ಜೂಹಿ ಮದುವೆಗೆ 2000 ಜನಕ್ಕೆ ನೀಡಲಾಗಿತ್ತು ಆಮಂತ್ರಣ; ಬಂದಿದ್ದು ಮಾತ್ರ ಬೆರಳೆಣಿಕೆ ಮಂದಿ
ಕಾರ್ಯಕ್ರಮ ಒಂದರಲ್ಲಿ ಅವರು ತಮ್ಮ ಮದುವೆ ಬಗ್ಗೆ ನೆನಪಿಸಿಕೊಂಡಿದ್ದಾರೆ. ಮದುವೆ ಆದ ವಿಚಾರ ತಿಳಿದರೆ ಆಫರ್ ಕಳೆದುಕೊಳ್ಳುವ ಭಯ ಅವರಿಗೆ ಕಾಡಿತ್ತು. ಹೀಗಾಗಿ ಮದುವೆ ಆದ ವಿಚಾರವನ್ನು ಮುಚ್ಚಿಡಲಾಗಿತ್ತು. ಸುಮಾರು 2000 ಜನರಿಗೆ ಆಮಂತ್ರಣ ಹೋಗಿತ್ತು. ಆದರೆ, ಎಲ್ಲಾ ಆಮಂತ್ರಣವನ್ನೂ ಹಿಂಪಡೆಯಲಾಯಿತು.

ನಟಿ ಜೂಹಿ ಚಾವ್ಲಾ ಹಾಗೂ ಜಯ್ ಮೆಹ್ತಾ ದಾಂಪತ್ಯಕ್ಕೆ ಈಗಾಗಲೇ 29 ವರ್ಷಗಳು ಕಳೆದಿವೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಬ್ಬರ ಮದುವೆ ತುಂಬಾನೇ ಖಾಸಗಿಯಾಗಿ ನಡೆದಿತ್ತು. ಕೆಲವೇ ಕೆಲವು ಮಂದಿ ಮಾತ್ರ ಮದುವೆಯಲ್ಲಿ ಭಾಗಿ ಆಗಿದ್ದರು. ಜೂಹಿ ಬೇಡಿಕೆಯ ನಟಿ, ಜಯ್ ಅವರು ದೊಡ್ಡ ಉದ್ಯಮಿ. ಹೀಗಿರುವಾಗ ಇವರ ವಿವಾಹ ಇಷ್ಟು ಸಿಂಪಲ್ ಆಗಿ ನಡೆದಿದ್ದು ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ. ಆರಂಭದಲ್ಲಿ ಅದ್ದೂರಿಯಾಗಿ ಮದುವೆಯಾಗಲು ಜಯ್ ಅವರು ಪ್ಲ್ಯಾನ್ ಮಾಡಿದ್ದರು. ಆದರೆ, ಇದನ್ನು ಕ್ಯಾನ್ಸಲ್ ಮಾಡಿದ್ದು ಜೂಹಿ ಚಾವ್ಲಾ.
ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಜೂಹಿ ಭಾಗಿ ಆಗಿದ್ದಾರೆ. ಅವರು ತಮ್ಮ ಮದುವೆ ಬಗ್ಗೆ ನೆನಪಿಸಿಕೊಂಡಿದ್ದಾರೆ. ವಿವಾಹ ಸಮಯದಲ್ಲಿ ಅವರು ಹಲವು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಮದುವೆ ಆದ ವಿಚಾರ ತಿಳಿದರೆ ಆಫರ್ ಕಳೆದುಕೊಳ್ಳುವ ಭಯ ಅವರಿಗೆ ಕಾಡಿತ್ತು. ಹೀಗಾಗಿ ಮದುವೆ ಆದ ವಿಚಾರವನ್ನು ಮುಚ್ಚಿಡಲಾಗಿತ್ತು.
‘ನಾನು ಆ ಸಂದರ್ಭದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದೆ. ಆಗ ನಾನು ಮದುವೆ ಆಗಬೇಕಿತ್ತು. ಒಂದು ವರ್ಷದ ಹಿಂದೆ ನನ್ನ ತಾಯಿ ತೀರಿ ಹೋಗಿದ್ದರು. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ನನ್ನ ತಾಯಿ ನೆನಪು ಅತಿಯಾಗಿ ಕಾಡಿತು. ಹೆಚ್ಚು ಪ್ರೀತಿಸುತ್ತಿದ್ದ ತಾಯಿಯೇ ಇಂದು ನನ್ನ ಜೊತೆಗೆ ಇಲ್ಲವಲ್ಲ ಎನಿಸಿತು. ಮದುವೆ ಬಳಿಕ ನನ್ನ ವೃತ್ತಿ ಜೀವನವೂ ಕೊನೆಯಾಗುತ್ತದೆ ಎನಿಸಿತು. ಈ ಬಗ್ಗೆ ಖುಷಿ ಆಗಿರೋದು ಹೇಗೆ? ಆಗ ನಾನು ಕಣ್ಣೀರು ಹಾಕಿದೆ. ನನ್ನ ಭಯವನ್ನು ನನ್ನ ಭಾವಿ ಅತ್ತೆ ಬಳಿ ಹೇಳಿಕೊಂಡೆ. ಅವರು ಇರಲಿ ಬಿಡು ಎಂದರು’ ಎಂದಿದ್ದಾರೆ ಜೂಹಿ.
ಸುಮಾರು 2000 ಜನರಿಗೆ ಆಮಂತ್ರಣ ಹೋಗಿತ್ತು. ವಿಶ್ವದ ನಾನಾ ಭಾಗದಲ್ಲಿ ಇದ್ದವರು ವಿವಾಹಕ್ಕೆ ಬರಬೇಕಿತ್ತು. ಆದರೆ, ಎಲ್ಲಾ ಆಮಂತ್ರಣವನ್ನೂ ಜೂಹಿ ಅವರ ಅತ್ತೆ ಹಿಂಪಡೆದರು. ‘ನನ್ನ ಅತ್ತೆಯೇ ಮುಂದೆ ನಿಂತು ಕುಟುಂಬದವರಿಗೆ ಈ ಬಗ್ಗೆ ಮನವರಿಕೆ ಮಾಡಿದರು. ದೊಡ್ಡ ಮಟ್ಟದಲ್ಲಿ ಮದುವೆ ಬೇಡ ಎಂದು ಹೇಳಿದರು. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಬರುವಂತೆ ನೋಡಿಕೊಂಡರು’ ಎಂದಿದ್ದಾರೆ ಅವರು.
ಇದನ್ನೂ ಓದಿ: EMI ಕಟ್ಟದೇ ಶಾರುಖ್ ಖಾನ್ ಕಾರು ಸೀಜ್; ಶಾಕಿಂಗ್ ವಿಷಯ ತಿಳಿಸಿದ ಜೂಹಿ ಚಾವ್ಲಾ
ಜಯ್ ಅವರ ಪತ್ನಿ ಸುಜಾತಾ ಬಿರ್ಲಾ ವಿಮಾನ ದುರಂತದಲ್ಲಿ (1990) ನಿಧನ ಹೊಂದಿದರು. ಆ ಬಳಿಕ 1995ರಲ್ಲಿ ಜಯ್ ಹಾಗೂ ಜೂಹಿ ವಿವಾಹ ಆದರು. 1998ರಲ್ಲಿ ಜೂಹಿ ಅವರ ತಾಯಿ ತೀರಿಕೊಂಡರು. ಆ ಸಂದರ್ಭದಲ್ಲಿ ಜೂಹಿ ‘ಡುಪ್ಲಿಕೇಟ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.