ಚುನಾವಣೆ ಗೆದ್ದ ಬಾಲಯ್ಯ, ಪವನ್​ ಕಲ್ಯಾಣ್​ಗೆ ಕಾಜಲ್​ ಅಗರ್​ವಾಲ್ ಅಭಿನಂದನೆ

ಹಿಂದೂಪುರದಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರು ಚುನಾವಣೆ ಗೆದ್ದಿದ್ದಾರೆ. ಅವರಿಗೆ ನಟಿ ಕಾಜಲ್​ ಅಗರ್​ವಾಲ್​ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು, ಪವನ್​ ಕಲ್ಯಾಣ್​ ಕೂಡ ಆಂಧ್ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಅವರಿಗೂ ಕಾಜಲ್​ ಅಗರ್​ವಾಲ್​ ಅವರು ಅಭಿನಂದನೆ ತಿಳಿಸಿದ್ದಾರೆ. ಬಾಲಯ್ಯ ಕುರಿತ ಪೋಸ್ಟ್​ಗೆ ಕೆಲವು ನೆಟ್ಟಿಗರು ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

ಚುನಾವಣೆ ಗೆದ್ದ ಬಾಲಯ್ಯ, ಪವನ್​ ಕಲ್ಯಾಣ್​ಗೆ ಕಾಜಲ್​ ಅಗರ್​ವಾಲ್ ಅಭಿನಂದನೆ
ನಂದಮೂರಿ ಬಾಲಕೃಷ್ಣ, ಕಾಜಲ್​ ಅಗರ್​ವಾಲ್​
Follow us
ಮದನ್​ ಕುಮಾರ್​
|

Updated on: Jun 05, 2024 | 7:14 PM

ಟಾಲಿವುಡ್​ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದಾರೆ. ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದಾರೆ. ಈ ಗೆಲುವಿಗಾಗಿ ಅನೇಕರು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ನಟಿ ಕಾಜಲ್​ ಅಗರ್​ವಾಲ್​ (Kajal Aggarwal) ಕೂಡ ಬಾಲಯ್ಯ ಅವರಿಗೆ ವಿಶ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಬಾಲಯ್ಯ (Balayya) ಬಗ್ಗೆ ಕಾಜಲ್​ ಅಗರ್​ವಾಲ್​ ಮಾಡಿರುವ ಪೋಸ್ಟ್​ ವೈರಲ್​ ಆಗಿದೆ. ಇದಕ್ಕೆ ಕಮೆಂಟ್​ ಮಾಡಿರುವ ಕೆಲವರು ಕಟು ಟೀಕೆ ಮಾಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇತ್ತೀಚಿನ ಘಟನೆ.

ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ನಂದಮೂರಿ ಬಾಲಕೃಷ್ಣ ತಳ್ಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಬಾಲಯ್ಯ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ತುಂಬ ಜನರು ಕ್ಲಾಸ್​ ತೆಗೆದುಕೊಂಡಿದ್ದರು. ಅದರಲ್ಲೂ ಉತ್ತರ ಭಾರತದ ನೆಟ್ಟಿಗರು ತುಂಬಾನೇ ಗರಂ ಆಗಿದ್ದರು. ಈಗ ಕಾಜಲ್​ ಅಗರ್​ವಾಲ್​ ಅವರು ಬಾಲಯ್ಯ ಕುರಿತು ಮಾಡಿರುವ ಪೋಸ್ಟ್​ಗೂ ಕೆಲವರು ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ.

‘ಬಾಲಯ್ಯ ಅವರೇ.. ನಿಮ್ಮ ಅಮೋಘ ಯಶಸ್ಸಿಗೆ ಧನ್ಯವಾದಗಳು. ನಿಮ್ಮ ಪರಿಶ್ರಮ, ಬದ್ಧತೆ, ದೂರದೃಷ್ಟಿಯ ಕಾರಣದಿಂದಾಗಿ ನಿಮಗೆ ಜನರಿಂದ ಈ ಪರಿ ಪ್ರೀತಿ ಸಿಕ್ಕಿದೆ’ ಎಂದು ಕಾಜಲ್​ ಅಗರ್​ವಾಲ್​ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ವೈರಲ್​ ಆಗಿದೆ.

ಇದನ್ನೂ ಓದಿ: ‘ಬಾಲಯ್ಯಗೆ ಧನ್ಯವಾದ’; ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ ನಟಿ ಅಂಜಲಿ

ನಂದಮೂರಿ ಬಾಲಕೃಷ್ಣ ಅವರ ಅಪ್ಪಟ ಅಭಿಮಾನಿಗಳು ಈ ಪೋಸ್ಟ್​ಗೆ ಲೈಕ್​ ಮಾಡಿದ್ದಾರೆ. ‘ನಮ್ಮ ನಾಯಕನಿಗೆ ಅಭಿನಂದನೆ ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂದು ಕಾಜಲ್​ ಪೋಸ್ಟ್​ಗೆ ಬಾಲಯ್ಯ ಫ್ಯಾನ್ಸ್​ ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ತಕರಾರು ತೆಗೆದಿದ್ದಾರೆ. ‘ಓಹ್​ ಇದು ಆ ಮನುಷ್ಯ ಅಲ್ಲವೇ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಎಂಥ ವ್ಯರ್ಥ’ ಎಂಬ ಕಮೆಂಟ್​ ಕೂಡ ಬಂದಿದೆ.

ಆಂಧ್ರ ಪ್ರದೇಶ ಚುನಾವಣೆಯಲ್ಲಿ ಪವನ್​ ಕಲ್ಯಾಣ್​ ಕೂಡ ಜಯ ಸಾಧಿಸಿದ್ದಾರೆ. ಅವರಿಗೂ ಕಾಜಲ್​ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.