AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamal haasan: ಕಮಲ್ ಹಾಸನ್ ಚಿತ್ರರಂಗ ಪ್ರವೇಶಿಸಿ 62 ವರ್ಷ; ‘ವಿಕ್ರಮ್’ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ

Vikram New Poster: ಬಹುಭಾಷಾ ಕಲಾವಿದ ಕಮಲ್ ಹಾಸನ್ ಚಿತ್ರರಂಗಕ್ಕೆ ಪ್ರವೇಶಿಸಿ 62 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ‘ವಿಕ್ರಮ್’ ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಕಮಲ್​ಗೆ ಶುಭಾಶಯ ಕೋರಿದೆ.

Kamal haasan: ಕಮಲ್ ಹಾಸನ್ ಚಿತ್ರರಂಗ ಪ್ರವೇಶಿಸಿ 62 ವರ್ಷ; ‘ವಿಕ್ರಮ್’ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ
ಲೋಕೇಶ್ ಕನಗರಾಜ್ ಮತ್ತು ವಿಕ್ರಮ್(ಎಡ ಚಿತ್ರ), ವಿಕ್ರಮ್ ನೂತನ ಪೋಸ್ಟರ್ (ಬಲ ಚಿತ್ರ)
TV9 Web
| Updated By: shivaprasad.hs|

Updated on: Aug 12, 2021 | 12:27 PM

Share

ಬಹುಭಾಷಾ ಕಲಾವಿದ, ಕನ್ನಡದಲ್ಲೂ ನಟಿಸಿರುವ ತಮಿಳು ನಟ ಕಮಲ್ ಹಾಸನ್  ಚಿತ್ರರಂಗಕ್ಕೆ ಕಾಲಿಟ್ಟು 62 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಅವರು ನಟಿಸುತ್ತಿರುವ ‘ವಿಕ್ರಮ್’ ಚಿತ್ರತಂಡ ಹೊಸ ಪೋಸ್ಟರ್ ಮುಖಾಂತರ ಶುಭಾಶಯವನ್ನು ಕೋರಿದೆ. ‘ವಿಕ್ರಮ್’ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದು, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಸೇರಿದಂತೆ ಖ್ಯಾತ ನಟರ ದಂಡೇ ಚಿತ್ರದಲ್ಲಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಟ್ವಿಟರ್​ನಲ್ಲಿ ಕಮಲ್ ಹಾಸನ್​ಗೆ ಶುಭ ಕೋರಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.  ‘ಒನ್ಸ್ ಎ ಲಯನ್, ಆಲ್ವೇಸ್ ಎ ಲಯನ್’(Once a lion always a lion) ಎಂದು ಬರೆದುಕೊಂಡ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್ ತಮ್ಮ ಐದನೇ ವರ್ಷದಿಂದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಈಗ ಅವರು ಚಿತ್ರರಂಗಕ್ಕೆ ಕಾಲಿಟ್ಟು ಆರು ದಶಕಗಳೇ ಕಳೆದಿದೆ. ಪ್ರತೀ ಚಿತ್ರದಿಂದ ಚಿತ್ರಕ್ಕೆ ಹೊಸತನದೆಡೆಗೆ ತುಡಿಯುವ ಕಮಲ್ ಹಾಸನ್ ಈಗ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ಲೋಕೇಶ್ ಕಮಲ್ ಅವರಿಗೆ ಶುಭ ಹಾರೈಸಿದ್ದು, ತಮ್ಮ ಸಿನಿಮಾಗಳಿಂದ ಎಲ್ಲರನ್ನೂ ಪ್ರೇರೇಪಿಸುತ್ತಿರಿ ಎಂದು ಬರೆದು, ವಿಕ್ರಮ್ ಚಿತ್ರದ ಹೊಸ ಪೋಸ್ಟರ್​ ಒಂದನ್ನು ಹಂಚಿಕೊಂಡಿದ್ದಾರೆ. ಲೋಕೇಶ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ.

ಸದ್ಯ ‘ವಿಕ್ರಮ್’ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ. ಈ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ.  ಜಲ್ಲಿಕಟ್ಟು ಸಿನಿಮಾದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ಗಿರೀಶ್​ ಗಂಗಾಧರನ್​ ಈ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​​​ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಇತ್ತೀಚೆಗಷ್ಟೇ ಕಾಳಿದಾಸ್ ಜಯರಾಮನ್ ಚಿತ್ರತಂಡ ಸೇರಿಕೊಂಡಿದ್ದರು. ಅವರು ಕಮಲ್ ಹಾಸನ್ ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ:

Vikram First Look: ವಿಕ್ರಮ್​ ಪೋಸ್ಟರ್​ನಲ್ಲಿ ಮೂರು ಸ್ಟಾರ್​ಗಳ ಸಮಾಗಮ; ಭಯ ಹುಟ್ಟಿಸುತ್ತಿದೆ ಹೊಸ ಪೋಸ್ಟರ್​

ಅರವಿಂದ್​ ಸೋಲಿಗೆ ದಿವ್ಯಾ ಕಾರಣ? ಉರುಡುಗ ತಲೆಯಲ್ಲಿ ಹೀಗೊಂದು ಪ್ರಶ್ನೆ

(Lokesh Kanagaraj wishes Kamal Hassan for completing 62 years in industry with a Vikram Poster)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ