ಭಾನುವಾರವೂ ಮುಗ್ಗರಿಸಿದ ‘ಕಂಗುವ’; ಬಜೆಟ್ ಹಾಗೂ ಗಳಿಕೆಯ ಅಂತರ ನೋಡಿ ಕಂಗೆಟ್ಟ ನಿರ್ಮಾಪಕ
‘ಕಂಗುವ’ ಸಿನಿಮಾ ನವೆಂಬರ್ 14ರಂದು ತೆರೆಗೆ ಬಂತು. ಇದು ಬಿಗ್ ಬಜೆಟ್ ಚಿತ್ರ ಹಾಗೂ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದರಿಂದ ಸಿನಿಮಾಗೆ ಮೊದಲ ದಿನ ಸಾಕಷ್ಟು ಸಂಖ್ಯೆಯಲ್ಲಿ ಜನರು ಥಿಯೇಟರ್ಗೆ ಬಂದರು. ಈ ಚಿತ್ರ ಮೊದಲ ದಿನ 24 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ದೊಡ್ಡ ಬಜೆಟ್ ಸಿನಿಮಾ ಮಾಡಿ, ಅದು ಸಾಕಷ್ಟು ಗಳಿಕೆ ಮಾಡಿದರೂ ಹೆಚ್ಚಿನ ಲಾಭ ಆಗುವುದಿಲ್ಲ ಎಂದು ನಿರ್ಮಾಪಕ ಕರಣ್ ಜೋಹರ್ ಅವರು ಓಪನ್ ಆಗಿ ಹೇಳಿಕೆ ಕೊಟ್ಟಿದ್ದರು. ಹೀಗಿರುವಾಗ ದೊಡ್ಡ ಬಜೆಟ್ ಸಿನಿಮಾ ಕಳಪೆ ಗಳಿಕೆ ಮಾಡಿದರೆ ನಿರ್ಮಾಪಕರ ಸ್ಥಿತಿ ಏನಾಗಬೇಡ? ಈಗ ‘ಕಂಗುವ’ ಚಿತ್ರಕ್ಕೂ ಹಾಗೆಯೇ ಆಗಿದೆ. ‘ಕಂಗುವ’ ಸಿನಿಮಾದ ಬಜೆಟ್ ಒಂದಲ್ಲ ಎರಡಲ್ಲ ಬರೋಬ್ಬರಿ 350 ಕೋಟಿ ರೂಪಾಯಿ. ಇದರ ಜೊತೆಗೆ ಪ್ರಚಾರಕ್ಕೂ ಅವರು ಸಾಕಷ್ಟು ಹಣ ಹಾಕಿದ್ದರು. ಆದರೆ, ಗಳಿಕೆ ಮಾತ್ರ ಕೆಲವೇ ಕೋಟಿ ರೂಪಾಯಿಗಳಲ್ಲಿ ಇದೆ.
‘ಕಂಗುವ’ ಸಿನಿಮಾ ನವೆಂಬರ್ 14ರಂದು ತೆರೆಗೆ ಬಂತು. ಇದು ಬಿಗ್ ಬಜೆಟ್ ಚಿತ್ರ ಹಾಗೂ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದರಿಂದ ಸಿನಿಮಾಗೆ ಮೊದಲ ದಿನ ಸಾಕಷ್ಟು ಸಂಖ್ಯೆಯಲ್ಲಿ ಜನರು ಥಿಯೇಟರ್ಗೆ ಬಂದರು. ಈ ಚಿತ್ರ ಮೊದಲ ದಿನ 24 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶಾಕಿಂಗ್ ವಿಚಾರ ಎಂದರೆ ಮೊದಲ ದಿನದ ಗಳಿಕೆ ಹಾಗೂ ಮುಂದಿನ ಮೂರು ದಿನಗಳ ಗಳಿಕೆ ಸುಮಾರು ಸರಿ ಸಮನವಾಗಿದೆ.
‘ಕಂಗುವ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ನಾಲ್ಕು ದಿನಗಳಲ್ಲಿ ಗಳಿಕೆ ಮಾಡಿರೋದು 53 ಕೋಟಿ ರೂಪಾಯಿ ಮಾತ್ರ. ಚಿತ್ರದ ಬಜೆಟ್ 350 ಕೋಟಿ ರೂಪಾಯಿ. ನಿರ್ಮಾಪಕರು ಈ ಚಿತ್ರದ ಲಾಭದ ಮುಖ ಕಾಣೋದು ಅನುಮಾನವೇ. ಈ ಚಿತ್ರವನ್ನು ಜ್ಞಾನವೇಲ್ ರಾಜಾ ನಿರ್ಮಾಣ ಮಾಡಿದ್ದಾರೆ. ಶಿವ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ಕಂಗುವ’ ಗೆಲುವಿಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಕೊಟ್ಟ ದಿಶಾ ಪಟಾನಿ
ಬುಕ್ ಮೈ ಶೋನಲ್ಲಿಯೂ ‘ಕಂಗುವ’ ಸಿನಿಮಾ ಸಾಕಷ್ಟು ಕಳಪೆ ರೇಟಿಂಗ್ ಪಡೆದಿದೆ. ಈ ಚಿತ್ರಕ್ಕೆ ಕೇವಲ 6.5 ರೇಟಿಂಗ್ ಸಿಕ್ಕಿದೆ. ದಿನ ಕಳೆದಂತೆ ರೇಟಿಂಗ್ ಕುಸಿಯುತ್ತಿದೆ. ಇದು ಚಿತ್ರದ ದುಸ್ಥಿತಿಯನ್ನು ವಿವರಿಸುತ್ತದೆ. ನಟ ಸೂರ್ಯ ಅವರಿಗೆ ಕಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಕಡೆಯಿಂದ ಈ ರೀತಿಯ ಸಿನಿಮಾಗಳು ಸಿಕ್ಕಿರುವುದಕ್ಕೆ ಫ್ಯಾನ್ಸ್ಗೆ ಬೇಸರ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.