ಇಟಲಿಯಲ್ಲಿ ‘ಕಲ್ಕಿ 2898 ಎಡಿ’ ಶೂಟಿಂಗ್; ಚಳಿಗೆ ನಡುಗಿದ ಪ್ರಭಾಸ್, ದಿಶಾ

ಯುರೋಪ್ ರಾಷ್ಟ್ರಗಳಲ್ಲಿ ಸದಾ ಚಳಿ ಇರುತ್ತದೆ. ಅದೇ ರೀತಿ ಯುರೋಪ್​ನ ಒಂದು ರಾಷ್ಟ್ರವಾಗಿರುವ ಇಟಲಿಯಲ್ಲಿ ಸದ್ಯ 4 ಡಿಗ್ರಿ ಇದೆ. ಈ ಕಾರಣದಿಂದಲೇ ಪ್ರಭಾಸ್ ಹಾಗೂ ದಿಶಾ ಇಬ್ಬರೂ ಸ್ವೆಟರ್ ಹೊದ್ದು ನಿಂತಿದ್ದಾರೆ. ಅವರು ಚಳಿಗೆ ನಡುಗಿದ್ದಾರೆ. ಸಮುದ್ರ ತೀರದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದೆ.

ಇಟಲಿಯಲ್ಲಿ ‘ಕಲ್ಕಿ 2898 ಎಡಿ’ ಶೂಟಿಂಗ್; ಚಳಿಗೆ ನಡುಗಿದ ಪ್ರಭಾಸ್, ದಿಶಾ
ದಿಶಾ-ಪ್ರಭಾಸ್

Updated on: Mar 08, 2024 | 7:00 AM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD Movie) ರಿಲೀಸ್​ಗೆ ಬಾಕಿ ಉಳಿದಿರೋದು ಇನ್ನು ಎರಡು ತಿಂಗಳು ಮಾತ್ರ. ಮೇ 9ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ನಾಗ್ ಅಶ್ವಿನ್ ನಿರ್ದೇಶನ ಇರುವ ಈ ಸಿನಿಮಾ ಸಾವಿರಾರು ವರ್ಷಗಳ ಕಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರತಂಡ ಇಟಲಿಯಲ್ಲಿ ಹಾಡಿನ ಶೂಟಿಂಗ್​ನಲ್ಲಿ ಭಾಗಿಯಾಗಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಯುರೋಪ್ ರಾಷ್ಟ್ರಗಳಲ್ಲಿ ಸದಾ ಚಳಿ ಇರುತ್ತದೆ. ಅದೇ ರೀತಿ ಯುರೋಪ್​ನ ಒಂದು ರಾಷ್ಟ್ರವಾಗಿರುವ ಇಟಲಿಯಲ್ಲಿ ಸದ್ಯ ನಾಲ್ಕು ಡಿಗ್ರಿ ಇದೆ. ಈ ಕಾರಣದಿಂದಲೇ ಪ್ರಭಾಸ್ ಹಾಗೂ ದಿಶಾ ಇಬ್ಬರೂ ಸ್ವೆಟರ್ ಹೊದ್ದು ನಿಂತಿದ್ದಾರೆ. ಅವರು ಚಳಿಗೆ ನಡುಗಿದ್ದಾರೆ. ಸಮುದ್ರ ತೀರದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಪ್ರಭಾಸ್ ಹಾಗೂ ದಿಶಾ ಒಟ್ಟಾಗಿ ನಿಂತಿರುವ ಫೋಟೋ ಗಮನ ಸೆಳೆಯುತ್ತಿದೆ.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಅವರು ಪ್ರಗ್ನೆಂಟ್ ಎಂಬ ವಿಚಾರ ಇತ್ತೀಚೆಗೆ ರಿವೀಲ್ ಆಗಿತ್ತು. ಅವರು ತಮ್ಮ ಭಾಗದ ಶೂಟಿಂಗ್​ನ ಪೂರ್ಣಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಒಂದು ಸಾಂಗ್ ಶೂಟ್ ಮಾತ್ರ ಬಾಕಿ ಇದ್ದು ಆ ಬಳಿಕ ಸಿನಿಮಾ ತಂಡ ಪ್ರಚಾರದಲ್ಲಿ ಬ್ಯುಸಿ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಬಿಡುಗಡೆ ಮುಂದಕ್ಕೆ ಹೋಗತ್ತೆ ಎಂದವರಿಗೆ ಇಲ್ಲಿದೆ ಖಡಕ್​ ಉತ್ತರ

‘ಕಲ್ಕಿ 2898 ಎಡಿ’ ಹೊಸ ಪ್ರಯೋಗ ಎಂದು ನಾಗ್ ಅಶ್ವಿನ್ ಅವರು ಹೇಳಿದ್ದರು. ಈ ಚಿತ್ರದ ಬಗ್ಗೆ ಅವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಮಹಾಭಾರತದ ಕೃಷ್ಣನ ಪಾತ್ರದಿಂದ ಆರಂಭ ಆಗಿ ಕಲ್ಕಿವರೆಗೆ ಸಿನಿಮಾದ ಕಥೆ ಸಾಗಲಿದೆ ಎಂದು ಅವರು ಹೇಳಿದ್ದರು. ಈ ಮೂಲಕ ಆರು ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us