ಶೀಘ್ರವೇ ಖುಷ್ಬೂ ಸುಂದರ್ ಹಿರಿಮಗಳು ಚಿತ್ರರಂಗಕ್ಕೆ ಎಂಟ್ರಿ? ಕೇಳಿ ಬಂತು ಬಿಗ್ ಅಪ್ಡೇಟ್
ಖುಷ್ಬೂ ಸುಂದರ್, ಒಂದು ಕಾಲದಲ್ಲಿ ದಕ್ಷಿಣ ಭಾರತದ ಟಾಪ್ ನಟಿ. ಇಂದು ತಮ್ಮ ಮಗಳು ಅವಂತಿಕಾ ಅವರ ಚಿತ್ರರಂಗ ಪ್ರವೇಶದ ಸುದ್ದಿಯಿಂದಾಗಿ ಮತ್ತೆ ಚರ್ಚೆಯಲ್ಲಿದ್ದಾರೆ. ಅವಂತಿಕಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳು ಅವರ ಸೌಂದರ್ಯ ಮತ್ತು ಜನಪ್ರಿಯತೆಯನ್ನು ತೋರಿಸುತ್ತವೆ. ಅವರ ಕಿರಿಯ ಮಗಳು ಆನಂದಿತಾ ನಿರ್ದೇಶಕ ಮಣಿರತ್ನಂ ಅವರ ಬಳಿ ಕೆಲಸ ಮಾಡುತ್ತಿದ್ದಾರೆ.

ಖುಷ್ಬೂ ಸುಂದರ್ (Khushboo) ಒಂದು ಕಾಲದಲ್ಲಿ ದಕ್ಷಿಣ ಚಿತ್ರರಂಗದ ಟಾಪ್ ಹೀರೋಯಿನ್ ಆಗಿದ್ದರು. ಅವರು ತಮ್ಮ ಸೌಂದರ್ಯ ಮತ್ತು ನಟನೆಯಿಂದ ದಕ್ಷಿಣ ಚಿತ್ರರಂಗವನ್ನು ಆಳಿದರು. ಆ ಸಮಯದಲ್ಲಿ, ಅವರ ಅಭಿಮಾನಿಗಳು ವಿಶೇಷ ದೇವಾಲಯವನ್ನು ನಿರ್ಮಿಸಿ ಪೂಜಿಸಿದ ಉದಾಹರಣೆ ಇದೆ. ಖುಷ್ಬೂ ಸುಂದರ್ 90ರ ದಶಕದಲ್ಲಿ ಟಾಪ್ ಹೀರೋಯಿನ್ ಆಗಿ ಖ್ಯಾತಿ ಗಳಿಸಿದರು. ಅವರು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ, ಅವರ ಮಗಳು ನಟಿಯಾಗಿ ಇತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ವರದಿ ಆಗಿದೆ.
ಖುಷ್ಬೂ ಅವರು ಚಲನಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ವಯಸ್ಸಿಗೆ ಸೂಕ್ತವಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಆದರೆ, ಖುಷ್ಬೂ ಅವರ ವೈಯಕ್ತಿಕ ಜೀವನ ಮತ್ತು ಕುಟುಂಬದ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ, ಅವರು ನಟ ಪ್ರಭು ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಪ್ರಭು ಈಗಾಗಲೇ ವಿವಾಹಿತನಾಗಿದ್ದರಿಂದ, ಇಬ್ಬರೂ ವಿಚ್ಛೇದನ ಪಡೆದರು. ನಂತರ ಖುಷ್ಬೂ ತಮಿಳು ನಿರ್ದೇಶಕ ಸುಂದರ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಅವಂತಿಕಾ ಖುಷ್ಬೂ ಅವರ ಹಿರಿಯ ಮಗಳು. ಪ್ರಸ್ತುತ ವಿದೇಶದಲ್ಲಿ ಓದುತ್ತಿದ್ದಾರೆ. ಅವಂತಿಕಾ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ಅದ್ಭುತ ಗ್ಲಾಮರ್ ಫೋಟೋಶೂಟ್‌ಗಳನ್ನು ಮಾಡುವ ಮೂಲಕ ನೆಟ್ಟಿಗರನ್ನು ಮೆಚ್ಚಿಸುತ್ತಾರೆ. ಈ ಮಧ್ಯೆ, ಅವಂತಿಕಾ ಕೂಡ ತನ್ನ ತಾಯಿಯಂತೆ ಚಿತ್ರಗಳಿಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅವಂತಿಕಾ ಅವರ ಇಂಡಸ್ಟ್ರೀ ಎಂಟ್ರಿ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಖುಷ್ಬೂ ಎಂದಿಗೂ ಮರೆಯಲಾಗದ ಸಹಾಯ ಮಾಡಿದ್ದ ರವಿಚಂದ್ರನ್; ಈಗಲೂ ನೆನಪಿಸಿಕೊಳ್ಳುತ್ತಾರೆ ನಟಿ
ಖುಷ್ಬೂ ಅವರ ಕಿರಿಯ ಮಗಳು ಆನಂದಿತಾ ಪ್ರಸ್ತುತ ನಿರ್ದೇಶಕ ಮಣಿರತ್ನಂ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಖುಷ್ಬೂ ಕುಟುಂಬದಿಂದ ಶೀಘ್ರದಲ್ಲೇ ನಾಯಕಿಯೊಬ್ಬರು ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ. ಪ್ರಸ್ತುತ, ಅವಂತಿಕಾ ಅವರ ಫೋಟೋಗಳು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಚರ್ಚೆ ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



