‘ಆ ನಿರ್ಧಾರಕ್ಕೆ ಇನ್ನೂ ಕೊರಗಿದೆ’; ನಟಿ ಕರೀನಾ ಕಪೂರ್​ಗೆ ಪಶ್ಚಾತ್ತಾಪ

ಸಿನಿರಂಗದಲ್ಲಿ ಯಶಸ್ಸು ಕಂಡರೂ 11ನೇ ತರಗತಿಗೆ ಶಿಕ್ಷಣ ತೊರೆದಿದ್ದಕ್ಕೆ ನಟಿ ಕರೀನಾ ಕಪೂರ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳಾದ ತೈಮೂರ್ ಮತ್ತು ಜೇಹ್ ಮೊದಲು ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ ಕರೀನಾ, ಮಕ್ಕಳಿಗೆ ಕರುಣೆ ಮತ್ತು ಸರಿ ದಾರಿಯ ಅರಿವು ನೀಡುವುದು ಅತ್ಯಗತ್ಯ ಎಂದಿದ್ದಾರೆ.

‘ಆ ನಿರ್ಧಾರಕ್ಕೆ ಇನ್ನೂ ಕೊರಗಿದೆ’; ನಟಿ ಕರೀನಾ ಕಪೂರ್​ಗೆ ಪಶ್ಚಾತ್ತಾಪ
ಕರೀನಾ
Image Credit source: Kareena Kapoor Instagram
Edited By:

Updated on: Sep 03, 2026 | 7:52 AM

ಮುಖ್ಯಾಂಶಗಳು

  • ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ ಪಶ್ಚಾತ್ತಾಪ
  • ಮಕ್ಕಳ ಬೆಳೆಸುವಿಕೆಯಲ್ಲಿ ಹೊಸ ಹಾದಿ
  • ನಟನೆಯಷ್ಟೇ ಅಲ್ಲ ಕ್ರೀಡೆಗೂ ಪ್ರೋತ್ಸಾಹ

ಸಿನಿರಂಗದಲ್ಲಿ ಯಶಸ್ಸಿನ ಶಿಖರವೇರಿದರೂ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಖಾನ್ ಮನಸ್ಸಿನಲ್ಲಿ ಒಂದು ಕೊರಗು ಉಳಿದುಹೋಗಿದೆ. 11ನೇ ತರಗತಿಗೇ ವಿದ್ಯಾಭ್ಯಾಸಕ್ಕೆ ಪೂರ್ಣವಿರಾಮ ಇಟ್ಟಿದ್ದನ್ನು ಅವರು ನೆನೆದಿದ್ದಾರೆ. ಈ ಕಹಿ ಅನುಭವವೇ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೇಹ್ ಬೆಳೆಸುವ ಹಾದಿಯನ್ನು ಬದಲಿಸಿದೆ ಎಂದು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಖ್ಯಾತ ನಟಿಯಾದರು ಓದಿಲ್ಲ ಎಂಬ ಕೊರಗು ಅವರಿಗೆ ಇದೆ ಎಂಬುದನ್ನು ಇದರಲ್ಲಿ ಕಾರಣಬಹುದು.

‘ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಶಿಕ್ಷಣವನ್ನು ಅರ್ಧಕ್ಕೆ ತೊರೆದದ್ದು ತಪ್ಪು ಎಂಬ ಭಾವನೆ ಅವರಿಗೆ ಕಾಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಹೃದಯದ ಮಾತು ಕೇಳಬೇಕು. ಆದರೆ ಶಿಕ್ಷಣವನ್ನು ಎಂದಿಗೂ ಅಲಕ್ಷಿಸಬಾರದು. ಈ ಕಾರಣಕ್ಕಾಗಿ ತಮ್ಮ ಮಕ್ಕಳಿಗೆ ಮೊದಲ ಆದ್ಯತೆ ಶಿಕ್ಷಣಕ್ಕೇ ನೀಡಬೇಕು’ ಎಂದು ಕರೀನಾ ಸಂದರ್ಶನದಲ್ಲಿ ಸ್ಪಷ್ಟವಾಗಿ ಕಟ್ಟುನಿಟ್ಟು ಮಾಡಿದ್ದಾರೆ.

ಯುನಿಸೆಫ್ ಸಂಸ್ಥೆಯ ರಾಯಭಾರಿಯಾಗಿ ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಧ್ವನಿ ಎತ್ತಲು ಈ ವೈಯಕ್ತಿಕ ಅನುಭವವೇ ಕಾರಣ. ಸಮಾಜಸೇವೆ ಎಂಬುದು ಪ್ರದರ್ಶನಕ್ಕಲ್ಲ. ಅದು ಹೃದಯದ ಅಂತರಾಳದಿಂದ ಬರಬೇಕು ಎಂಬುದು ಅವರ ಖಚಿತ ಅಭಿಪ್ರಾಯ. ಸದ್ದಿಲ್ಲದೆ ಒಳ್ಳೆಯ ಕೆಲಸ ಮಾಡುವುದರಲ್ಲಿಯೇ ನೈಜ ಸಂತೃಪ್ತಿ ಇದೆ ಎಂದು ಅವರು ನಂಬಿದ್ದಾರೆ.

ಎರಡು ಗಂಡುಮಕ್ಕಳ ತಾಯಿಯಾಗಿ ಆಟದ ಮೈದಾನದಲ್ಲಿ ತೊಡಗಿಸಿಕೊಳ್ಳುವುದು ಹೊಸ ಅನುಭವ. ಕ್ರೀಡೆಯ ಬಗ್ಗೆ ತೈಮೂರ್ ತೋರಿಸುವ ಆಸಕ್ತಿಗೆ ಪೂರ್ಣ ಬೆಂಬಲ ಸಿಕ್ಕಿದೆ. ಚಿತ್ರರಂಗದ ಕುಟುಂಬದಿಂದ ಬಂದ ತಕ್ಷಣ ಮಕ್ಕಳೂ ನಟರಾಗಬೇಕು ಎಂಬ ನಿಯಮವಿಲ್ಲ. ಮಕ್ಕಳಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಕರೀನಾ ಹೆಮ್ಮೆಯಿಂದ ಹೇಳುತ್ತಾರೆ.

ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

ಮಕ್ಕಳಲ್ಲಿ ಕರುಣೆ ಮತ್ತು ದಯೆಯ ಗುಣಗಳನ್ನು ಬೆಳೆಸುವುದು ಅವರ ಮುಖ್ಯ ಗುರಿ. ಕ್ರೀಡಾಪಟು ಆಗುವ ಮಗನ ಕನಸಿಗೆ ಪೋಷಕರ ಪ್ರೋತ್ಸಾಹ ಸದಾ ಇರುತ್ತದೆ. ಸರಿ ದಾರಿಯಲ್ಲಿ ನಡೆಸುವುದು ತಾಯಂದಿರ ಜವಾಬ್ದಾರಿ. ಕರೀನಾ ಅವರ ಈ ಮಾತುಗಳು ಇಂದಿನ ಪೋಷಕರಿಗೆ ಹೊಸ ಆಲೋಚನೆಯನ್ನು ನೀಡುವಂತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us