ಈ ವಾಚ್​ನ ಬೆಲೆ 7.47 ಕೋಟಿ, ಏನಿದರ ವಿಶೇಷತೆ?

Jr NTR: ಜೂ ಎನ್​ಟಿಆರ್ ಪ್ರಸ್ತುತ ಹಿಂದಿಯ ‘ವಾರ್ 2’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂ ಎನ್​ಟಿಆರ್ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದರು. ವಿಶೇಷವಾಗಿ ಗಮನ ಸೆಳೆದಿದ್ದು ಜೂ ಎನ್​ಟಿಆರ್ ಕೈಯಲ್ಲಿದ್ದ ವಾಚು. ಜೂ ಎನ್​ಟಿಆರ್ ತೊಟ್ಟಿದ್ದ ವಾಚಿನ ಬೆಲೆ 7.47 ಕೋಟಿ ರೂಪಾಯಿ. ಈ ವಾಚಿನ ವಿಶೇಷತೆ ಏನು?

ಜೂ ಎನ್​ಟಿಆರ್ ಧರಿಸಿರುವ ಈ ವಾಚ್​ನ ಬೆಲೆ 7.47 ಕೋಟಿ, ಏನಿದರ ವಿಶೇಷತೆ?
Jr Ntr Watch
Follow us
ಮಂಜುನಾಥ ಸಿ.
|

Updated on: Mar 12, 2025 | 1:43 PM

ಜೂ ಎನ್​ಟಿಆರ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆಯನ್ನು ಅವರು ಪಡೆಯುತ್ತಾರೆ. ಪಡೆವ ದುಬಾರಿ ಸಂಭಾವನೆಗೆ ತಕ್ಕಂತೆ ಅವರ ಜೀವನ ಶೈಲಿಯೂ ಬಲು ಐಶಾರಾಮಿ ಆಗಿದೆ. ಹೈದರಾಬಾದ್​ನಲ್ಲಿ ಐಶಾರಾಮಿ ಮನೆ, ಆಂಧ್ರ, ತೆಲಂಗಾಣ, ತಮಿಳುನಾಡು, ಬೆಂಗಳೂರು, ಮುಂಬೈ, ದುಬೈ ಸೇರಿದಂತೆ ಹಲವು ಕಡೆ ಆಸ್ತಿಗಳನ್ನು ಹೊಂದಿರುವ ಜೂ ಎನ್​ಟಿಆರ್ ಐಶಾರಾಮಿ ಕಾರುಗಳ ದೊಡ್ಡ ಕಲೆಕ್ಷನ್ ಅನ್ನೇ ಹೊಂದಿದ್ದಾರೆ. ಅದಿರಲಿ ಜೂ ಎನ್​ಟಿಆರ್ ಕೈಗೆ ಕಟ್ಟುವ ವಾಚಿನ ಬೆಲೆಯೂ ಕೋಟ್ಯಂತರ ರೂಪಾಯಿ ಮೌಲ್ಯದ್ದು.

ಜೂ ಎನ್​ಟಿಆರ್​ಗೆ ಬಳಿ ಕೋಟ್ಯಂತರ ಬೆಲೆಯ ಹಲವು ವಾಚುಗಳ ಸಂಗ್ರಹ ಇದೆ. ಒಮ್ಮೊಮ್ಮೆ ಒಂದೊಂದು ರೀತಿಯ ಬಲು ದುಬಾರಿ ವಾಚುಗಳನ್ನು ಅವರು ಧರಿಸುತ್ತಾರೆ. ಇದೀಗ ಹಿಂದಿಯ ‘ವಾರ್ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಜೂ ಎನ್​ಟಿಆರ್, ಮುಂಬೈನ ವಿಮಾನ ನಿಲ್ದಾಣದಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡರು. ಜೂ ಎನ್​ಟಿಆರ್ ಅವರ ಹೊಸ ಲುಕ್​ನ ಜೊತೆಗೆ ಅವರು ಕೈಗೆ ಕಟ್ಟಿದ್ದ ವಾಚ್ ಸಹ ಬಹಳ ಗಮನ ಸೆಳೆಯಿತು. ಈ ಚಿತ್ರದಲ್ಲಿ ಜೂ ಎನ್​ಟಿಆರ್ ಧರಿಸಿರುವ ವಾಚಿನ ಬೆಲೆ ಬರೋಬ್ಬರಿ 7.47 ಕೋಟಿ ರೂಪಾಯಿಗಳು!

ಹೌದು, ರೋಲ್ಸ್ ರಾಯ್ಸ್​ ಕಾರಿಗಿಂತಲೂ ದುಬಾರಿಯಾದ ವಾಚ್ ಅನ್ನು ಜೂ ಎನ್​ಟಿಆರ್ ಕೈಗೆ ಕಟ್ಟಿಕೊಂಡಿದ್ದಾರೆ. ಜೂ ಎನ್​ಟಿಆರ್ ಕೈಯಲ್ಲಿರುವುದು ರಿಚರ್ಡ್ ಮೈಲ್ 40-01 ಟರ್ಬಿಲೈನ್ ಮೆಕ್​ಲ್ಯಾರೆನ್ ಸ್ಪೀಡ್​ಡೈಲ್ ವಾಚು. ಭಾರತದಲ್ಲಿ ಇದರ ಬೆಲೆ 7.47 ಕೋಟಿ ರೂಪಾಯಿಗಳು. ವಿದೇಶದಿಂದ ಇಲ್ಲಿಗೆ ತರಿಸಿ, ತೆರಿಗೆ ಎಲ್ಲ ಪಾವತಿಸುವಷ್ಟರಲ್ಲಿ ಇದರ ಬೆಲೆ 8 ಕೊಟಿ ದಾಟುತ್ತದೆ. ಜೂ ಎನ್​ಟಿಆರ್ ಧರಿಸಿರುವ ವಾಚು ಬಲು ಅಪರೂಪದ್ದು, ಇಡೀ ವಿಶ್ವದಲ್ಲಿ ಈ ಮಾದರಿಯ ಕೇವಲ 106 ವಾಚುಗಳಷ್ಟೆ ಇವೆ. ಅದರಲ್ಲಿ ಒಂದು ಜೂ ಎನ್​ಟಿಆರ್ ಕೈಯಲ್ಲಿದೆ.

ಮೆಕ್​ಲರೆನ್ ಕಾರಿನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಈ ವಾಚಿನಲ್ಲಿ, ಪ್ಲಾಟಿನಂ ಮತ್ತು ಚಿನನವನ್ನು ಸಹ ಬಳಸಲಾಗಿದೆ. ಅಪರೂಪದ ಮೆಕ್ಯಾನಿಸಮ್ ಅನ್ನು ಬಳಸಿ ಈ ವಾಚ್ ಅನ್ನು ನಿರ್ಮಿಸಲಾಗಿದ್ದು, ಒಂದು ವಾಚ್​ನ ನಿರ್ಮಾಣಕ್ಕೆ 2800 ಗಂಟೆಗಳು ಹಿಡಿದಿವೆ ಎಂದಿದೆ ರಿಚರ್ಡ್ ಮೈಲ್ ಸಂಸ್ಥೆ. ಬಹಳ ಸಂಕೀರ್ಣವಾದ ಮೆಕ್ಯಾನಿಸಂ ಅನ್ನು ಬಳಸಿ ಈ ವಾಚ್ ಅನ್ನು ನಿರ್ಮಾಣ ಮಾಡಲಾಗಿದೆ, ಹಲವು ಅತ್ಯುತ್ತಮ ಪರಿಣಿತ ಎಂಜಿನಿಯರ್​ಗಳು, ಡಿಸೈನರ್​ಗಳು ನೂರಾರು ದಿನ ಕೆಲಸ ಮಾಡಿ ಈ ವಾಚುಗಳನ್ನು ನಿರ್ಮಾಣ ಮಾಡಿದ್ದಾರೆ ಎಂದಿದೆ ಸಂಸ್ಥೆ.

ಇದನ್ನೂ ಓದಿ:ಜೂ ಎನ್​ಟಿಆರ್​ ಹೊಸಬ ಎಂಬ ಬಾಲಿವುಡ್ ನಿರ್ಮಾಪಕನ ಬೆವರಿಳಿಸಿದ ಸಿದ್ಧಾರ್ಥ್

ಜೂ ಎನ್​ಟಿಆರ್ ಪ್ರಸ್ತುತ ‘ವಾರ್ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ ಜೊತೆ ನಟಿಸುತ್ತಿದ್ದಾರೆ. ಅದರ ಬಳಿಕ ಪ್ರಶಾಂತ್ ನಿರ್ದೇಶನದ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಈ ಎರಡು ಸಿನಿಮಾಗಳ ಬಳಿಕ ‘ದೇವರ 2’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಅದಾದ ಬಳಿಕ ಜೂ ಎನ್​ಟಿಆರ್ ಮತ್ತೊಮ್ಮೆ ರಾಜಮೌಳಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ