‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

| Updated By: ಮದನ್​ ಕುಮಾರ್​

Updated on: Jan 12, 2022 | 2:47 PM

Dr Silambarasan: ವೇಲ್ಸ್​ ವಿಶ್ವವಿದ್ಯಾಲಯವು ಸಿಂಬುಗೆ ಗೌರವ ಡಾಕ್ಟರೇಟ್​ ಪದವಿ ನೀಡಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಿಂಬು ಈ ಗೌರವ ಸ್ವೀಕರಿಸಿದರು.

‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?
ಸಿಂಬು
Follow us on

ಕಳೆದ ವರ್ಷ ‘ಮಾನಾಡು’ (Maanadu Movie) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಆ ಸಿನಿಮಾದಿಂದ ನಟ ಸಿಂಬು (Simbu) ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಹಲವು ವರ್ಷಗಳಿಂದ ಬಿಗ್​ ಬ್ರೇಕ್​ಗಾಗಿ ಕಾದಿದ್ದ ಅವರಿಗೆ ‘ಮಾನಾಡು’ ಸಿನಿಮಾ ನಿರೀಕ್ಷಿತ ಫಲ ನೀಡಿತು. ಈಗ ಸಿಂಬು ಮುಡಿಗೆ ಇನ್ನೊಂದು ಗರಿ ಸೇರಿಕೊಂಡಿದೆ. ಅವರಿಗೆ ಗೌರವ ಡಾಕ್ಟರೇಟ್​ (Honorary Doctorate) ಸಿಕ್ಕಿದೆ. ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಈಗ ಗೌರವ ನೀಡಲಾಗಿದೆ. ಇನ್ಮುಂದೆ ಅವರು ಡಾ. ಸಿಂಬು! ಈ ವಿಶೇಷ ಗೌರವ ಸ್ವೀಕರಿಸಿರುವ ಅವರ ಫೋಟೋಗಳು ಈಗ ವೈರಲ್​ ಆಗಿವೆ. ಅಭಿಮಾನಿಗಳು, ಸ್ನೇಹಿತರು ಮತ್ತು ಅನೇಕ ಸೆಲೆಬ್ರಿಟಿಗಳು ಸಿಂಬುಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ವೇಲ್ಸ್​ ವಿಶ್ವವಿದ್ಯಾಲಯವು ಸಿಂಬುಗೆ ಗೌರವ ಡಾಕ್ಟರೇಟ್​ ಪದವಿ ನೀಡಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಿಂಬು ಈ ಗೌರವ ಸ್ವೀಕರಿಸಿದರು. ‘ಈ ದೊಡ್ಡ ಗೌರವವನ್ನು ನಾನು ತಮಿಳು ಚಿತ್ರರಂಗಕ್ಕೆ ಹಾಗೂ ನನ್ನ ತಂದೆ-ತಾಯಿಗೆ ಅರ್ಪಿಸುತ್ತೇನೆ. ಅವರಿಂದಲೇ ನಾನು ಸಿನಿಮಾರಂಗದಲ್ಲಿ ಬೆಳೆಯಲು ಸಾಧ್ಯವಾಯಿತು. ಅಂತಿಮವಾಗಿ ನನ್ನ ಅಭಿಮಾನಿಗಳು. ಅವರಿಲ್ಲದೇ ನಾನಿಲ್ಲ’ ಎಂದು ಸಿಂಬು ಟ್ವೀಟ್​ ಮಾಡಿದ್ದಾರೆ.

ಚಿತ್ರರಂಗದಲ್ಲಿ ಸಿಂಬು ಸಾಧನೆಗಳೇನು?

ಬಾಲನಟನಾಗಿಯೇ ಚಿತ್ರರಂಗಕ್ಕೆ ಸಿಂಬು ಕಾಲಿಟ್ಟರು. ಸಿನಿಮಾ ಕ್ಷೇತ್ರದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. 1980ರ ದಶಕದಿಂದಲೂ ಅವರು ಬಣ್ಣದ ಲೋಕದ ನಂಟು ಹೊಂದಿದ್ದಾರೆ. ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. 20ರ ಪ್ರಾಯಕ್ಕೂ ಮುನ್ನವೇ ಅವರು ಹೀರೋ ಆದರು. 21ನೇ ವಯಸ್ಸಿಗೆ ‘ಮನ್ಮಥಂ’ ಚಿತ್ರದ ಸ್ಕ್ರಿಪ್ಟ್​ ಬರೆದು, ನಿರ್ದೇಶನ ವಿಭಾಗದ ಮೇಲ್ವಿಚಾರಣೆ ನೋಡಿಕೊಂಡರು. ಆ ಚಿತ್ರ ಸೂಪರ್​ ಹಿಟ್​ ಆಯಿತು. ನಟನಾಗಿ ಅವರ ವೃತ್ತಿಜೀವನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಕೈತುಂಬ ಆಫರ್​ ಇಟ್ಟುಕೊಂಡು, ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಎಲ್ಲರೂ ತೊಂದರೆ ಕೊಡ್ತಿದ್ದಾರೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಟಾರ್​ ನಟ ಸಿಂಬು

85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?