ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರು ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಫ್ಯಾಮಿಲಿಗಾಗಿ ಸಮಯ ಮೀಸಲಿಡುವುದನ್ನು ತಪ್ಪಿಸುವುದಿಲ್ಲ. ಈಗ ಪುತ್ರ ಗೌತಮ್ ಘಟ್ಟಮನೇನಿಯ ಸ್ಪೆಷಲ್ ದಿನದಲ್ಲಿ ಮಹೇಶ್ ಬಾಬು ಅವರು ಭಾಗಿ ಆಗಿದ್ದಾರೆ. ಹೌದು, ಗೌತಮ್ ಘಟ್ಟಮನೇನಿ (Gautam Ghattamaneni) ಪದವಿ ಶಿಕ್ಷಣ ಪೂರೈಸಿದ್ದಾರೆ. ಪುತ್ರನ ಕಾನ್ವಕೇಷನ್ ದಿನದಲ್ಲಿ ಮಹೇಶ್ ಬಾಬು ಅವರು ಕುಟುಂಬ (Mahesh Babu Family) ಸಮೇತರಾಗಿ ಹಾಜರಿ ಹಾಕಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಮಗನ ಬಗ್ಗೆ ಹೆಮ್ಮೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮಕ್ಕಳು ಸಾಧನೆ ಮಾಡಿದಾಗ ತಂದೆ-ತಾಯಿಗೆ ಎಲ್ಲಿಲ್ಲದ ಖುಷಿ ಆಗುತ್ತದೆ. ಆ ಖುಷಿಯ ಕ್ಷಣವನ್ನು ಮಹೇಶ್ ಬಾಬು ಕೂಡ ಮಿಸ್ ಮಾಡಿಕೊಳ್ಳುವವರಲ್ಲ. ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ಪದವಿ ಶಿಕ್ಷಣ ಮುಗಿಸಿದ್ದಾರೆ. ಆ ಪ್ರಯುಕ್ತ ನಡೆದ ಕಾನ್ವಕೇಷನ್ ಸಮಾರಂಭದಲ್ಲಿ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್, ಮಗಳು ಸಿತಾರಾ ಘಟ್ಟಮನೇನಿ ಕೂಡ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್ ಬಾಬು ಲುಕ್ ಬಹಿರಂಗ
ಗೌತಮ್ ಘಟ್ಟಮನೇನಿ ಜೊತೆ ಸಿತಾರಾ, ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮನೆಮಗನ ಬಗ್ಗೆ ಎಲ್ಲರೂ ಹೆಮ್ಮೆಯಿಂದ ಮಾತನಾಡಿದ್ದಾರೆ. ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಮತ್ತು ಆಪ್ತರು ಕೂಡ ಗೌತಮ್ ಘಟ್ಟಮನೇನಿಗೆ ಅಭಿನಂದನೆ ತಿಳಿಸಿದ್ದಾರೆ.
ಸಿನಿಮಾ ಬಗ್ಗೆ ಹೇಳುವುದಾದರೆ, ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ಸಕಲ ತಯಾರಿ ನಡೆದಿದೆ. ಇದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಎಸ್ಎಸ್ಎಂಬಿ 29’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಗೆಟಪ್ ಬದಲಾಗಲಿದೆ. ಅದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ಆದ್ದರಿಂದ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ. ಆದಷ್ಟು ಬೇಗ ಈ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.