AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ರಿಲೀಸ್​​ಗೆ ನಿರ್ಮಾಪಕರು ಶುಕ್ರವಾರವನ್ನೇ ಆಯ್ಕೆ ಮಾಡಿಕೊಳ್ಳೋದೇಕೆ?

ಚುನಾವಣಾ ಅಬ್ಬರ ಕಡಿಮೆ ಆಗಿದೆ. ಹೀಗಾಗಿ ಕಳೆದ ಶುಕ್ರವಾರ ಡಾಲಿ ಧನಂಜಯ್ ನಟನೆಯ ‘ಕೋಟಿ’, ವಸಿಷ್ಠ ಸಿಂಹ ನಟನೆಯ ‘ಲವ್​ ಲೀ’ ಮೊದಲಾದ ಸಿನಿಮಾಗಳು ರಿಲೀಸ್ ಆಗಿವೆ. ಹಾಗಾದರೆ, ಶುಕ್ರವಾರವೇ ಸಿನಿಮಾ ರಿಲೀಸ್ ಏಕೆ? ಅದಕ್ಕೆ ಕಾರಣ ಇದೆ. ಭಾರತದಲ್ಲಿ ಶುಕ್ರವಾರವನ್ನು ಮಂಗಳಕರ ವಾರ ಎಂದು ಪರಿಗಣಿಸಲಾಗಿದೆ.

ಸಿನಿಮಾ ರಿಲೀಸ್​​ಗೆ ನಿರ್ಮಾಪಕರು ಶುಕ್ರವಾರವನ್ನೇ ಆಯ್ಕೆ ಮಾಡಿಕೊಳ್ಳೋದೇಕೆ?
ಥಿಯೇಟರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jun 20, 2024 | 10:39 AM

Share

ಶುಕ್ರವಾರದಂದು ಭಾರತದಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲಾಗುತ್ತಿದೆ. ಮೊದಲು ಇದು ಆರಂಭ ಆಗಿದ್ದು ಹಾಲಿವುಡ್​ನಲ್ಲಿ. ಅಲ್ಲಿ 1939ರಲ್ಲಿ ಈ ಟ್ರೆಂಡ್ ಆರಂಭ ಆಯಿತು. 20 ವರ್ಷಗಳ ಬಳಿಕ ಭಾರತದಲ್ಲಿ ಈ ಟ್ರೆಂಡ್​ನ ತರಲಾಯಿತು. 1960ರ ಸುಮಾರಿಗೆ ಬಾಲಿವುಡ್​ನಲ್ಲಿ ಶುಕ್ರವಾರ ಸಿನಿಮಾ (Cinema) ರಿಲೀಸ್ ಮಾಡೋಕೆ ಪ್ರಾರಂಭಿಸಿದರು. ನಂತರ ದಕ್ಷಿಣ ಭಾರತಕ್ಕೂ ಈ ಸಂಪ್ರದಾಯ ಬಂತು. ಭಾರತದಲ್ಲಿ ಶುಕ್ರವಾರ ಬಿಡುಗಡೆಯಾದ ಮೊದಲ ಚಿತ್ರ ‘ಮುಘಲ್-ಎ-ಆಜಮ್’ ಸಿನಿಮಾ. ಈ ಚಿತ್ರ ಆಗಸ್ಟ್ 5, 1960ರಂದು ರಿಲೀಸ್ ಆಯಿತು.

ಚುನಾವಣಾ ಅಬ್ಬರ ಕಡಿಮೆ ಆಗಿದೆ. ಹೀಗಾಗಿ ಕಳೆದ ಶುಕ್ರವಾರ ಡಾಲಿ ಧನಂಜಯ್ ನಟನೆಯ ‘ಕೋಟಿ’, ವಸಿಷ್ಠ ಸಿಂಹ ನಟನೆಯ ‘ಲವ್​ ಲೀ’ ಮೊದಲಾದ ಸಿನಿಮಾಗಳು ರಿಲೀಸ್ ಆಗಿವೆ. ಹಾಗಾದರೆ, ಶುಕ್ರವಾರವೇ ಸಿನಿಮಾ ರಿಲೀಸ್ ಏಕೆ? ಅದಕ್ಕೆ ಕಾರಣ ಇದೆ. ಭಾರತದಲ್ಲಿ ಶುಕ್ರವಾರವನ್ನು ಮಂಗಳಕರ ವಾರ ಎಂದು ಪರಿಗಣಿಸಲಾಗಿದೆ. ಶುಕ್ರವಾರ ಲಕ್ಷ್ಮಿದೇವಿಯ ದಿನ. ಲಕ್ಷ್ಮಿ ದೇವಿ ಇದ್ದಲ್ಲಿ ದಾರಿದ್ಯ ಬರುವುದಿಲ್ಲ ಎನ್ನುವ ನಂಬಿಕೆ ಅನೇಕರದ್ದು. ಅದಕ್ಕಾಗಿಯೇ ಹೆಚ್ಚಿನ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಶುಕ್ರವಾರವೇ ಬಿಡುಗಡೆ ಮಾಡಲು ಇಷ್ಟಪಡುತ್ತಾರೆ. ಚಿತ್ರಗಳ ರಿಲೀಸ್ ಮಾತ್ರ ಅಲ್ಲ ಮುಹೂರ್ತಗಳನ್ನು ಕೂಡ ಶುಕ್ರವಾರವೇ ನಡೆಸಲಾಗುತ್ತದೆ. ಈ ದಿನ ಸಿನಿಮಾ ಆರಂಭಿಸಿದರೆ/ಬಿಡುಗಡೆ ಮಾಡಿದರೆ ಲಾಭ ಆಗುತ್ತದೆ ಎನ್ನುವ ನಂಬಿಕೆ ನಿರ್ಮಾಪಕರದ್ದು.

ಇದನ್ನೂ ಓದಿ: ಎಲ್ಲರ ಊಹೆಗೂ ಮೀರಿದೆ ‘ಕಲ್ಕಿ 2898 ಎಡಿ’ ಸಿನಿಮಾ; ಹೊರಬಿತ್ತು ಮೊದಲ ವಿಮರ್ಶೆ

ಇದಕ್ಕೆ ಮತ್ತೊಂದು ಕಾರಣ ಎಂದರೆ ವೀಕೆಂಡ್. ಐಟಿ ಕಂಪನಿಗಳಲ್ಲಿ ಶನಿವಾರ-ಭಾನುವಾರ ರಜೆ ಇರುತ್ತದೆ. ಶುಕ್ರವಾರದಿಂದ ಎಲ್ಲರೂ ವೀಕೆಂಡ್​ಮೂಡ್​ನಲ್ಲಿ ಇರುತ್ತಾರೆ. ಈ ದಿನ ಸಿನಿಮಾ ಬಿಡುಗಡೆಯಾದಾರೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಇದರಿಂದ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದ ಕಮಾಯಿ ಮಾಡಬಹುದು. ನೆಗೆಟಿವ್ ವಿಮರ್ಶೆ ಪಡೆದ ಹೊರತಾಗಿಯೂ ಸಿನಿಮಾಗಳು ವೀಕೆಂಡ್​ನಲ್ಲಿ ಭರ್ಜರಿ ಹಣ ಮಾಡಿದ ಉದಾಹರಣೆ ಇದೆ.

ಬೇರೆ ದಿನವೂ ಬಿಡುಗಡೆ ಆಗುತ್ತದೆ

ಶುಕ್ರವಾರ ಸಿನಿಮಾಗಳು ರಿಲೀಸ್ ಆಗೋದರ ಜೊತೆಗೆ ವಾರದ ಇತರ ದಿನಗಳೂ ಸಿನಿಮಾಗಳು ಬಿಡುಗಡೆ ಆಗುತ್ತವೆ. ಬುಧವಾರ, ಗುರುವಾರ ಕೂಡ ಚಿತ್ರಗಳು ರಿಲೀಸ್ ಆದ ಉದಾಹರಣೆ ಇದೆ. ಹಬ್ಬಗಳ ಪ್ರಯುಕ್ತ ಗುರುವಾರ, ಶುಕ್ರವಾರ ರಜಾ ಇದ್ದರೆ ಬುಧವಾರವೇ ಸಿನಿಮಾಗಳನ್ನು ರಿಲೀಸ್ ಮಾಡಿದ ಉದಾಹರಣೆ ಸಾಕಷ್ಟಿದೆ. ತಮಿಳಿನಲ್ಲಿ ಸಿದ್ಧವಾದ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ​ಬುಧವಾರ, ‘ಕೆಜಿಎಫ್ 2’ ಗುರುವಾರ, ರಜನಿಕಾಂತ್, ಶಿವರಾಜ್​ಕುಮಾರ್ ನಟನೆಯ ‘ಜೈಲರ್’ ಗುರುವಾರ ಬಿಡುಗಡೆ ಆಗಿತ್ತು. ಸೋಮವಾರ ಸಿನಿಮಾ ರಿಲೀಸ್ ಆದ ಉದಾಹರಣೆ ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:38 am, Thu, 20 June 24

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ