‘ಕಲ್ಕಿ 2898 ಎಡಿ’ ಸಿನಿಮಾದ ಕಲೆಕ್ಷನ್​ ಸುಳ್ಳು ಎಂದವರ ಮೇಲೆ ಕೇಸ್​ ಹಾಕಿದ ನಿರ್ಮಾಪಕರು

‘ಕಲ್ಕಿ 2898 ಎಡಿ’ ಚಿತ್ರತಂಡದ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದಾರೆ. ಅಂಥವರಿಗೆ ಕಾನೂನಿನ ಮೂಲಕ ಉತ್ತರ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಸಿನಿಮಾದ ಕಲೆಕ್ಷನ್​ ಬಗ್ಗೆ ನಿರ್ಮಾಪಕರು ನೀಡಿದ ಮಾಹಿತಿ ಫೇಕ್​ ಎಂದು ಹೇಳಿದವರು ಈಗ ಸೂಕ್ತ ಅಂಕಿ-ಸಂಖ್ಯೆಯ ಮೂಲಕ ಉತ್ತರ ನೀಡಬೇಕಿದೆ. ಚಿತ್ರತಂಡದವರು ಇಬ್ಬರಿಗೆ ಲೀಗಲ್​ ನೋಟಿಸ್​ ಕಳಿಸಿದ್ದಾರೆ ಎನ್ನಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾದ ಕಲೆಕ್ಷನ್​ ಸುಳ್ಳು ಎಂದವರ ಮೇಲೆ ಕೇಸ್​ ಹಾಕಿದ ನಿರ್ಮಾಪಕರು
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Jul 19, 2024 | 10:56 PM

ಸ್ಟಾರ್​ ನಟರ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದರೆ ಮಾತ್ರ ಅದನ್ನು ಅಸಲಿ ಸಕ್ಸಸ್​ ಎನ್ನುವ ಕಾಲ ಬಂದಿದೆ. ‘ಪಠಾಣ್​’, ‘ಕೆಜಿಎಫ್​ 2’ ಮುಂತಾದ ಸಿನಿಮಾಗಳು ಈ ಸಾಧನೆ ಮಾಡಿವೆ. ಇತ್ತೀಚೆಗೆ ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಿದೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದರು. ಆದರೆ ಕೆಲವರು ಈ ಕಲೆಕ್ಷನ್​ ಲೆಕ್ಕ ಫೇಕ್​ ಎಂದು ಹೇಳಿದ್ದಾರೆ. ಅಂಥವರ ವಿರುದ್ಧ ನಿರ್ಮಾಪಕರು ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂತಾಗಿದ್ದಾರೆ ಎಂದು ವರದಿ ಆಗಿದೆ.

ಪ್ರಭಾಸ್​ ಅವರ ವೃತ್ತಿ ಜೀವನಕ್ಕೆ ‘ಕಲ್ಕಿ 2898 ಎಡಿ’ ಚಿತ್ರದಿಂದ ಮೈಲೇಜ್​ ಹೆಚ್ಚಾಗಿದೆ. ನಿರ್ದೇಶಕ ನಾಗ್​ ಅಶ್ವಿನ್​ ಅವರು ಈ ಸಿನಿಮಾದ ಗೆಲುವಿನಿಂದ ಖುಷಿ ಆಗಿದ್ದಾರೆ. ಅಲ್ಲದೇ, ನಿರ್ಮಾಣ ಸಂಸ್ಥೆಯಾದ ‘ವೈಜಯಂತಿ ಮೂವೀಸ್​’ ಸಖತ್​ ಲಾಭ ಮಾಡಿಕೊಂಡಿದೆ. ಆದರೆ ಕೆಲವರಿಗೆ ಈ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ ಮೇಲೆ ನಂಬಿಕೆ ಇಲ್ಲ. ಇಬ್ಬರು ಟ್ರೇಡ್​ ಅನಲಿಸ್ಟ್​ಗಳು ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸರಣಿ ಪೋಸ್ಟ್​ ಮಾಡಿದ್ದಾರೆ.

ಈ ಇಬ್ಬರು ಟ್ರೇಡ್​ ಅನಲಿಸ್ಟ್​ಗಳು ಮಾಡಿದ ಪೋಸ್ಟ್​ನಿಂದಾಗಿ ನಿರ್ಮಾಪಕರು ಗರಂ ಆಗಿದ್ದಾರೆ. ತಮ್ಮ ಸಿನಿಮಾದ ಬಗ್ಗೆ ಇಲ್ಲಸಲ್ಲದ ಮಾಹಿತಿ ಹಬ್ಬಿಸಿದ್ದಕ್ಕೆ ಕಾನೂನಿನ ಮೂಲಕ ಪಾಠ ಕಲಿಸಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಟ್ರೇಡ್​ ಅನಲಿಸ್ಟ್​ಗಳಿಗೆ ನಿರ್ಮಾಣ ಸಂಸ್ಥೆಯ ಕಡೆಯಿಂದ ಲೀಗಲ್​ ನೋಟಿಸ್​ ಕಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಸುಮಿತ್​ ಕಡೇಲ್​ ಮತ್ತು ರೋಹಿತ್​ ಜೈಸ್ವಾಲ್​ ಎಂಬಿಬ್ಬರಿಗೆ ‘ಕಲ್ಕಿ 2898 ಎಡಿ’ ಚಿತ್ರದ ನಿರ್ಮಾಪಕರು ಲೀಗಲ್ ನೋಟಿಸ್​ ನೀಡಿದ್ದಾರೆ ಎನ್ನಲಾಗಿದೆ. ‘ಚಿತ್ರದ ಕಲೆಕ್ಷನ್​ಗೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಮೂಲ ಯಾವುದು ಎಂದು ಇವರಿಬ್ಬರು ತಿಳಿಸಬೇಕು. ಪ್ರತಿ ದಿನದ ಪ್ರದೇಶವಾರು ಕಲೆಕ್ಷನ್​ ಎಷ್ಟು ಎಂಬುದನ್ನು ಕೂಡ ತಿಳಿಸಬೇಕು. ಈ ಮಾಹಿತಿ ನೀಡಲು ತಪ್ಪಿದರೆ, ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ನಿರ್ಮಾಪಕರಿಗೆ 25 ಕೋಟಿ ರೂಪಾಯಿ ನೀಡಬೇಕು ಅಂತ ಲೀಗಲ್​ ನೋಟಿಸ್​ನಲ್ಲಿ ತಿಳಿಸಲಾಗಿದೆ’ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ನೀವಿಲ್ಲದೇ ನಾನು ಜೀರೋ: ‘ಕಲ್ಕಿ 2898 ಎಡಿ’ ಯಶಸ್ಸಿನ ಹಿಂದಿರುವ ವ್ಯಕ್ತಿಗಳಿಗೆ ಪ್ರಭಾಸ್​ ಧನ್ಯವಾದ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್​, ಅಮಿತಾಭ್​ ಬಚ್ಚನ್​, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಕಮಲ್​ ಹಾಸನ್​ ಮುಂತಾದವರು ನಟಿಸಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ