ಮದುವೆ ಖುಷಿ: ಸಿಬ್ಬಂದಿಗೆ ಚಿನ್ನ ಉಡುಗೊರೆ ಕೊಟ್ಟ ಕಾವ್ಯಾ-ಅನಿರುದ್ಧ್

ಕಾವ್ಯಾ ಮಾರನ್ ಭಾರತದ ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ. ಸನ್ ನೆಟ್​​ವರ್ಕ್ಸ್​​ ಮತ್ತು ಇನ್ನೂ ಹಲವಾರು ಉದ್ಯಮಗಳ ಒಡೆಯ. ಕಾವ್ಯಾ ಮಾರನ್ ಅವರು ಸಹ ಸನ್ ನೆಟ್​​ವರ್ಕ್ಸ್ ಮತ್ತು ಸನ್​​ರೈಸರ್ಸ್​​ ಹೈದರಾಬಾದ್​​ನ ಮಾಲಕಿ. ಇದೀಗ ಕಾವ್ಯಾ ಮಾರನ್ ವಿವಾಹದ ಖುಷಿಯಲ್ಲಿ ಸನ್ ನೆಟ್​​ವರ್ಕಸ್​​ನ ಸಿಬ್ಬಂದಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

ಮದುವೆ ಖುಷಿ: ಸಿಬ್ಬಂದಿಗೆ ಚಿನ್ನ ಉಡುಗೊರೆ ಕೊಟ್ಟ ಕಾವ್ಯಾ-ಅನಿರುದ್ಧ್
Kavya Maran Anirudh

Updated on: Nov 21, 2026 | 12:36 PM

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಯುವ ಉದ್ಯಮಿ ಕಾವ್ಯಾ ಮಾರನ್ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಕಾವ್ಯಾ ಮಾರನ್ ಭಾರತದ ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ. ಸನ್ ನೆಟ್​​ವರ್ಕ್ಸ್​​ ಮತ್ತು ಇನ್ನೂ ಹಲವಾರು ಉದ್ಯಮಗಳ ಒಡೆಯ. ಕಾವ್ಯಾ ಮಾರನ್ ಅವರು ಸಹ ಸನ್ ನೆಟ್​​ವರ್ಕ್ಸ್ ಮತ್ತು ಸನ್​​ರೈಸರ್ಸ್​​ ಹೈದರಾಬಾದ್​​ನ ಮಾಲಕಿ. ಇದೀಗ ಕಾವ್ಯಾ ಮಾರನ್ ವಿವಾಹದ ಖುಷಿಯಲ್ಲಿ ಸನ್ ನೆಟ್​​ವರ್ಕಸ್​​ನ ಸಿಬ್ಬಂದಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕರಾದ ಕಾವ್ಯಾ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರುಗಳು ಗ್ರೀಸ್​​ನಲ್ಲಿ ಇತ್ತೀಚೆಗಷ್ಟೆ ಭಾರಿ ಅದ್ಧೂರಿಯಾಗಿ ವಿವಾಹವಾದರು. ಮದುವೆಯ ನಂತರ ಸನ್ ಗ್ರೂಪ್ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಇದೀಗ ಸನ್ ಗ್ರೂಪ್​​​ನ ಉದ್ಯೋಗಿಯೊಬ್ಬರು ಕಾವ್ಯಾ ಮಾರನ್ ಮತ್ತು ಅನಿರುದ್ಧ್ ಕಡೆಯಿಂದ ತಮಗೆ ಬಂದಿರುವ ಚಿನ್ನದ ಉಂಗುರವನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Loading...

ಉದ್ಯೋಗಿಯೊಬ್ಬರು ಮದುವೆಯ ಉಡುಗೊರೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ವ್ಯಕ್ತಿ ಹೇಳಿರುವಂತೆ, ಕಾವ್ಯಾ ಹಾಗೂ ಅನಿರುದ್ಧ್ ಅವರ ಮದುವೆ ಆರತಕ್ಷತೆಯ ಆಮಂತ್ರಣದ ಜೊತೆಗೆ ಒಂದು ಸ್ವೀಟ್ ಬಾಕ್ಸ್ ಹಾಗೂ ಒಂದು ಚಿನ್ನದ ಉಂಗುರವನ್ನು ನೀಡಲಾಗಿದೆ. ಜೊತೆಗೆ ಆಯಾ ಕಚೇರಿಗಳಲ್ಲಿಯೇ ಮದುವೆಯ ಭರ್ಜರಿ ಬೋಜನವನ್ನು ಸಹ ಆಯೋಜನೆ ಮಾಡಲಾಗಿದೆ. ಉಡುಗೊರೆಯನ್ನು ಪಡೆದ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ

ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರು 2026ರ ನವೆಂಬರ್ 11ರಂದು ಗ್ರೀಸ್‌ನಲ್ಲಿ ವಿವಾಹವಾದರು. ಇದು ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭವಾಗಿತ್ತು. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಹಲವು ಪ್ರಸಿದ್ಧ ವ್ಯಕ್ತಿಗಳೂ ಮದುವೆಯಲ್ಲಿ ಉಪಸ್ಥಿತರಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಅತಿಥಿಗಳಲ್ಲಿ ಸೇರಿದ್ದರು.

ಗ್ರೀಸ್‌ನಲ್ಲಿ ಮದುವೆಯಾದ ನಂತರ ಕಾವ್ಯಾ ಮತ್ತು ಅನಿರುದ್ಧ್ ಭಾರತಕ್ಕೆ ಮರಳಿದರು. ಈ ನವವಿವಾಹಿತ ದಂಪತಿ ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಅನಿರುದ್ಧ್ ರವಿಚಂದರ್ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ‘ಜವಾನ್’, ‘ಲಿಯೋ’, ‘ಜೈಲರ್’ ಮತ್ತು ‘ವಿಕ್ರಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ.

ಇನ್ನು ಕಾವ್ಯಾ ಮಾರನ್, ಭಾರತದ ಜನಪ್ರಿಯ ಯುವ ಉದ್ಯಮಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹ ಮಾಲಕಿ ಮತ್ತು ಸನ್ ನೆಟ್​​ವರ್ಕಸ್​​ನ ಭಾವಿ ಮಾಲಕಿಯೂ ಹೌದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us