AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾದಿಂದ ಅರ್ಧಕ್ಕೆ ಹೊರ ನಡೆದ ರಶ್ಮಿಕಾ ಮಂದಣ್ಣ; ಕಾರಣ ತಿಳಿಯುವ ಮೊದಲೇ ಹೊಸ ನಾಯಕಿಯ ಆಯ್ಕೆ

ಈಗ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಗಾಸಿಪ್​ ಮಂದಿಯ ನಂಬಿಕೆ.

ಸಿನಿಮಾದಿಂದ ಅರ್ಧಕ್ಕೆ ಹೊರ ನಡೆದ ರಶ್ಮಿಕಾ ಮಂದಣ್ಣ; ಕಾರಣ ತಿಳಿಯುವ ಮೊದಲೇ ಹೊಸ ನಾಯಕಿಯ ಆಯ್ಕೆ
ರಶ್ಮಿಕಾ-ಕೃತಿ
ರಾಜೇಶ್ ದುಗ್ಗುಮನೆ
|

Updated on: Jul 14, 2023 | 6:30 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಖ್ಯಾತಿ ಹೆಚ್ಚುತ್ತಿದೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ಒಪ್ಪಿಕೊಂಡ ಸಿನಿಮಾದಿಂದ ಹೊರ ನಡೆದಿದ್ದು ಬಹಳವೇ ಕಡಿಮೆ. ಈಗ ಆ ರೀತಿಯ ಪರಿಸ್ಥಿತಿ ಬಂದೊದಗಿದೆ. ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಅವರು ನಿತಿನ್​ಗೆ ಜೊತೆಯಾಗಿ ನಟಿಸಬೇಕಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಜಾಗಕ್ಕೆ ದಕ್ಷಿಣದ ಖ್ಯಾತ ನಟಿಯ ಎಂಟ್ರಿ ಆಗಿದೆ ಅನ್ನೋದು ವಿಶೇಷ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​​ಗೆ ಎಂಟ್ರಿಕೊಟ್ಟಿದ್ದು ‘ಚಲೋ’ ಸಿನಿಮಾ ಮೂಲಕ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಅದೇ ರೀತಿ ‘ಭೀಷ್ಮ’ ಸಿನಿಮಾ ಕೂಡ ಗೆದ್ದಿತ್ತು. ವೆಂಕಿ ನಿರ್ದೇಶನದ, ರಶ್ಮಿಕಾ-ನಿತಿನ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ನಿತಿನ್, ವೆಂಕಿ ಹಾಗೂ ರಶ್ಮಿಕಾ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುವುದರಲ್ಲಿತ್ತು. #VNRTrio ಎಂದು ಈ ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿತ್ತು.

ಈಗ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಗಾಸಿಪ್​ ಮಂದಿಯ ನಂಬಿಕೆ. ಅಚ್ಚರಿ ಎಂದರೆ, ಈಗ ಹೊಸ ನಾಯಕಿಯ ಆಯ್ಕೆಯೂ ಶುರುವಾಗಿದೆ.

ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಈ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ವೆಂಕಿ ಅವರು ಕೃತಿ ಅವರನ್ನು ಭೇಟಿ ಮಾಡಿದ್ದು, ಶೀಘ್ರವೇ ಎಲ್ಲವೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ಮೊದಲು ನಿತಿನ್ ಹಾಗೂ ಕೃತಿ ಒಟ್ಟಾಗಿ ನಟಿಸಿದ್ದರು ಅನ್ನೋದು ವಿಶೇಷ.

ಇದನ್ನೂ ಓದಿ: ಹೊಸ ತೆಲುಗು ಸಿನಿಮಾದ ಅವಕಾಶ ಕಳೆದುಕೊಂಡರೆ ರಶ್ಮಿಕಾ? ಸೋಷಿಯಲ್ ಮೀಡಿಯಾ ಪೋಸ್ಟ್ ಯಾಕಾಗಿ?

ಒಂದೇ ಬಾರಿಗೆ ಇಷ್ಟು ಚಿತ್ರಗಳಿಗೆ ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಾಗದ ಕಾರಣ ರಶ್ಮಿಕಾ ನಿರ್ಮಾಪಕರ ಬಳಿ ಮಾತನಾಡಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಹೊರನಡೆದಿರುವುದು ನಿತಿನ್ ಚಿತ್ರಕ್ಕೆ ನಿಜಕ್ಕೂ ದೊಡ್ಡ ನಷ್ಟ. ಏಕೆಂದರೆ ರಶ್ಮಿಕಾ ಇರುವ ಕಾರಣಕ್ಕೆ ಸಿನಿಮಾಗೆ ಪ್ಯಾನ್ ಇಂಡಿಯಾ ಕ್ರೇಜ್ ಸೃಷ್ಟಿ ಆಗಿತ್ತು. ಈ ಕಾರಣದಿಂದಲೇ ರಶ್ಮಿಕಾ ಬದಲಿಗೆ ಕೃತಿ ಶೆಟ್ಟಿ ಆಯ್ಕೆ ಮಾಡಿರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್