ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ ನಟಿಸಿದ ಮೊದಲ ವಿಡಿಯೋ ವೈರಲ್

|

Updated on: Mar 21, 2025 | 2:26 PM

ಯುವತಿಯ ಜೊತೆ ಗೌತಮ್ ಘಟ್ಟಮನೇನಿ ಕುಳಿತು ಮಾತನಾಡುತ್ತಿರುವ ದೃಶ್ಯ ಈ ವೈರಲ್ ವಿಡಿಯೋದಲ್ಲಿದೆ. ಗೌತಮ್ ನಟನೆ ಕಂಡು ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಮಹೇಶ್ ಬಾಬು ಮಗನ ಅಭಿನಯಕ್ಕೆ ಟೀಕೆ ಸಹ ವ್ಯಕ್ತವಾಗಿದೆ. ಆದರೆ ಅಪ್ಪಟ ಅಭಿಮಾನಿಗಳು ಭರಪೂರ ಹೊಗಳುತ್ತಿದ್ದಾರೆ.

ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ ನಟಿಸಿದ ಮೊದಲ ವಿಡಿಯೋ ವೈರಲ್
Gautam Ghattamaneni
Follow us on

ನಟ ಮಹೇಶ್ ಬಾಬು ಅವರದ್ದು ಕಲಾವಿದರ ಕುಟುಂಬ. ಮಹೇಶ್ ಬಾಬು ತಂದೆ ಕೃಷ್ಣ ಅವರು ಸ್ಟಾರ್​ ನಟನಾಗಿದ್ದರು. ಬಳಿಕ ಮಹೇಶ್ ಬಾಬು ಅವರು ಆ ಪರಂಪರೆ ಮುಂದುವರಿಸಿದರು. ಭವಿಷ್ಯದಲ್ಲಿ ಮಹೇಶ್ ಬಾಬು ಮಕ್ಕಳು ಕೂಡ ಚಿತ್ರರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ. ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ಈಗಾಗಲೇ ಮಾಡೆಲಿಂಗ್, ಸಂದರ್ಶನ, ಡ್ಯಾನ್ಸ್ ಮೂಲಕ ಗುರುತಿಸಿಕೊಂಡಿದ್ದಾರೆ. ಮಗ ಗೌತಮ್ ಘಟ್ಟಮನೇನಿ ನಟನೆಯ ಪಾಠ ಕಲಿಯುತ್ತಿದ್ದಾರೆ. ಈಗ ಅವರ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಗೌತಮ್ ನಟನೆ ನೋಡಿ ಜನರು ಕಮೆಂಟ್ ಮಾಡುತ್ತಿದ್ದಾರೆ.

ಯುವತಿಯೊಬ್ಬಳ ಜೊತೆ ರೆಸ್ಟೋರೆಂಟ್​ನಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯದಲ್ಲಿ ಗೌತಮ್ ಘಟ್ಟಮನೇನಿ ನಟಿಸಿದ್ದಾರೆ. ಈ ವೇಳೆ ಯುವತಿಯ ಜೊತೆ ಜಗಳ ಆಗುತ್ತದೆ. ಈ ದೃಶ್ಯದಲ್ಲಿ ನಟಿಸಿದ ಅವರನ್ನು ಕಂಡು ಕೆಲವರಿಗೆ ಇಷ್ಟ ಆಗಿದೆ. ಆದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ. ಇದು ಏನೆಂಬುದೇ ಅರ್ಥ ಆಗಿಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ
ತನಗಿಂತಲೂ ಕಿರಿಯ ನಟನ ಅಪ್ಪಟ ಅಭಿಮಾನಿಯಂತೆ ಸೂಪರ್ ಸ್ಟಾರ್ ಮಹೇಶ್ ಬಾಬು
ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹೆಸರು ಫಿಕ್ಸ್
ಮಹೇಶ್ ಬಾಬು-ರಾಜಮೌಳಿ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪೃಥ್ವಿರಾಜ್
ಕೊನೆಗೂ ಶುರುವಾಯ್ತು ರಾಜಮೌಳಿ-ಮಹೇಶ್ ಬಾಬು ಸಿನಿಮಾ

ಸ್ಟಾರ್​ ಕಲಾವಿದರ ಮಕ್ಕಳಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ಬಾಲಿವುಡ್​​ನಲ್ಲಿ ಶ್ರೀದೇವಿ ಮಕ್ಕಳಾದ ಜಾನ್ವಿ ಕಪೂರ್​ ಮತ್ತು ಖುಷಿ ಕಪೂರ್ ಅವರಿಗೆ ಸಾಲು ಸಾಲು ಅವಕಾಶಗಳು ಸಿಕ್ಕಿವೆ. ಶ್ರೀದೇವಿ 2ನೇ ಮಗಳು ಖುಷಿ ಕಪೂರ್​ ನಟಿಸಿದ ‘ನಾದಾನಿಯಾ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಅದರಲ್ಲಿ ಅವರ ನಟನೆಗೆ ಸಿಕ್ಕಾಪಟ್ಟೆ ಟೀಕೆ ಎದುರಾಯಿತು. ಗೌತಮ್ ಘಟ್ಟಮನೇನಿ ನಟನೆ ಕೂಡ ಖುಷಿ ಕಪೂರ್ ರೀತಿ ಇದೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ

‘ಹೀರೋ ಎಂಬ ಫೀಲ್ ಇಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ. ಆದರೆ ಮಹೇಶ್ ಬಾಬು ಫ್ಯಾಮಿಲಿಯ ಅಪ್ಪಟ ಅಭಿಮಾನಿಗಳಿಂದ ಹೊಗಳಿಕೆ ಸಿಕ್ಕಿದೆ. ‘ಗೌತಮ್ ನಟನೆ ಚೆನ್ನಾಗಿದೆ. ಅವರು ಭವಿಷ್ಯದಲ್ಲಿ ಒಳ್ಳೆಯ ನಟ ಆಗುತ್ತಾರೆ’ ಎಂದು ಅಭಿಮಾನಿಗಳು ಹೊಗಳಿದ್ದಾರೆ. ಅದೇನೇ ಇರಲಿ, ಸದ್ಯಕ್ಕಂತೂ ಗೌತಮ್ ಅವರು ಸಿನಿಮಾಗೆ ಎಂಟ್ರಿ ನೀಡುವುದಿಲ್ಲ. ವಿದ್ಯಾಭ್ಯಾಸ ಮುಗಿಸಿ, ಹೀರೋ ಆಗಿ ಬಣ್ಣ ಹಚ್ಚಲು 3-4 ವರ್ಷ ಬೇಕಾಗಲಿದೆ. ‘ಗೌತಮ್ ಚಿತ್ರರಂಗಕ್ಕೆ ಬರುವುದು ಖಚಿತ’ ಎಂದು ಈ ಮೊದಲಿನ ಸಂದರ್ಶನದಲ್ಲಿ ಸಿತಾರಾ ಘಟ್ಟಮನೇನಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.