AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕೇಶ್ ಸಿನಿಮಾ ಯೂನಿವರ್ಸ್ ಮುಗಿದಿಲ್ಲ; ಭರ್ಜರಿ ಅಪ್ಡೇಟ್ ಕೊಟ್ಟ ಕನಗರಾಜ್

ಲೋಕೇಶ್ ಕನಗರಾಜ್ ಅವರ ಜನಪ್ರಿಯ ಎಲ್‌ಸಿಯು ಮುಂದುವರಿಯಲಿದೆ. ಇದು ಮುಗಿಯಿತು ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಸದ್ಯ ನಟನೆಯಲ್ಲಿ ತೊಡಗಿಸಿಕೊಂಡಿದ್ದರೂ, ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ ಬಳಿಕ ‘ಕೈದಿ 2’, ‘ವಿಕ್ರಮ್ 2’ ಸೇರಿ ಹಲವು ಎಲ್‌ಸಿಯು ಚಿತ್ರಗಳನ್ನು ನಿರ್ದೇಶಿಸುವುದಾಗಿ ಲೋಕೇಶ್ ಖಚಿತಪಡಿಸಿದ್ದಾರೆ. ಅಭಿಮಾನಿಗಳಲ್ಲಿ ಈಗ ಭಾರಿ ಸಂತಸ ಮನೆ ಮಾಡಿದೆ.

ಲೋಕೇಶ್ ಸಿನಿಮಾ ಯೂನಿವರ್ಸ್ ಮುಗಿದಿಲ್ಲ; ಭರ್ಜರಿ ಅಪ್ಡೇಟ್ ಕೊಟ್ಟ ಕನಗರಾಜ್
ಲೋಕೇಶ್
ರಾಜೇಶ್ ಹೆಗಡೆ ದುಗ್ಗುಮನೆ
|

Updated on:Jul 07, 2026 | 7:07 AM

Share

ಮುಖ್ಯಾಂಶಗಳು

  • ಸಿನೆಮ್ಯಾಟಿಕ್ ಯೂನಿವರ್ಸ್ ವದಂತಿಗಳಿಗೆ ಲೋಕೇಶ್ ಕನಗರಾಜ್ ಸ್ಪಷ್ಟನೆ
  • ಲೋಕೇಶ್ ಭರ್ಜರಿ ಎಲ್‌ಸಿಯು ಚಿತ್ರಗಳ ಬಗ್ಗೆ ಮಾಹಿತಿ
  • ಅಲ್ಲು ಅರ್ಜುನ್ ಸಿನಿಮಾ ಮುಗಿದ ಬಳಿಕ ಎಲ್‌ಸಿಯು

ಖ್ಯಾತ ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಈಗ ನಟನಾಗಿ ಬದಲಾಗಿದ್ದಾರೆ. ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಡಿಸಿ’ ಸಿನಿಮಾ ಜುಲೈ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಲೋಕೇಶ್ ತಮ್ಮ ‘ಲೋಕೇಶ್ ಸಿನಿಮಾ ಯೂನಿವರ್ಸ್’ ಬಗ್ಗೆ ದೊಡ್ಡ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ನಟನೆಯಲ್ಲಿ ಬ್ಯುಸಿ ಇರುವುದರಿಂದ ಎಲ್ಲರೂ ಇದು ಕ್ಲೋಸ್ ಆಯಿತು ಎಂದೇ ಭಾವಿಸಿದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಂತೆ ಆಗಿದೆ.

ಎಲ್‌ಸಿಯು ಮುಗಿದಿಲ್ಲ

ಲೋಕೇಶ್ ಕನಗರಾಜ್ ಅವರ ಸಿನಿಮಾಗಳ ಸರಣಿಯನ್ನು ‘ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್’ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಈ ಸರಣಿ ಬಂದ್ ಆಗಲಿದೆ ಎಂದು ವದಂತಿ ಹಬ್ಬಿತ್ತು. ಆದರೆ ಲೋಕೇಶ್ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಾವು ಎಲ್‌ಸಿಯು ಅನ್ನು ಎಂದಿಗೂ ಮುಚ್ಚುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ಎಲ್‌ಸಿಯು ಎಂಬ ಹೆಸರನ್ನು ಅಭಿಮಾನಿಗಳೇ ಇಟ್ಟಿದ್ದಾರೆ. ನಾನು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಸ್ವಂತ ಪ್ರೊಡಕ್ಷನ್ ಹೌಸ್ ಮುಚ್ಚಿದರೂ ಎಲ್‌ಸಿಯು ಮುಚ್ಚಲ್ಲ’ ಎಂದು ಲೋಕೇಶ್ ಕನಗರಾಜ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಮುಂದಿನ ಸಾಲು ಸಾಲು ಚಿತ್ರಗಳು

ಲೋಕೇಶ್ ಕನಗರಾಜ್ ಅವರು ಎಲ್‌ಸಿಯು ಸರಣಿಯಲ್ಲಿ ಹಲವು ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಈ ಸರಣಿಯಲ್ಲಿ ಕಾರ್ತಿ ನಟನೆಯ ‘ಕೈದಿ 2’, ಕಮಲ್ ಹಾಸನ್ ನಟನೆಯ ‘ವಿಕ್ರಮ್ 2’, ಸೂರ್ಯ ಅವರ ‘ರೋಲೆಕ್ಸ್’, ಇದೇ ಯೂನಿವರ್ಸ್ ಅಡಿಯಲ್ಲಿ ಬರಲಿದೆ. ಲೋಕೇಶ್ ನಿರ್ಮಾಣದ ‘ಬೆಂಜ್’ ಸಿನಿಮಾ ಕೂಡ ರೆಡಿ ಆಗುತ್ತಿದೆ. ಈ ಬ್ಗಗೆ ಅವರೇ ಮಾಹಿತಿ ನೀಡಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾ ಬಳಿಕ ಎಲ್‌ಸಿಯು

ಲೋಕೇಶ್ ಕನಕರಾಜ್ ಸದ್ಯದಲ್ಲೇ ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಮುಗಿದ ತಕ್ಷಣ ಲೋಕೇಶ್ ಮತ್ತೆ ಎಲ್‌ಸಿಯು ಚಿತ್ರಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ:  ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?

‘ಕೈದಿ’, ‘ವಿಕ್ರಮ್’ ಮತ್ತು ‘ಲಿಯೋ’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಎಲ್‌ಸಿಯು ಸರಣಿ ಮುಂದೆಯೂ ಮುಂದುವರಿಯಲಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 am, Tue, 7 July 26

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'