ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಬೇರೆಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಆದ ನಂತರ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಈ ಜೋಡಿ, ಮರಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಈ ದಂಪತಿ ವಿದೇಶ ಪ್ರಯಾಣಕ್ಕೆ ತೆರಳುತ್ತಾರೆ. ಈಗ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಅಮೆರಿದಲ್ಲಿದ್ದಾರೆ. ಅಷ್ಟೇ ಅಲ್ಲ, ವಿಶೇಷ ಫೋಟೋ ಕ್ಲಿಕ್ಕಿಸಿಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.
ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಮದುವೆ ಆದರು. ಆ ಬಳಿಕ ಅವರು ಹನಿಮೂನ್ಗೂ ತೆರಳಿದ್ದರು. ಬಳಿಕ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಆಗಾಗ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಒಬ್ಬರ ಬೆಂಬಲಕ್ಕೆ ಒಬ್ಬರು ನಿಂತಿದ್ದಾರೆ. ಇದರ ಜತೆಗೆ ವಿಶೇಷ ಫೋಟೋಗಳನ್ನು ಇವರು ಹಂಚಿಕೊಳ್ಳುತ್ತಾರೆ.
ಕತ್ರಿನಾ ಹಾಗೂ ವಿಕ್ಕಿ ಜೋಡಿಯನ್ನು ಅನೇಕ ಸೆಲಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ವಿಕ್ಕಿಗಿಂತ ಕತ್ರಿನಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಿಯೇ ಇಲ್ಲ. ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಇವರು ಮದುವೆ ಆಗುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಿದರು. ಈಗ ಅಮೆರಿಕದಲ್ಲಿ ಈ ಜೋಡಿ ರಜೆಯ ಮಜ ಕಳೆಯುತ್ತಿದೆ. ‘ಇದು ನನ್ನ ಫೇವರಿಟ್ ಜಾಗ’ ಎಂದು ಕತ್ರಿನಾ ಬರೆದುಕೊಂಡಿದ್ದಾರೆ. ಇವರು ಹಂಚಿಕೊಂಡ ಫೋಟೋಗೆ, ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ.
ವೈರಲ್ ಆಗಿತ್ತು ಸ್ವಿಮಿಂಗ್ಪೂಲ್ ಫೋಟೋ
ಇತ್ತೀಚೆಗೆ ಕತ್ರಿನಾ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕತ್ರಿನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್ ಪೂಲ್ನಲ್ಲಿ ನಿಂತಿದ್ದಾರೆ. ವಿಕ್ಕಿ ಶರ್ಟ್ಲೆಸ್ ಆಗಿದ್ದಾರೆ. ಕತ್ರಿನಾ ಅವರು ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ. ಇದಕ್ಕೆ ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಶನ್ಅನ್ನು ಕತ್ರಿನಾ ನೀಡಿದ್ದರು. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದರು.
ಕತ್ರಿನಾ ಹಾಗೂ ವಿಕ್ಕಿ ಇಬ್ಬರು ತಮ್ಮತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಟೈಗರ್ 3’ ಸಿನಿಮಾದ ಶೂಟಿಂಗ್ನಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ಈ ಸರಣಿಯ ಎರಡು ಸಿನಿಮಾಗಳು ಹಿಟ್ ಆಗಿವೆ. ಇನ್ನೂ ಕೆಲ ಚಿತ್ರಗಳು ಅವರ ಕೈಯಲ್ಲಿ ಇವೆ. ‘ಗೋವಿಂದ ನಾಮ್ ಮೇರಾ’ ಮೊದಲಾದ ಸಿನಿಮಾ ಕೆಲಸಗಳಲ್ಲಿ ವಿಕ್ಕಿ ತೊಡಗಿಕೊಂಡಿದ್ದಾರೆ. ಇಬ್ಬರನ್ನು ಒಟ್ಟಾಗಿ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.