‘ಕಲ್ಕಿ 2898 ಎಡಿ’ ಚಿತ್ರದ ಪಾರ್ಟ್ 2 ಶೂಟಿಂಗ್ ಶೇ.60ರಷ್ಟು ಪೂರ್ಣ; ರಿಲೀಸ್ ಯಾವಾಗ?
ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಮೊದಲ ವೀಕೆಂಡ್ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ‘ಕಲ್ಕಿ 2898 ಎಡಿ: ಪಾರ್ಟ್ 2’ ಕೂಡ ಬರಲಿದೆ. ಅದರ ಬಗ್ಗೆ ಪ್ರೇಕ್ಷಕರಿಗೆ ಈಗಲೇ ನಿರೀಕ್ಷೆ ಮೂಡಿದೆ. ಚಿತ್ರತಂಡ ಈಗಾಗಲೇ ಒಂದಷ್ಟು ದೃಶ್ಯಗಳನ್ನು ಚಿತ್ರಿಸಿಕೊಂಡಿದೆ.
‘ಬಾಹುಬಲಿ 2’ ಬಳಿಕ ನಟ ಪ್ರಭಾಸ್ (Prabhas) ಅವರು ಒಂದು ಭರ್ಜರಿ ಯಶಸ್ಸಿಗಾಗಿ ಕಾದಿದ್ದರು. ‘ಕಲ್ಕಿ 2989 ಎಡಿ’ (Kalki 2898 AD) ಸಿನಿಮಾದ ಮೂಲಕ ಅವರಿಗೆ ಅಂಥದ್ದೊಂದು ಗೆಲುವು ಸಿಕ್ಕಿದೆ. ಬಹುತಾರಾಗಣ ಇರುವ ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಯಿತು. ಎಲ್ಲ ಕಡೆಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ. ಈ ನಡುವೆ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ (Kalki 2898 AD Sequel) ಬಗ್ಗೆ ಮಾತು ಕೇಳಿಬರಲು ಆರಂಭಿಸಿದೆ. ಪಾರ್ಟ್ 2 ಶೂಟಿಂಗ್ ಬಗ್ಗೆ ಮಾಹಿತಿ ಕೂಡ ಹೊರಬಿದ್ದಿದೆ.
‘ಮಹಾನಟಿ’ ಸಿನಿಮಾ ಮೂಲಕ ಜನರ ಮನ ಗೆದ್ದಿದ್ದ ನಿರ್ದೇಶಕ ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೊಸ ಲೋಕ ತೋರಿಸಿದ್ದಾರೆ. ಪುರಾಣ ಮತ್ತು ಸೈನ್ಸ್ ಫಿಕ್ಷನ್ ಮಿಶ್ರಣ ಮಾಡಿ ಅವರು ಬೇರೆಯದೇ ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಆದರೆ ಈ ಕಥೆ ಅಂತ್ಯವಾಗಿಲ್ಲ. ‘ಕಲ್ಕಿ 2898 ಎಡಿ’ ಸಿನಿಮಾಗೆ ಸೀಕ್ವೆಲ್ ಬರಲಿದೆ ಎಂದು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪ್ರಭಾಸ್ರ ‘ಕಲ್ಕಿ 2898 ಎಡಿ’ಯಲ್ಲಿ ‘ದಿವಂಗತ ಸ್ಟಾರ್’ ಇದು ಹೇಗೆ ಸಾಧ್ಯ?
‘ಕಲ್ಕಿ 2898 ಎಡಿ: ಪಾರ್ಟ್ 2’ ಸಿನಿಮಾದ ಬಗ್ಗೆ ನಿರ್ಮಾಪಕ, ‘ವೈಜಯಂತಿ ಮೂವೀಸ್’ ಸಂಸ್ಥೆಯ ಮಾಲಿಕ ಅಶ್ವಿನಿ ದತ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸೀಕ್ವೆಲ್ಗೆ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಮುಖ ದೃಶ್ಯಗಳ ಶೂಟಿಂಗ್ ಮಾಡುವುದು ಬಾಕಿ ಇದೆ. ರಿಲೀಸ್ ದಿನಾಂಕದ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ’ ಎಂದು ನಿರ್ಮಾಪಕರು ಹೇಳಿದ್ದಾರೆ.
#Kalki2898AD part 2 has been completed almost 60%. Only major portions are left to shot. We are not decided on release date.
– Producer #AshwiniDutt garu!!#EpicBlockbusterKalki #Prabhas
— Suresh PRO (@SureshPRO_) June 29, 2024
ಶೇ.60ರಷ್ಟು ಶೂಟಿಂಗ್ ಮುಗಿದಿದೆ ಎಂದಮಾತ್ರಕ್ಕೆ ‘ಕಲ್ಕಿ 2898 ಎಡಿ ಪಾರ್ಟ್ 2’ ಸಿನಿಮಾ ಆದಷ್ಟು ಬೇಗ ಬರಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ, ಆ ಪ್ರಾಜೆಕ್ಟ್ಗೆ ಸಾಕಷ್ಟು ಸಮಯ ಹಿಡಿಯಲಿದೆ. ‘ಕಲ್ಕಿ 2898 ಎಡಿ’ ಸೂಪರ್ ಹಿಟ್ ಆಗಿರುವುದರಿಂದ ಅದರ ಸೀಕ್ವೆಲ್ ಅನ್ನು ಇನ್ನಷ್ಟು ದೊಡ್ಡದಾಗಿ ಮಾಡಲು ತಂಡ ನಿರ್ಧರಿಸಿದೆ. ಸೀಕ್ವೆಲ್ ನಿರ್ಮಾಣಕ್ಕೆ 3 ವರ್ಷ ಸಮಯ ಬೇಕು ಎಂದು ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದಾರೆ. ಹಾಗಾಗಿ ಈ ಸಿನಿಮಾದ ಬಿಡುಗಡೆ ಇನ್ನೂ 3 ವರ್ಷ ತಡವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:05 pm, Sun, 30 June 24