AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಸಿನಿಮಾಕ್ಕೆ ಇಬ್ಬರು ಹಿಟ್ ನಿರ್ದೇಶಕರು: ‘ಟಾಕ್ಸಿಕ್’ ನಿರ್ಮಾಪಕರ ಹೊಸ ಪ್ಲ್ಯಾನ್

KVN Production: ಯಶ್ ನಟನೆಯ ‘ಟಾಕ್ಸಿಕ್’, ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಸೇರಿದಂತೆ ಹಲವು ಭಾರಿ ಬಜೆಟ್​ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ಸ್​ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಸಿನಿಮಾಕ್ಕಾಗಿ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕರನ್ನು ಒಟ್ಟಿಗೆ ಸೇರಿಸಿದೆ.

ಒಂದೇ ಸಿನಿಮಾಕ್ಕೆ ಇಬ್ಬರು ಹಿಟ್ ನಿರ್ದೇಶಕರು: ‘ಟಾಕ್ಸಿಕ್’ ನಿರ್ಮಾಪಕರ ಹೊಸ ಪ್ಲ್ಯಾನ್
Kvn
ಮಂಜುನಾಥ ಸಿ.
|

Updated on:Jan 03, 2025 | 3:12 PM

Share

ಕಳೆದ ವರ್ಷದ ಟಾಪ್ ಸಿನಿಮಾ ಪಟ್ಟಿಯಲ್ಲಿ ಕಡ್ಡಾಯವಾಗಿ ಕೇಳಿ ಬರುವ ಎರಡು ಸಿನಿಮಾಗಳೆಂದರೆ ಮಲಯಾಳಂನ ‘ಮಂಜ್ಞುಮೆಲ್ ಬಾಯ್ಸ್’ ಮತ್ತು ಫಹಾದ್ ಫಾಸಿಲ್ ನಟಿಸಿದ್ದ ‘ಆವೇಶಂ’. 2024ರ ಮೊದಲಾರ್ಧದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಹಲ್​ ಚಲ್ ಎಬ್ಬಿಸಿದ್ದ ಸಿನಿಮಾಗಳಿವು. ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ ವಿಮರ್ಶಕರ ಮನಸ್ಸನ್ನೂ ಗೆದ್ದಿದ್ದವು ಈ ಸಿನಿಮಾಗಳು. ಇದೀಗ ಈ ಎರಡು ಸಿನಿಮಾಗಳ ನಿರ್ದೇಶಕರನ್ನು ಒಂದೇ ಸಿನಿಮಾಕ್ಕೆ ಒಟ್ಟಿಗೆ ಸೇರಿಸಿದ್ದಾರೆ ‘ಟಾಕ್ಸಿಕ್’ ಸಿನಿಮಾದ ಮೇಕರ್ಸ್.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ಸ್​ ಹೊಸ ಮಲಯಾಳಂ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಈ ಸಿನಿಮಾಕ್ಕೆ ‘ಮಂಜ್ಞುಮೆಲ್ ಬಾಯ್ಸ್’ ಹಾಗೂ ‘ಆವೇಶಂ’ ಸಿನಿಮಾದ ನಿರ್ದೇಶಕರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಲಿರುವುದು ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ದೇಶಕ ಚಿದಂಬರಂ ಆದರೆ ಸಿನಿಮಾದ ಕತೆ ಮತ್ತು ಚಿತ್ರಕತೆ ಬರೆದಿರುವುದು ‘ಆವೇಶಂ’ ಸಿನಿಮಾದ ನಿರ್ದೇಶಕ ಜೀತು ಮಾಧವನ್.

ಈ ಸಿನಿಮಾಕ್ಕೆ ತೆಸ್ಪಿಯನ್ ಫಿಲಮ್ಸ್​ ಬಂಡವಾಳ ಹೂಡಿದ್ದು, ಕೆವಿಎನ್ ಸಹ ಈ ಪ್ರಾಜೆಕ್ಟ್​ಗೆ ಕೈಜೋಡಿಸಿದೆ. ಕೆವಿಎನ್ ಕೈ ಜೋಡಿಸಿರುವ ಕಾರಣ ಪ್ರಾಜೆಕ್ಟ್ ದೊಡ್ಡದಾಗಿಯೇ ಆಗುವ ನಿರೀಕ್ಷೆ ಇದ್ದು, ಸಿನಿಮಾ ಮಲಯಾಳಂ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಸಿನಿಮಾದ ಪೋಸ್ಟರ್ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ದೂರದಲ್ಲಿ ನಡೆದು ಹೋಗುತ್ತಿರುವ ತಾಯಿಯನ್ನು ನೋಡುತ್ತಿರುವ ಮಗನ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ. ಸಿನಿಮಾದ ಪಾತ್ರವರ್ಗ ಇನ್ನಷ್ಟೆ ಗೊತ್ತಾಗಬೇಕಿದೆ.

ಇದನ್ನೂ ಓದಿ:ಯಶ್​ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು

ಕೆವಿಎನ್ ಪಾಲಿಗೆ ಇದು ಮೊದಲ ಮಲಯಾಳಂ ಸಿನಿಮಾ. ಕನ್ನಡದಲ್ಲಿ ‘ಕೆಡಿ’, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ಸ್​ ತಮಿಳಿನಲ್ಲಿ ವಿಜಯ್ ನಟನೆಯ ಕೊನೆಯ ಸಿನಿಮಾದ ನಿರ್ಮಾಣದಲ್ಲಿಯೂ ತೊಡಗಿಕೊಂಡಿದೆ. ಪ್ರೇಮ್ ನಿರ್ದೇಶಿಸಿ, ದರ್ಶನ್ ನಟಿಸಬೇಕಿರುವ ಸಿನಿಮಾಕ್ಕೂ ಕೆವಿಎನ್​ ಬಂಡವಾಳ ಹೂಡಲಿದೆ.

Kvn1

ತೆಸ್ಪಿಯನ್ ಫಿಲ್ಮ್ಸ್ ನ ಶ್ರೀಮತಿ ಶೈಲಜಾ ದೇಸಾಯಿ, ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರುಗಳು ನಿರ್ಮಾಣ ಹಾಗೂ ವಿತರಣೆ ಜವಾಬಬ್ದಾರಿ ತೆಗೆದುಕೊಂಡಿದ್ದರೆ, ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Fri, 3 January 25

Follow Us
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ