AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ರಿನಾ ಪ್ರೆಗ್ನೆಂಟ್ ಆಗುತ್ತಿದ್ದಂತೆ ವೈರಲ್ ಆಗುತ್ತಿದೆ ಸಲ್ಲು ಜೊತೆಗಿನ ಹಳೆಯ ವಿಡಿಯೋ

ಕತ್ರಿನಾ ಕೈಫ್ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯ ನಡುವೆ, ಅವರ ಹಳೆಯ ವಿಡಿಯೋ ಸಲ್ಮಾನ್ ಖಾನ್ ಜೊತೆ ವೈರಲ್ ಆಗಿದೆ. ‘ಪಾರ್ಟ್ನರ್’ ಚಿತ್ರದ ಈ ದೃಶ್ಯದಲ್ಲಿ ಅವರ ನಡುವಿನ ಹಾಸ್ಯಮಯ ಸಂಭಾಷಣೆ ಅಭಿಮಾನಿಗಳ ಗಮನ ಸೆಳೆದಿದೆ.  ಆ ಬಗ್ಗೆ ಇಲ್ಲಿದೆ ವಿವರ.

ಕತ್ರಿನಾ ಪ್ರೆಗ್ನೆಂಟ್ ಆಗುತ್ತಿದ್ದಂತೆ ವೈರಲ್ ಆಗುತ್ತಿದೆ ಸಲ್ಲು ಜೊತೆಗಿನ ಹಳೆಯ ವಿಡಿಯೋ
ಕತ್ರಿನಾ-ವಿಕ್ಕಿ ಹಾಗೂ ಕತ್ರಿನಾ-ಸಲ್ಲು
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 25, 2025 | 11:37 AM

Share

ಕತ್ರಿನಾ ಕೈಫ್ (Katrina Kaif) ಅವರು ಈಗ ಪ್ರೆಗ್ನೆಂಟ್ ಆಗಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ವಿಕ್ಕಿ ಕೌಶಲ್ ಜೊತೆ ಕತ್ರಿನಾ ವಿವಾಹ ಆದರು. ಈಗ ಇಬ್ಬರೂ ಪಾಲಕರಾಗುವ ಖುಷಿಯಲ್ಲಿ ಇದ್ದಾರೆ. ಕತ್ರಿನಾ ಕೈಫ್ ಅವರು ಇತ್ತೀಚೆಗೆ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಹಾಗಾಗಿ, ಇವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದೇ ಹೇಳಲಾಗಿತ್ತು. ಅದು ನಿಜವಾಗಿದೆ. ಹೀಗಿರುವಾಗಲೇ ಇವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಪ್ರೀತಿಸುತ್ತಿದ್ದರು. ಇವರ ಸಂಬಂಧ ಮದುವೆವರೆಗೆ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಕತ್ರಿನಾ ಹಾಗೂ ಸಲ್ಮಾನ್ ಮಧ್ಯೆ ಬ್ರೇಕಪ್ ಆಯಿತು. ಆ ಬಳಿಕ ಕತ್ರಿನಾ ಜೀವನದಲ್ಲಿ ಸಾಕಷ್ಟು ಏರಿಳಿತ ಬಂತು ಎಂಬುದು ಎರಡನೇ ವಿಚಾರ. ಈಗ ಕತ್ರಿನಾ ಹಾಗೂ ಸಲ್ಲು ಚಿತ್ರದ ಕ್ಲಿಪ್ ವೈರಲ್ ಆಗಿದೆ. ಈ ಕ್ಲಿಪ್​ನಲ್ಲಿ ಫನ್ನಿ ಟಾಕ್ ಇದೆ.

ಸಲ್ಲು ವಿಡಿಯೋ

‘ಹೆಚ್ಚು ಎಂದರೆ ಏನಾಗುತ್ತದೆ. ನನಗೆ ಪ್ರೀತಿ ಆಗಬಹುದು, ಮದುವೆ ಆಗಬಹುದು, ಮಕ್ಕಳಾಗಬಹುದು, ಆ ಮಗು ನಿಮಗೆ ಪ್ರೇಮ್ ಅಂಕಲ್ ಎಂದು ಕರೆಯುತ್ತೆ’ ಎಂದು ಕತ್ರಿನಾ ಸಲ್ಲುಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. 2007ರಲ್ಲಿ ಬಂದ ‘ಪಾರ್ಟ್ನರ್’ ಚಿತ್ರದ ದೃಶ್ಯ ಇದಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಪ್ರೇಮ್ ಹೆಸರಿನ ಪಾತ್ರ ಮಾಡಿದ್ದರು.

ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟಿ ಕತ್ರಿನಾ ಕೈಫ್

ಕತ್ರಿನಾ ಹಾಗೂ ಸಲ್ಮಾನ್ ಖಾನ್ ಬ್ರೇಕಪ್ ಬಳಿಕ ಒಳ್ಳೆಯ ಗೆಳೆತನ ಮುಂದುವರಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ವಿಕ್ಕಿ ಜೊತೆಗಿನವ ವಿವಾಹದ ಬಳಿಕವೂ ಕತ್ರಿನಾ ಅವರು ಸಲ್ಲು ಜೊತೆ ನಟಿಸಿದ್ದಾರೆ. ‘ಟೈಗರ್ 3’ ಸಿನಿಮಾ ರಿಲೀಸ್ ಆಯಿತು. ಕತ್ರಿನಾ ಕೊನೆಯದಾಗಿ ನಟಿಸಿದ ಚಿತ್ರ ಎಂದರೆ ಅದು ‘ಮೇರಿ ಕ್ರಿಸ್​ಮಸ್’ ಆ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:50 am, Thu, 25 September 25

ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?