ಒಂದೇ ವಾರಕ್ಕೆ 700 ಕೋಟಿ ರೂಪಾಯಿ ಕಲೆಕ್ಷನ್; ‘RRR​’ ಕಲೆಕ್ಷನ್​ ಹಿಂದಿಕ್ಕಲಿದೆ ‘ಕೆಜಿಎಫ್ 2’?

ಒಂದೇ ವಾರಕ್ಕೆ 700 ಕೋಟಿ ರೂಪಾಯಿ ಕಲೆಕ್ಷನ್; ‘RRR​’ ಕಲೆಕ್ಷನ್​ ಹಿಂದಿಕ್ಕಲಿದೆ ‘ಕೆಜಿಎಫ್ 2’?
ಯಶ್

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೆಷ್ಟೋ ದೊಡ್ಡದೊಡ್ಡ ಸಿನಿಮಾಗಳು ತೆರೆಗೆ ಬಂದಿವೆ. ಆದರೆ, ಯಾವ ಚಿತ್ರವೂ 700 ಕೋಟಿ ರೂಪಾಯಿ ಬಾಚಿಕೊಂಡಿರಲಿಲ್ಲ. ಈಗ ‘ಕೆಜಿಎಫ್ 2’ ಇಂತಹ ಮೈಲಿಗಲ್ಲನ್ನು ಸ್ಥಾಪಿಸಿದೆ.

TV9kannada Web Team

| Edited By: Rajesh Duggumane

Apr 21, 2022 | 7:12 PM

ಕೊವಿಡ್ (Covid 19) ಕಾಣಿಸಿಕೊಂಡ ನಂತರದಲ್ಲಿ ಜನರು ಚಿತ್ರಮಂದಿರಕ್ಕೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ ಎಂಬ ಟಾಕ್ ಶುರುವಾಗಿತ್ತು. ‘ಇದೇ ಕಾರಣಕ್ಕೆ ನಮ್ಮ ಸಿನಿಮಾಗಳು ಚೆನ್ನಾಗಿ ಕಲೆಕ್ಷನ್ ಮಾಡುತ್ತಿಲ್ಲ’ ಎಂದು ಬಾಲಿವುಡ್ ಮಂದಿ ಹೇಳಿಕೊಂಡಿದ್ದರು. ಆದರೆ, ಈ ಮಾತನ್ನು ‘ಆರ್​ಆರ್​ಆರ್’ ಸಿನಿಮಾ (RRR Movie) ಸುಳ್ಳು ಮಾಡಿತ್ತು. ವಿಶ್ವಮಟ್ಟದಲ್ಲಿ ಈ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಕಲೆಕ್ಷನ್ ಹಿಂದಿಕ್ಕೋಕೆ ‘ಕೆಜಿಎಫ್: ಚಾಪ್ಟರ್​​ 2’  (KGF Chapter 2) ರೆಡಿ ಆದಂತಿದೆ. ಒಂದೇ ವಾರದಲ್ಲಿ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಬಂಗಾರದ ಬೆಳೆ ತೆಗೆದಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೆಷ್ಟೋ ದೊಡ್ಡದೊಡ್ಡ ಸಿನಿಮಾಗಳು ತೆರೆಗೆ ಬಂದಿವೆ. ಆದರೆ, ಯಾವ ಚಿತ್ರವೂ 700 ಕೋಟಿ ರೂಪಾಯಿ ಬಾಚಿಕೊಂಡಿರಲಿಲ್ಲ. ಈಗ ‘ಕೆಜಿಎಫ್ 2’ ಇಂತಹ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಮೂಲಕ ಅತಿ ಹೆಚ್ಚು ಬಿಸ್ನೆಸ್ ಮಾಡಿದ ಸ್ಯಾಂಡಲ್​ವುಡ್ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಏಳು ದಿನಕ್ಕೆ ಈ ಸಿನಿಮಾ 719.30 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ‘ಹಿಂದೂಸ್ತಾನ್​ ಟೈಮ್ಸ್’​ ವರದಿ ಮಾಡಿದೆ. ‘ಬಾಹುಬಲಿ 2’ ಮೊದಲ ವಾರ 800 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದಾದ ಬಳಿಕ ಮೊದಲ ವಾರದಲ್ಲಿ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2’ಗೆ ಸಿಕ್ಕಿದೆ.

ಈ ಸಿನಿಮಾ ಹಿಂದಿಗೂ ಡಬ್ ಆಗಿದ್ದು, ಹಿಂದಿ ವರ್ಷನ್​ನಿಂದ ಏಳು ದಿನದಲ್ಲಿ 250 ಕೋಟಿ ರೂಪಾಯಿ ಗಳಿಸಿದೆ. ಅತಿ ವೇಗದಲ್ಲಿ ಈ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಖ್ಯಾತಿಯನ್ನು ‘ಕೆಜಿಎಫ್ 2’ ತನ್ನದಾಗಿಸಿಕೊಂಡಿದೆ. ‘ಬಾಹುಬಲಿ 2’, ‘ದಂಗಲ್’, ‘ಸುಲ್ತಾನ್​’, ‘ಟೈಗರ್ ಜಿಂದಾ ಹೈ’ ಸಿನಿಮಾಗಳು ಮಾಡಿದ ದಾಖಲೆಗಳನ್ನು ಯಶ್ ಧೂಳಿಪಟ ಮಾಡಿದ್ದಾರೆ.

ಮಾರ್ಚ್​ 22ರಂದು ಹಿಂದಿಯಲ್ಲಿ ‘ಜೆರ್ಸಿ’ ಸಿನಿಮಾ ತೆರೆಗೆ ಬರುತ್ತಿದೆ. ಇದು ರಿಮೇಕ್ ಸಿನಿಮಾ. ಶಾಹಿದ್ ಕಪೂರ್ ನಟನೆಯ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಒಂದೊಮ್ಮೆ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾದರೆ, ‘ಕೆಜಿಎಫ್ 2’ಗೆ ಬಾಲಿವುಡ್​ನಲ್ಲಿ ಕೊಂಚ ಹಿನ್ನಡೆ ಆಗಬಹುದು. ಇಲ್ಲವಾದಲ್ಲಿ, ಅನಾಯಾಸವಾಗಿ ‘ಆರ್​ಆರ್​ಆರ್’ ಕಲೆಕ್ಷನ್​ಅನ್ನು ಈ ಸಿನಿಮಾ ಹಿಂದಿಕ್ಕಲಿದೆ ಎನ್ನಲಾಗುತ್ತಿದೆ. ಹಾಗಾದಲ್ಲಿ ಮತ್ತೂ ಒಂದಷ್ಟು ದಾಖಲೆಗಳು ‘ಕೆಜಿಎಫ್ 2’ ತೆಕ್ಕೆಗೆ ಸೇರಲಿದೆ.

ಇದನ್ನೂ ಓದಿ:  ‘ನಾನು ಸಿನಿಮಾಗೆ ಬೆಂಬಲ ನೀಡಿಲ್ಲ ಅಂದ್ರೂ ಸುದ್ದಿಯಲ್ಲಿ ಇರ್ತೀನಿ’; ಸುದೀಪ್ ಹೀಗೆ ಹೇಳಿದ್ದು ಏಕೆ?

‘ನಿಮ್ಮ ಹೃದಯವೇ ನನ್ನ ಟೆರಿಟರಿ’; ಒಂದು ಸಣ್ಣ ಕಥೆ ಹೇಳಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಯಶ್

Follow us on

Related Stories

Most Read Stories

Click on your DTH Provider to Add TV9 Kannada