AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಫರ್​​ ಕಳೆದುಕೊಂಡಾಗ ಸ್ಟಾರ್​ ಮಕ್ಕಳು ಅಳುವುದಿಲ್ಲ’; ಬಾಲಿವುಡ್​ನಲ್ಲಿರುವ ಹೊರಗಿನವರನ್ನು ಟೀಕಿಸಿದ ಸೋನಾಕ್ಷಿ ಸಿನ್ಹಾ

ಸ್ಟಾರ್​ ನಟರ ಮಕ್ಕಳು ಹಾಗೂ ಹೊರಗಿನವರು ಎನ್ನುವ ಎರಡು ಕ್ಯಾಟೆಗಿರಿಯಲ್ಲಿ ಬಾಲಿವುಡ್​ಅನ್ನು ವಿಂಗಡಿಸಲಾಗುತ್ತದೆ. ಸ್ಟಾರ್​ ನಟರಿಂದ ನಮ್ಮ ಆಫರ್​ ಕೈ ತಪ್ಪಿತು ಎಂದು ಹೊರಗಿನವರು ಅನೇಕ ಬಾರಿ ಹೆಳಿಕೊಂಡಿದ್ದಾರೆ.

‘ಆಫರ್​​ ಕಳೆದುಕೊಂಡಾಗ ಸ್ಟಾರ್​ ಮಕ್ಕಳು ಅಳುವುದಿಲ್ಲ’; ಬಾಲಿವುಡ್​ನಲ್ಲಿರುವ ಹೊರಗಿನವರನ್ನು ಟೀಕಿಸಿದ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 29, 2021 | 9:35 PM

ಬಾಲಿವುಡ್​ನಲ್ಲಿ ಸೋನಾಕ್ಷಿ ಸಿನ್ಹಾ ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್​ ಕಿಡ್​ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್​ಗಳು ಬರುತ್ತಿಲ್ಲ. ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಬಾಲಿವುಡ್​ನಲ್ಲಿ ಹೊರಗಿನವರನ್ನು ಪರೋಕ್ಷವಾಗಿ ಟೀಕಿಸಿದ್ದು, ನಮಗೂ ಆಫರ್​ಗಳು ಕೈತಪ್ಪುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಸ್ಟಾರ್​ ನಟರ ಮಕ್ಕಳು ಹಾಗೂ ಹೊರಗಿನವರು ಎನ್ನುವ ಎರಡು ವರ್ಗದಲ್ಲಿ  ಬಾಲಿವುಡ್​ಅನ್ನು ವಿಂಗಡಿಸಲಾಗುತ್ತದೆ. ಸ್ಟಾರ್​ ನಟರಿಂದ ನಮ್ಮ ಆಫರ್​ ಕೈ ತಪ್ಪಿತು ಎಂದು ಹೊರಗಿನವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ಗೆ ಸಿನಿಮಾಆಫರ್​ಗಳು ತಪ್ಪಿ ಹೋಗುವುದಕ್ಕೆ ಸಾಕಷ್ಟು ಸ್ಟಾರ್​​ ನಿರ್ದೇಶಕರ ಕೈವಾಡ ಇತ್ತು ಎನ್ನುವ ಆರೋಪ ಇದೆ. ಹೀಗಿರುವಾಗಲೇ ಸೋನಾಕ್ಷಿ ಈ ಬಗ್ಗೆ ಮಾತನಾಡಿದ್ದಾರೆ.

‘ನಮಗೆ ಬಂದ ಸಿನಿಮಾ ಬೇರೆಯವರ ಕೈ ಸೇರುವುದು ಸರ್ವೇ ಸಾಮಾನ್ಯ. ಈ ವಿಚಾರದಲ್ಲಿ ಸ್ಟಾರ್​ ಕಿಡ್​ಗಳನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲ. ಸ್ಟಾರ್​ ನಟರ ಮಕ್ಕಳೂ ಸಿನಿಮಾ ಆಫರ್​ ಕಳೆದುಕೊಂಡ ಉದಾಹರಣೆ ಇದೆ. ಆದರೆ, ಅವರು ಹೋಗಿ ಎಲ್ಲರ ಎದುರು ಅತ್ತಿಲ್ಲ. ಈ ರೀತಿ ಎಲ್ಲರಿಗೂ ಆಗುತ್ತದೆ. ಇದು ಜೀವನ. ಅದನ್ನು ಎದುರಿಸಿ’ ಎಂದು ಸೋನಾಕ್ಷಿ ಕಿವಿಮಾತು ಹೇಳಿದ್ದಾರೆ.

ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್​ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್​ ಖಾನ್​ ನಟನೆಯ ದಬಾಂಗ್​ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್​ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.

ಇದನ್ನೂ ಓದಿ: ಬಾಲಯ್ಯನ ಜೊತೆ ನಟಿಸ್ತಿಲ್ವಂತೆ ಸೋನಾಕ್ಷಿ, ಹೊಸ ಸಿನಿಮಾ ಬಗ್ಗೆ ಶೀಘ್ರವೇ ಕೊಡ್ತಾರಂತೆ ಸುದ್ದಿ

ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?

Published On - 6:59 pm, Wed, 29 September 21

ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ