ಎಲ್ಲರ ಊಹೆಗೂ ಮೀರಿದೆ ‘ಕಲ್ಕಿ 2898 ಎಡಿ’ ಸಿನಿಮಾ; ಹೊರಬಿತ್ತು ಮೊದಲ ವಿಮರ್ಶೆ

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಣ್ಣ ಬಜೆಟ್​ಗಳ ಚಿತ್ರಗಳನ್ನು ಮಾಡಿರೋ ಅವರು ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರಕ್ಕೆ ಕೈ ಹಾಕಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರ 3ಡಿ ಅವತರಣಿಕೆಯಲ್ಲೂ ಮೂಡಿ ಬಂದಿದೆ. ಜೂನ್ 27ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಎಲ್ಲರ ಊಹೆಗೂ ಮೀರಿದೆ ‘ಕಲ್ಕಿ 2898 ಎಡಿ’ ಸಿನಿಮಾ; ಹೊರಬಿತ್ತು ಮೊದಲ ವಿಮರ್ಶೆ
ಕಲ್ಕಿ 2898 ಎಡಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 20, 2024 | 8:13 AM

‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಪ್ರಭಾಸ್ (Prabhas) ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಲಿದೆ ಅನ್ನೋದು ಅವರ ನಂಬಿಕೆ. ಈ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸೋ ವರದಿಯೊಂದು ಹೊರಬಿದ್ದಿದೆ. ಹೌದು, ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ನೋಡಿರೋ ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ ಭೇಷ್ ಎಂದಿದ್ದಾರೆ. ಇದನ್ನು ಕೇಳಿ ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಇದೆ. ಹೀಗಾಗಿ, ದೊಡ್ಡ ಮಟ್ಟದ ಗಳಿಕೆ ಅಗತ್ಯತೆ ಚಿತ್ರಕ್ಕೆ ಇದೆ.

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಣ್ಣ ಬಜೆಟ್​ಗಳ ಚಿತ್ರಗಳನ್ನು ಮಾಡಿರೋ ಅವರು ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರಕ್ಕೆ ಕೈ ಹಾಕಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರ 3ಡಿ ಅವತರಣಿಕೆಯಲ್ಲೂ ಮೂಡಿ ಬಂದಿದೆ. ಜೂನ್ 27ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸದ್ಯ ಚಿತ್ರಕ್ಕೆ U/A ಪ್ರಮಾಣಪತ್ರ ಸಿಕ್ಕಿದೆ.

‘ಕಲ್ಕಿ 2898 ಎಡಿ’ ಚಿತ್ರದ ಅವಧಿ ಸರಿಸುಮಾರು 3 ಗಂಟೆ ಇರಲಿದೆ. ಈ ಅವಧಿಯಲ್ಲಿ ಬೇರೆಯದೇ ಲೋಕವನ್ನು ನಾಗ್ ಅಶ್ವಿನ್ ಕಟ್ಟಿಕೊಟ್ಟಿರೋದಾಗಿ ಸೆನ್ಸಾರ್ ಮಂಡಳಿಯವರು ಅಭಿಪ್ರಾಯಪಟ್ಟಿದ್ದಾರಂತೆ. 2898 ಎಡಿ ಸಂದರ್ಭದಲ್ಲಿ ಕಾಶಿ ನಗರ, ಅದರಲ್ಲಿರೋ ಮನೆಗಳು, ಮನೆಯ ಒಳಭಾಗ, ಆ ಊರನ್ನು ತೋರಿಸಿರೋ ರೀತಿ ಬೇರೆಯದೇ ರೀತಿಯಲ್ಲಿ ಇದೆಯಂತೆ. ಇನ್ನು ಸಿನಿಮಾದಲ್ಲಿರೋ ಪೌರಾಣಿಕ ಥೀಮ್ ಕೂಡ ಫ್ಯಾನ್ಸ್​ಗೆ ಇಷ್ಟವಾಗಲಿದೆ ಎನ್ನಲಾಗಿದೆ. ಸಿನಿಮಾದ ವಿಶ್ಯುವಲ್​ಗಳು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಇದೆಯಂತೆ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಏನಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್ ನಡುವಿನ ಭಾವನಾತ್ಮಕ ದಶ್ಯ, ದೀಪಿಕಾ-ಪ್ರಭಾಸ್ ಕೆಮಿಸ್ಟ್ರಿ ಕಣ್ಣಿಗೆ ಕಟ್ಟುವ ರೀತಿಯಲ್ಲಿದೆ.  ಭೈರವ ಪಾತ್ರ ಬಳಿಕ ಕಲ್ಕಿ ಆಗಿ ಬದಲಾಗುವುದು ಕೂಡ ಥ್ರಿಲ್ಲಿಂಗ್ ಆಗಿದೆಯಂತೆ. ಭಾವನಾತ್ಮಕವಾಗಿಯೂ ಸಿನಿಮಾ ಸೆಳೆದುಕೊಳ್ಳಲಿದೆ.

ಇದನ್ನೂ ಓದಿ: ‘ವಿಶ್ವದ ಮೊದಲ, ಕೊನೆಯ ನಗರ ಕಾಶಿ’; ಹೊಸ ಲೋಕ ತೆರೆದಿಟ್ಟ ‘ಕಲ್ಕಿ 2898 ಎಡಿ’ ಸಿನಿಮಾ

‘ಕಲ್ಕಿ 2898 ಎಡಿ’ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ. ಈ ಚಿತ್ರದ ಗ್ರಾಫಿಕ್ಸ್​​ಗೆ ಹೆಚ್ಚಿನ ಹಣ ಬಳಕೆ ಆಗಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನ್ ದತ್​ ಅವರು ಬಂಡವಾಳ ಹೂಡಿದ್ದಾರೆ. ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಕೂಡ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?