AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ತೆಲುಗು ಸಿನಿಮಾದ ಅವಕಾಶ ಕಳೆದುಕೊಂಡರೆ ರಶ್ಮಿಕಾ? ಸೋಷಿಯಲ್ ಮೀಡಿಯಾ ಪೋಸ್ಟ್ ಯಾಕಾಗಿ?

Rashmika Mandanna: ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಹೊಸ ಸಿನಿಮಾ ಒಂದರಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಯಾವುದು ಆ ಸಿನಿಮಾ?

ಹೊಸ ತೆಲುಗು ಸಿನಿಮಾದ ಅವಕಾಶ ಕಳೆದುಕೊಂಡರೆ ರಶ್ಮಿಕಾ? ಸೋಷಿಯಲ್ ಮೀಡಿಯಾ ಪೋಸ್ಟ್ ಯಾಕಾಗಿ?
ರಶ್ಮಿಕಾ ಮಂದಣ್ಣ
ಮಂಜುನಾಥ ಸಿ.
|

Updated on: Jul 12, 2023 | 8:33 PM

Share

ತೆಲುಗು ಚಿತ್ರರಂಗದ (Tollywood) ಬ್ಯುಸಿ ನಟಿಯಾಗಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್ (Bollywood)​ ಮೇಲೆ ಹೆಚ್ಚು ಗಮನವಹಿಸಿದ್ದಾರೆ. ರಶ್ಮಿಕಾ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಲು ಇಚ್ಛಿಸಿರುವ ಕಾರಣದಿಂದಲೇ ತೆಲುಗು ಸಿನಿಮಾಗಳ ಅವಕಾಶಗಳನ್ನೂ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಘೋಷಣೆ ಆಗಿರುವ ತೆಲುಗು ಸಿನಿಮಾ ಒಂದರಿಂದ ರಶ್ಮಿಕಾರನ್ನು ಹೊರಗಿಡಲಾಗಿದೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಈ ಸುದ್ದಿಗೆ ಅನುಗುಣವಾಗಿಯೇ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ, ತೆಲುಗಿನ ಜನಪ್ರಿಯ ನಟ ನಿತಿನ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದರು. ಸಿನಿಮಾದ ಘೋಷಣೆ ಆಗಿ ಮುಹೂರ್ತವೂ ನಡೆಯಿತು. ಮೆಗಾಸ್ಟಾರ್ ಚಿರಂಜೀವಿ ಆಗಮಿಸಿ ಸಿನಿಮಾಕ್ಕೆ ಕ್ಲಾಪ್ ಮಾಡಿ ಹೋಗಿದ್ದರು. ಆದರೆ ಸಿನಿಮಾದ ಚಿತ್ರೀಕರಣ ಶುರುವಾದ ಕೆಲವೇ ದಿನಗಳಲ್ಲಿ ಸಿನಿಮಾದಿಂದ ರಶ್ಮಿಕಾರನ್ನು ಹೊರಗಿಡಲಾಗಿದೆ ಎನ್ನಲಾಗುತ್ತಿದೆ. ರಶ್ಮಿಕಾರ ಬ್ಯುಸಿ ಶೆಡ್ಯೂಲ್​ನಿಂದಾಗಿಯೇ ಚಿತ್ರನಿರ್ದೇಶಕ ವೆಂಕಿ ಕುಡುಮುಲ ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ. ಕೆಲವು ತೆಲುಗು ಮಾಧ್ಯಮಗಳು, ಸ್ವತಃ ರಶ್ಮಿಕಾರೆ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎಂದೂ ಸಹ ಸುದ್ದಿ ಮಾಡಿವೆ.

ರಶ್ಮಿಕಾ ಮಂದಣ್ಣ ಪ್ರಸ್ತುತ ಬರೋಬ್ಬರಿ ಐದು ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವುಗಳ ಸ್ಟಾರ್ ಮೌಲ್ಯ, ಬಜೆಟ್ ಗಾತ್ರ, ನಿರ್ಮಾಣ ಸಂಸ್ಥೆಗಳಿಗೆ ಹೋಲಿಸಿರೆ ನಿತಿನ್-ವೆಂಕಿ ಕುಡುಮುಲ ಅವರ ಸಿನಿಮಾ ತುಸು ಸಣ್ಣದೇ. ಆ ದೊಡ್ಡ ಬಜೆಟ್ ಸಿನಿಮಾಗಳಿಗಾಗಿ ಡೇಟ್ಸ್ ಹೊಂದಿಸಲೆಂದು ನಿತಿನ್ ಸಿನಿಮಾದಿಂದ ರಶ್ಮಿಕಾ ಹೊರಗೆ ನಡೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:Rashmika Mandanna: ‘ನಾನು ಆರು ಭಾಷೆ ಮಾತನಾಡುತ್ತೇನೆ’ ಎಂದು ಹೇಳಿ ಕನ್ನಡದಲ್ಲಿ ತಪ್ಪಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ

ಈ ಸುದ್ದಿ ವೈರಲ್ ಆಗಿರುವ ಬೆನ್ನಲ್ಲೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಾವು ಬಾಯಿ ಮುಚ್ಚಿಕೊಂಡಿರುವ ಚಿತ್ರವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ”ಇತ್ತೀಚಿನ ಹಲವು ಸಾಮಾನ್ಯ ವಿಷಯಗಳಿಗೆ ಇದೇ ನನ್ನ ಪ್ರತಿಕ್ರಿಯೆ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಈ ವಿಷಯದ ಬಗ್ಗೆಯೂ ನಾನು ಮೌನವಾಗಿಯೇ ಇರುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿದಿದೆ. ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಅದಾದ ಬಳಿಕ ಮತ್ತೊಂದು ಬಾಲಿವುಡ್ ಅವಕಾಶ ರಶ್ಮಿಕಾಗೆ ದೊರಕಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಟಾಲಿವುಡ್​ನಲ್ಲಿ ಈಗ ಕನ್ನಡದ ಮತ್ತೊಬ್ಬ ಚೆಲುವೆ ಶ್ರೀಲೀಲಾ ಹವಾ ಶುರುವಾಗಿದೆ. ರಶ್ಮಿಕಾ ಹಾಗೂ ಪೂಜಾ ಹೆಗ್ಡೆಗೆ ಸಿಗಬೇಕಿದ್ದ ಹಲವು ಅವಕಾಶಗಳನ್ನು ಶ್ರೀಲೀಲಾ ಬಾಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ರಶ್ಮಿಕಾ, ಟಾಲಿವುಡ್​ನಿಂದ ದೂರವಾಗಿದ್ದಾರೆ ಎಂಬ ಮಾತುಗಳು ಸಹ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ