ಪ್ರಮುಖ ದೃಶ್ಯ ಶೂಟ್ ಮಾಡಲು ಒಡಿಶಾಗೆ ಹಾರಿದ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ

ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅವರು ರಾಜಮೌಳಿ ನಿರ್ದೇಶನದ 'SSMB29' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೈದರಾಬಾದ್ ನಂತರ ಚಿತ್ರತಂಡ ಒಡಿಶಾಕ್ಕೆ ತೆರಳಿದೆ. ಅಲ್ಲಿ 12 ದಿನಗಳ ಚಿತ್ರೀಕರಣ ನಡೆಯಲಿದೆ. ಏಪ್ರಿಲ್‌ನಲ್ಲಿ ಚಿತ್ರದ ಅಧಿಕೃತ ಘೋಷಣೆ ಮತ್ತು ಟೀಸರ್ ಬಿಡುಗಡೆ ನಿರೀಕ್ಷಿಸಲಾಗಿದೆ .

ಪ್ರಮುಖ ದೃಶ್ಯ ಶೂಟ್ ಮಾಡಲು ಒಡಿಶಾಗೆ ಹಾರಿದ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ-ಮಹೇಶ್ ಬಾಬು

Updated on: Mar 06, 2025 | 10:34 AM

ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರು ‘SSMB29’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ರಾಜಮೌಳಿ (SS Rajamouli) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಅಧಿಕೃತ ಘೋಷಣೆ ಇನ್ನೂ ಆಗದೇ ಇದ್ದರೂ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಮೊದಲ ಹಂತದ ಶೂಟ್ ಹೈದರಾಬಾದ್​ನಲ್ಲೇ ನಡೆದಿದೆ. ಎರಡನೇ ಹಂತದ ಶೂಟ್​ಗಾಗಿ ಇಡೀ ತಂಡ ಒಡಿಶಾಗೆ ತೆರಳಿದೆ. ಪ್ರಮುಖ ದೃಶ್ಯಗಳ ಶೂಟ್ ಇಲ್ಲಿ ನಡೆಯಲಿದೆ ಎಂದು ವರದಿ ಆಗಿದೆ.

ರಾಜಮೌಳಿ ಅವರು ಪ್ರತಿ ಸಿನಿಮಾ ಮಾಡುವ ಮೊದಲು ಅಧಿಕೃತ ಘೋಷಣೆ ಮಾಡುತ್ತಾರೆ. ಆದರೆ, ಈ ಬಾರಿ ಅವರು ಯಾವುದೇ ಮಾಹಿತಿ ನೀಡದೇ ಶೂಟ್ ಆರಂಭಿಸಿದ್ದಾರೆ. ಹೈದರಾಬಾದ್​ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಮೊದಲ ಹಂತದ ಶೂಟ್ ಮಾಡಿದ್ದ ಅವರು, ಈಗ ಒಡಿಶಾದಲ್ಲಿ ಶೂಟ್ ಮಾಡೋಕೆ ರೆಡಿ ಆಗಿದ್ದಾರೆ.

ಒಡಿಶಾದ ಕೊರಾಪುಟ್ ಎಂಬಲ್ಲಿ ಮುಂದಿನ 12 ದಿನ ಚಿತ್ರೀಕರಣ ನಡೆಯಲಿದೆ. ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ. ಇವೆಲ್ಲವೂ ಪ್ರಮುಖ ದೃಶ್ಯಗಳೇ ಆಗಿವೆ ಎನ್ನಲಾಗಿದೆ. ಹಾಲಿವುಡ್​ನಲ್ಲಿ ಸೆಟಲ್ ಆಗಿರೋ ಪ್ರಿಯಾಂಕಾ ಚೋಪ್ರಾ, ಈ ಸಿನಿಮಾದ ಶೂಟ್​ಗಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ
ಮಹೇಶ್ ಬಾಬು-ರಾಜಮೌಳಿ ಬಗ್ಗೆ ಅಪ್ಸೆಟ್​ ಆದ ಅಭಿಮಾನಿಗಳು; ಕಾರಣ ಏನು?
ಆಫರ್ ಸಿಗದೇ ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ? ಇದರಲ್ಲಿ ಸತ್ಯ ಎಷ್ಟು?
ಮಹೇಶ್ ಬಾಬು ಜೊತೆಗಿನ ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಪ್ರಿಯಾಂಕಾ?
ಎರಡು ಭಾಗದಲ್ಲಿ ಬರಲಿದೆ ಮಹೇಶ್​ಬಾಬು-ರಾಜಮೌಳಿ ಸಿನಿಮಾ; ಅಭಿಮಾನಿಗಳಿಗೆ ಬೇಸರ

ಏಪ್ರಿಲ್​ನಲ್ಲಿ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರದ ಹೈಪ್ ಹೆಚ್ಚಿಸೋ ಆಲೋಚನೆ ತಂಡದ್ದು. ಇದಾದ ಬಳಿಕ ಕೀನಾ ಹಾಗೂ ದಕ್ಷಿಣ ಆಫ್ರಿಕಾದ ವಿವಿಧ ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಕಾಡುಗಳಲ್ಲಿ ಈ ಚಿತ್ರದ ಅಡ್ವೆಂಚರ್ ನಡೆಯಲಿದೆ.

ರಾಜಮೌಳಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ‘ಆರ್​ಆರ್​ಆರ್​’ ಚಿತ್ರದಲ್ಲಿ ರಾಜಮೌಳಿ ಆಸ್ಕರ್ ಕೂಡ ಗೆದ್ದು ಸದ್ದು ಮಾಡಿದರು. ಹೀಗಾಗಿ, ಹಾಲಿವುಡ್​ನಲ್ಲಿ ಅವರಿಗೆ ಮಾರುಕಟ್ಟೆ ಸೃಷ್ಟಿ ಆಗಿದೆ. ಕೆಎಲ್ ನಯನ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.
ಇದನ್ನೂ ಓದಿ:

Published On - 8:42 am, Thu, 6 March 25